MS Dhoni Net Worth: ಕ್ರಿಕೆಟ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ರ್ಯಾಂಡ್ ಮೌಲ್ಯ ಇನ್ನೂ ಹಾಗೇ ಇದೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಸಂಪತ್ತು ಮಾತ್ರ ಕುಬೇರನಂತೆ ಹೆಚ್ಚಾಗುತ್ತಿದೆ. ಜಾರ್ಖಂಡ್‌ನ ಅತಿದೊಡ್ಡ ಆದಾಯ ತೆರಿಗೆ ಪಾವತಿದಾರರಲ್ಲಿ ಧೋನಿ ಮತ್ತೊಮ್ಮೆ ಸ್ಥಾನ ಪಡೆಯಲು ಇದು ಕಾರಣವಾಗಿದೆ. ಮಾಧ್ಯಮ ವರದಿಗಳ ಪ್ರಕಾಜಾರ್ಖಂಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ವ್ಯಕ್ತಿ ಧೋನಿ ಎಂದು ರ, ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಮಹೇಂದ್ರ ಸಿಂಗ್ ಧೋನಿ ಆದಾಯ ಸ್ಥಿರವಾಗಿ ಉಳಿಯುವ ನಿರೀಕ್ಷೆ ಇದೆ.


COMMERCIAL BREAK
SCROLL TO CONTINUE READING

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವದ ಮೂರನೇ ಶ್ರೀಮಂತ ಕ್ರಿಕೆಟಿಗ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಸಾಲಿಗೆ ಮಹೇಂದ್ರ ಸಿಂಗ್ ಧೋನಿ ಸಹ ಸೇರುತ್ತಾರೆ. 2023ರ ಐಪಿಎಲ್ ಆವೃತ್ತಿಯಲ್ಲಿಯೂ ಕೂಲ್‌ ಕ್ಯಾಪ್ಟನ್‌ ಪ್ರತಿ ಪಂದ್ಯದ ಸಂಭಾವನೆ ಅತಿ ಹೆಚ್ಚಾಗಿದೆ.  


ಇದನ್ನೂ ಓದಿ : ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಆಟಗಾರ ಯಾರು ಗೊತ್ತಾ? ಗೆಸ್ ಮಾಡಿ ನೋಡೋಣ!


15 ಆಗಸ್ಟ್ 2020 ರಂದು, ಧೋನಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು. ವರದಿಯ ಪ್ರಕಾರ, ಧೋನಿ ಪ್ರತಿ ತಿಂಗಳು ಸುಮಾರು 4 ಕೋಟಿ ರೂಪಾಯಿ ಮತ್ತು ಪ್ರತಿ ವರ್ಷ ಸುಮಾರು 50 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ತನ್ನ 2021 ರ ವರದಿಯಲ್ಲಿ, WION ಧೋನಿಯ ಒಟ್ಟು ಆಸ್ತಿಯ ಮೌಲ್ಯವನ್ನು 819 ಕೋಟಿ ರೂ. ಎಂದು ವರದಿ ಮಾಡಿತ್ತು. 


ಎಂಎಸ್ ಧೋನಿ ಹಲವು ಬ್ರಾಂಡ್‌ಗಳ ರಾಯಭಾರಿಯಾಗಿದ್ದಾರೆ. ಅವರು ಎಂಟು ವರ್ಷಗಳ ಕಾಲ ರೀಬಾಕ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಅವರು ISL ಫುಟ್‌ಬಾಲ್ ಕ್ಲಬ್ ಚೆನ್ನೈಯನ್ ಎಫ್‌ಸಿಯ ಸಹ-ಮಾಲೀಕರಾಗಿದ್ದಾರೆ. 2018 ರಲ್ಲಿ, ಧೋನಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದರು.
 
ಐಪಿಎಲ್‌ನ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿ ಈ ಕ್ರಿಕೆಟ್‌ ಲೀಗ್‌ನಿಂದಲೂ ಸಾಕಷ್ಟು ಹಣ ಗಳಿಸುತ್ತಾರೆ. ಫ್ರಾಂಚೈಸಿಯು 12 ಕೋಟಿ ರೂಪಾಯಿಗಳಿಗೆ ಧೋನಿ ಅವರನ್ನು ರಿಟೈನ್‌ ಮಾಡಿಕೊಂಡಿತ್ತು. ಹೀಗಾಗಿ ಐಪಿಎಲ್ 2023ರಲ್ಲಿಯೂ ಧೋನಿ ಅವರ ಪ್ರತಿ ಪಂದ್ಯದ ಸಂಭಾವನೆ ಅತಿ ದೊಡ್ಡ ಮೊತ್ತದಲ್ಲಿದೆ. ಇದು ಕೂಡ ಅವರ ಸಂಪತ್ತಿನ ಏರಿಕೆಗೆ ಒಂದು ಕಾರಣವಾಗಿದೆ. 


ಇದನ್ನೂ ಓದಿ : "ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಬಹುದು"


ಐಪಿಎಲ್‌ನಲ್ಲಿ ಒಟ್ಟು 74 ಪಂದ್ಯಗಳಿರುತ್ತವೆ. ಎಲ್ಲಾ 10 ತಂಡಗಳು ತಲಾ 14 ಪಂದ್ಯಗಳನ್ನಾಡುತ್ತವೆ. ಅಂತೆಯೇ ಚೆನ್ನೈ ಸೂಪರ್‌ ಕಿಂಗ್ಸ್‌ ಕೂಡ 14 ಪಂದ್ಯಗಳನ್ನು ಆಡಲಿದೆ. ಐಪಿಎಲ್‌ 2023ರ ಆವೃತ್ತಿಯಲ್ಲಿ ಧೋನಿ ಅವರ ಪ್ರತಿ ಪಂದ್ಯದ ಸಂಭಾವನೆ ಸರಿಸುಮಾರು 85.71 ಲಕ್ಷ ರೂಪಾಯಿ ಎಂದು ಅನೇಕ ವರದಿಗಳು ಹೇಳುತ್ತಿವೆ. 


ಐಪಿಎಲ್‌ನ ಕಳೆದ 15 ಆವೃತ್ತಿಗಳಲ್ಲಿ ಸಿಎಸ್‌ಕೆ ತಂಡದ ನಾಯಕರಾಗಿ ರಿಟೆನ್ಶನ್ ಶುಲ್ಕದಿಂದ 176 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಅಂದಾಜಿಸಬಹುದು ಅಂತ ಅನೇಕ ವರದಿಗಳು ತಿಳಿಸಿವೆ. ಇದಲ್ಲದೆ, ವರದಿಗಳ ಪ್ರಕಾರ, ಹೂಡಿಕೆಗಳು ಮತ್ತು ವ್ಯವಹಾರಗಳಿಂದ ಒಟ್ಟು 900 ಕೋಟಿ ರೂಪಾಯಿಯನ್ನು ಧೋನಿ ಸಂಪಾದಿಸುತ್ತಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.