MS Dhoni fitness band: ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಐಪಿಎಲ್ 2024ರಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ. ಧೋನಿ ಈ ವರ್ಷ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತಿ ಹೊಂದಲಿದ್ದಾರೆ‌ ಎನ್ನಲಾಗ್ತಿದೆ. IPL 2024 ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ದುಬೈನಲ್ಲಿ ರಜೆಯಲ್ಲಿದ್ದ ಧೋನಿ ಇದೀಗ ಐಪಿಎಲ್ ಪಂದ್ಯಗಳಿಗಾಗಿ ಪ್ರ್ಯಾಕ್ಟೀಸ್ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಜಿಮ್‌ನಲ್ಲಿರುವ ಧೋನಿ ಫೋಟೋ ವೈರಲ್‌ ಆಗಿತ್ತು. ಅದರಲ್ಲಿ ಧೋನಿ ವಿಭಿನ್ನ ಫಿಟ್‌ನೆಸ್ ಬ್ಯಾಂಡ್ ಧರಿಸಿದ್ದರು.


COMMERCIAL BREAK
SCROLL TO CONTINUE READING

ಧೋನಿ WHOOP Band 4.0 ಎಂಬ ಫಿಟ್ನೆಸ್ ಬ್ಯಾಂಡ್ ಧರಿಸುತ್ತಾರೆ. ಈ ಫಿಟ್ನೆಸ್ ಟ್ರ್ಯಾಕರ್ ಸಾಮಾನ್ಯ ಸ್ಮಾರ್ಟ್ ವಾಚ್‌ಗಳಲ್ಲಿ ಕಂಡುಬರದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. WHOOP ಬ್ಯಾಂಡ್ ಆರೋಗ್ಯ, ವ್ಯಾಯಾಮ ಮತ್ತು ಫಿಟ್‌ನೆಸ್‌ಗೆ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಈ ಬ್ಯಾಂಡ್ ನಮ್ಮ ನಿದ್ರೆ, ಒತ್ತಡ ಮತ್ತು ಆರೋಗ್ಯವನ್ನು ನಿಖರವಾಗಿ ಟ್ರ್ಯಾಕ್ ಮಾಡುತ್ತದೆ. ಅನೇಕ ವಿಜ್ಞಾನಿಗಳು ಮತ್ತು ವೈದ್ಯರು ಈ ಬ್ಯಾಂಡ್ ಅನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ ಎಂದು ಅದರ ಸಂಸ್ಥಾಪಕರು ಹೇಳುತ್ತಾರೆ.


ಇದನ್ನೂ ಓದಿ:  ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸಿದ್ದು ಇದೇ ಕಾರಣಕ್ಕೆ! ಕಡೆಗೂ ಸತ್ಯ ಬಿಚ್ಚಿಟ್ಟ ಕೋಚ್ 


ಈ WHOOP Smart Band ಮೊಬೈಲ್ ಅಪ್ಲಿಕೇಶನ್ ಮೂಲಕ ಬಳಸಬಹುದು. ಒಮ್ಮೆ ನೀವು ಈ ಬ್ಯಾಂಡ್ ಅನ್ನು ಧರಿಸಿದರೆ, ನಿಮ್ಮ ದೈನಂದಿನ ಚಟುವಟಿಕೆಗಳನ್ನು ಕೆಲವು ದಿನಗಳವರೆಗೆ ಟ್ರ್ಯಾಕ್ ಮಾಡುತ್ತದೆ. ನಂತರ ಅಪ್ಲಿಕೇಶನ್ ದೇಹಕ್ಕೆ ಬೇಕಾದುದನ್ನು ತೋರಿಸಲು ಪ್ರಾರಂಭಿಸುತ್ತದೆ. WHOOP ಬ್ಯಾಂಡ್ ಪ್ರತಿದಿನ ಹಲವಾರು ರೀತಿಯ ಡೇಟಾವನ್ನು ಟ್ರ್ಯಾಕ್ ಮಾಡುತ್ತದೆ. ಇದು ಹೃದಯ ಬಡಿತ, ದೈನಂದಿನ ನಿದ್ರೆಯ ಪ್ರಮಾಣ, ನೀವು ಎಷ್ಟು ಸಮಯ ಮಲಗಿದ್ದೀರಿ ಮತ್ತು ನಿಮ್ಮ ದೇಹಕ್ಕೆ ಇನ್ನೂ ಎಷ್ಟು ನೀರು ಬೇಕು ಎಂದು ಹೇಳುತ್ತದೆ. ಈ ಫಿಟ್ನೆಸ್ ಬ್ಯಾಂಡ್ ನೀವು ಪ್ರತಿದಿನ ಎಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೀರಿ ಎಂದು ಹೇಳುತ್ತದೆ.


ಧೋನಿ ಮಾತ್ರವಲ್ಲದೆ ಅನೇಕ ಕ್ರಿಕೆಟಿಗರು ಇದನ್ನು ಧರಿಸುತ್ತಾರೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಸೆಲೆಬ್ರಿಟಿಗಳು, ಭಾರತದ ಕೆಲವು ಉದ್ಯಮಿಗಳು ಮತ್ತು ಚಲನಚಿತ್ರ ತಾರೆಯರು ಇದನ್ನು ಧರಿಸಿದ್ದಾರೆ. ಈ ಬ್ಯಾಂಡ್ ಕ್ರೀಡಾಪಟುಗಳಿಗೆ ತುಂಬಾ ಸಹಾಯಕವಾಗಿದೆ. ಇದನ್ನು ಸ್ನಾನ ಮಾಡುವಾಗಲೂ ಸಹ ಕೈಗೆ ಕಟ್ಟಿಕೊಳ್ಳಬಹುದು.


ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಅಶ್ವಿನ್ ಮೋಡಿಗೆ ವಿಶ್ವದಾಖಲೆ ಸೃಷ್ಟಿ: ಕ್ರಿಕೆಟ್ ದಿಗ್ಗಜ ಭಾಗವತ್ ಚಂದ್ರಶೇಖರ್ ವಿಶ್ವದಾಖಲೆಯೂ ಬ್ರೇಕ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.