ನವದೆಹಲಿ : ಎಂಎಸ್ ಧೋನಿಯನ್ನು (MS Dhoni) ಎಷ್ಟು ಹೊಗಳಿದರು ಕಡಿಮೆಯೇ. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದು ಮಾತ್ರವಲ್ಲ, ಚೆನ್ನೈ ಸೂಪರ್ ಕಿಂಗ್ಸ್ (Chennai Super kings) 4 ಬಾರಿ ಐಪಿಎಲ್ ಚಾಂಪಿಯನ್ (IPL Champion)  ಆಗಿ ಹೊರಹೊಮ್ಮಿದೆ. ಆದರೆ ಮಾಹಿ ಮುಂದಿನ ಐಪಿಎಲ್ ಆಡುತ್ತಾರೋ ಇಲ್ಲವೋ ಎಂಬುದೇ ದೊಡ್ಡ ಪ್ರಶ್ನೆ. 


COMMERCIAL BREAK
SCROLL TO CONTINUE READING

ಈ 3 ಕಾರಣಗಳಿಂದ ಧೋನಿ ಶೀಘ್ರದಲ್ಲೇ ಸಿಎಸ್‌ಕೆ ನಾಯಕತ್ವ ತ್ಯಜಿಸಲಿದ್ದಾರೆ..!
ಮುಂದಿನ ವರ್ಷ ಐಪಿಎಲ್ ಹರಾಜು (IPL 2022 Mega Auction) ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಸಿಎಸ್ ಕೆ (CSK) ಫ್ರಾಂಚೈಸಿ ಮಹೇಂದ್ರ ಸಿಂಗ್ ಧೋನಿಯನ್ನು (Mahendra Singh Dhoni) ತಂಡದಲ್ಲಿ ಉಳಿಸಿಕೊಳ್ಳಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುತ್ತದೆ.  ಆದರೆ ಪರಿಸ್ಥಿತಿಯನ್ನು ನೋಡಿದರೆ , ಮುಂದಿನ ಸೀಸನ್ ಗೂ ಮುಂಚಿತವಾಗಿ,  ಧೋನಿ 'ಯೆಲ್ಲೊ ಆರ್ಮಿ' ನಾಯಕತ್ವವನ್ನು ತೊರೆಯುವುದು ಮಾತ್ರವಲ್ಲದೆ ಕ್ರಿಕೆಟ್ ಗೂ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿದೆ. ಇದಕ್ಕೆ 3 ದೊಡ್ಡ ಕಾರಣಗಳಿವೆ. 


ಇದನ್ನೂ ಓದಿ : T20 World Cup 2021: ನೀವು ಈ ರೀತಿ T20 World Cup Live ಅನ್ನು ಫ್ರೀ ಆಗಿ ವೀಕ್ಷಿಸಬಹುದು, ಒಂದೇ ಕ್ಲಿಕ್‌ನಲ್ಲಿ ವೀಕ್ಷಿಸಿ Ind Vs Pak ಮ್ಯಾಚ್


1. ಧೋನಿ ಈ ವರ್ಷ ಬ್ಯಾಟಿಂಗ್ ನಲ್ಲಿ ಫ್ಲಾಪ್ ಆಗಿದ್ದರು :
ಎಂಎಸ್ ಧೋನಿ (MS Dhoni)  ಐಪಿಎಲ್ 2021 ರಲ್ಲಿ ನಾಯಕನಾಗಿ ಉತ್ತಮ ಯಶಸ್ಸನ್ನು ಸಾಧಿಸಿರಬಹುದು. ಆದರೆ ಅವರು ಬ್ಯಾಟಿಂಗ್‌ನಲ್ಲಿ ಫ್ಲಾಪ್ ಆಗಿದ್ದರು. ಅವರು ಈ ಋತುವಿನಲ್ಲಿ 16 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು ಹೆಚ್ಚಿನ ಸಂದರ್ಭಗಳಲ್ಲಿ 6 ಅಥವಾ 7 ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಈ ಸಮಯದಲ್ಲಿ, ಮಾಹಿ 16.28 ರ ಸರಾಸರಿಯಲ್ಲಿ ಕೇವಲ 114 ರನ್ ಮತ್ತು 106.54 ಸ್ಟ್ರೈಕ್ ರೇಟ್ ಗಳಿಸಿದ್ದಾರೆ. ಈ ಐಪಿಎಲ್‌ನಲ್ಲಿ ಅವರ ಗರಿಷ್ಠ ಸ್ಕೋರ್ 18 *. 
 
2. ಹೊಸ ದೀರ್ಘಾವಧಿಯ ಕ್ಯಾಪ್ಟನ್ ಅಗತ್ಯವಿದೆ :

ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai super kings)  9 ಬಾರಿ ಫೈನಲ್‌ ಪ್ರವೇಶಿಸಿದೆ. ಅದರಲ್ಲಿ  4 ಬಾರಿ ಪ್ರಶಸ್ತಿ ಗೆದ್ದಿದೆ. ಈಗ ತಂಡಕ್ಕೆ ಹೊಸ ದೀರ್ಘಾವಧಿಯ ನಾಯಕನ ಅಗತ್ಯವಿದೆ.  40 ನೇ ವಯಸ್ಸಿನಲ್ಲಿ ಕ್ಯಾಪ್ಟನ್ ಕೂಲ್ ಆಗಿ ಮಹಿ ಪರಂಪರೆಯನ್ನು ಮುಂದುವರಿಸಬಹುದು ಏಕೆಂದರೆ ಈ ತಂಡಕ್ಕೆ ದೀರ್ಘ ಇನ್ನಿಂಗ್ಸ್ ಆಡುವುದು  ಸಾಧ್ಯವಾಗಲಿಕ್ಕಿಲ್ಲ. 
 
ಇದನ್ನೂ ಓದಿ : Former cricketer Yuvraj Singh: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಮಧ್ಯಂತರ ಜಾಮೀನು


3. ಟ್ರೋಫಿಯೊಂದಿಗೆ ನಿವೃತ್ತಿ ತೆಗೆದುಕೊಳ್ಳಬಹುದು :
ಎಂಎಸ್ ಧೋನಿ ನಿವೃತ್ತಿಯ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮತ್ತೊಮ್ಮೆ ಐಪಿಎಲ್ ಚಾಂಪಿಯನ್ (IPL Champion) ಆಗಲು ಪ್ರಯತ್ನಿಸುತ್ತಿತ್ತು. ಈಗ ಮಹಿಯ ಈ ಮಿಷನ್ ಪೂರ್ಣಗೊಂಡಿದೆ. ಟ್ರೋಫಿಯೊಂದಿಗೆ ನಿವೃತ್ತಿಯಾಗುವ ಸುವರ್ಣಾವಕಾಶವನ್ನು ಅವರು ಕಳೆದುಕೊಳ್ಳಲಿಕ್ಕಿಲ್ಲ ಎನ್ನಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ