ಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿ
Dhoni viral video: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಲಿಗೆ ಪ್ರೀತಿಗೆ ಕಡಿಮೆ ಏನಿಲ್ಲ. ಮಾಹಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳಂತೂ ಮಾಹಿ ಅವರನ್ನು ಒಂದೇ ಒಂದು ಭಾರಿ ಭೇಟಿ ಮಾಡಿ ಸೆಲ್ಫಿ ತೆಗೆದುಕೊಂಡರೆ ಸಾಕಪ್ಪಾ ಎಂದು ವರ್ಷಗಟ್ಟಲೇ ತಪಸ್ಸು ಮಾಡುತ್ತಾರೆ.
Dhoni viral video: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಲಿಗೆ ಪ್ರೀತಿಗೆ ಕಡಿಮೆ ಏನಿಲ್ಲ. ಮಾಹಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳಂತೂ ಮಾಹಿ ಅವರನ್ನು ಒಂದೇ ಒಂದು ಭಾರಿ ಭೇಟಿ ಮಾಡಿ ಸೆಲ್ಫಿ ತೆಗೆದುಕೊಂಡರೆ ಸಾಕಪ್ಪಾ ಎಂದು ವರ್ಷಗಟ್ಟಲೇ ತಪಸ್ಸು ಮಾಡುತ್ತಾರೆ.
ಮಾಹಿ ತಮ್ಮ ಅಭಿಮಾನಿಗಳು ಎಂದೇ ಭೇಟಿಯಾಗಲು ಬಂದರೂ ಅವರಿಗೆ ನಿರಸೆ ಮೂಡಿಸುವುದಿಲ್ಲ. ಅಂತಹದರಲ್ಲಿ ಧೊನಿ ಅವರ ಅಭಿಮಾನಿಯೋಬ್ಬರು ಬೈಕ್ ಮೇಲೆ ಆಟೋಗ್ರಾಫ್ ಮಾಡುವಂತೆ ಕೇಳಿ ಕೊಂಡಿದ್ದು. ಮಾಹಿ ಎರಡನೇ ಭಾರಿ ಯೋಚಿಸದೆ ಅಭಿಮಾನಿಯ ಬೈಕ್ ಮೇಲೆ ಸಹಿ ಮಾಡಿದ್ದಾರೆ. ಸದ್ಯ ಇ ವಿಡಿಯO ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗುತ್ತಿದ್ದು, ಧೋನಿ ಈ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಇದನ್ನೂ ಓದಿ: KKR ತೊರೆಯಲಿದ್ದಾರೆ ರಿಂಕು ಸಿಂಗ್..! ʻಈʼ ತಂಡದ ಪರ ಆಡುವ ಬಯಕೆ ಹೊರಹಾಕಿದ ಸ್ಟಾರ್ ಬ್ಯಾಟ್ಸ್‌ಮೆನ್
ಧೋನಿ ತಮ್ಮ ತಮಾಷೆಯ ಸ್ವಭಾವಕ್ಕೂ ಹೆಸರುವಾಸಿಯಾಗಿದ್ದಾರೆ. ಹಲವು ಬಾರಿ ಅಭಿಮಾನಿಗಳ ಜೊತೆ ಜೋಕ್ ಕೂಡ ಮಾಡುತ್ತಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಿ ಇಷ್ಟು ವರ್ಷ ಕಳೆದರೂ ಧೋನಿ ಅಭಿಮಾನಿಗಳೇನು ಕಡಿಮೆಯಾಗಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಧೋನಿಯವರನ್ನು ನೋಡಲೆಂದೇ ಪ್ರತಿ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ವಿವಿಧ ನಗರಗಳಿಂದ ಬರುತ್ತಾರೆ.
ಎಂಎಸ್ ಧೋನಿ ಆಟದಿಂದ ನಿವೃತ್ತಿಯಾಗಿರುವುದು ಚರ್ಚೆಯ ವಿಷಯವಾಗಿದೆ. ಟೀಂ ಇಂಡಿಯಾದ ಮಾಜಿ ನಾಯಕ ಆಟವನ್ನು ಮುಂದುವರಿಸಬೇಕು ಎಂದು ಕೆಲವರು ನಂಬಿದರೆ, ಇನ್ನು ಕೆಲವರು ಅವರು ಆಟದಿಂದ ಹಿಂದೆ ಸರಿಯುವ ಸಮಯ ಬಂದಿದೆ, ಕಿರಿಯ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತಾರೆ ಎಂದು ವಾದಿಸುತ್ತಿದ್ದಾರೆ.
ಕಳೆದ ಋತುವಿಗೂ ಮುನ್ನ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರು. ಅವರು ಫ್ರಾಂಚೈಸಿಯ ಅತ್ಯಂತ ಯಶಸ್ವಿ ನಾಯಕರಾಗಿ ತೊರೆದರು ಮತ್ತು ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅವರನ್ನು ಅತ್ಯಂತ ಯಶಸ್ವಿ ನಾಯಕರಾಗಿ ಸರಿಗಟ್ಟಿದರು. ರೋಹಿತ್ ಮತ್ತು ಧೋನಿ ಇಬ್ಬರೂ ನಾಯಕರಾಗಿ ತಲಾ ಐದು ಬಾರಿ ಪ್ರಶಸ್ತಿ ಗೆದ್ದಿದ್ದಾರೆ.
ಸ್ವಲ್ಪ ಸಮಯದ ನಂತರ, ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಐಪಿಎಲ್ ತಂಡಗಳು ಪ್ರಾರಂಭಿಸುತ್ತವೆ. ಚೆನ್ನೈ ಸೂಪರ್ ಕಿಂಗ್ಸ್ ಮಾಹಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಬಿಸಿಸಿಐ ಕೂಡ ಅನ್‌ಕ್ಯಾಪ್ಡ್ ಆಟಗಾರರ ನಿಯಮವನ್ನು ತರಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ