MS Dhoni Appointment Letter Viral: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿ ಮೈದಾನದಲ್ಲಿ ನಡೆಯುತ್ತಿದೆ. ಈ ನಡುವೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ರಾಂಚಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರೂರು. ಇದೀಗ ಮಾಹಿಯ ಮೊದಲ ನೇಮಕಾತಿ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಧೋನಿ ಟೀಂ ಇಂಡಿಯಾಗೆ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡುವ ಮೊದಲು ಸೌತ್ ಈಸ್ಟರ್ನ್ ರೈಲ್ವೇಸ್‌’ನ ಖರಗ್‌’ಪುರ ರೈಲು ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಮಹೇಂದ್ರ ಸಿಂಗ್ ಧೋನಿ ಟಿಕೆಟ್ ಕಲೆಕ್ಟರ್ ಹುದ್ದೆ ತೊರೆದು ದೇಶಕ್ಕಾಗಿ ಕ್ರಿಕೆಟ್ ಆಡುವ ಕನಸನ್ನು ನನಸು ಮಾಡಿಕೊಂಡರು.


ಇದನ್ನೂ ಓದಿ: Gold And Silver rate: ವಾರದ ಮೊದಲ ದಿನದಂದು ಚಿನ್ನದ ದರ ಉಸಿತ: ಬೆಳ್ಳಿ ಬೆಲೆ ಹೆಚ್ಚಳ!


ನೇಮಕಾತಿ ಪತ್ರದಲ್ಲಿ ಧೋನಿಗೆ ಮಾಸಿಕ 43,000 ರೂ. ವೇತನವನ್ನು ನೀಡಲಾಗಿದ್ದು, 21,970 ರೂ.ಗಳ ತುಟ್ಟಿಭತ್ಯೆ ಮತ್ತು 20,000 ರೂ.ಗಳ ವಿಶೇಷ ವೇತನವನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ.


ಧೋನಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಡಿಸೆಂಬರ್ 23, 2004 ರಂದು ಬಾಂಗ್ಲಾದೇಶ ವಿರುದ್ಧದ ODI ಪಂದ್ಯದ ಮೂಲಕ ಪ್ರಾರಂಭಿಸಿದರು.


ಬಾಂಗ್ಲಾದೇಶದ ವಿರುದ್ಧದ ಮೊದಲ ಸರಣಿಯಲ್ಲಿ ಧೋನಿ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ವಿಶಾಖಪಟ್ಟಣದಲ್ಲಿ ನಡೆದ ತನ್ನ ಐದನೇ ODI ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ 123 ಎಸೆತಗಳಲ್ಲಿ 148 ರನ್ ಗಳಿಸಿದರು. ಧೋನಿ 350 ODI ಪಂದ್ಯಗಳಲ್ಲಿ 50.57 ಸರಾಸರಿಯಲ್ಲಿ 10773 ರನ್ ಗಳಿಸಿದ್ದಾರೆ, ಇದರಲ್ಲಿ 10 ಶತಕಗಳು ಮತ್ತು 73 ಅರ್ಧ ಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 183 ರನ್ ಆಗಿತ್ತು. ಇನ್ನು 90 ಟೆಸ್ಟ್ ಪಂದ್ಯಗಳಲ್ಲಿ 38.09 ಸರಾಸರಿಯಲ್ಲಿ 4876 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 33 ಅರ್ಧ ಶತಕಗಳು ಸೇರಿವೆ. ಅತ್ಯುತ್ತಮ ಸ್ಕೋರ್ 224 ರನ್ ಆಗಿದೆ. ಇನ್ನೊಂದೆಡೆ 98 T-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 37.60 ಸರಾಸರಿಯಲ್ಲಿ 1617 ರನ್ ಗಳಿಸಿದ್ದು, ಇದರಲ್ಲಿ 2 ಅರ್ಧ ಶತಕಗಳು ಒಳಗೊಂಡಿವೆ.


ಮಹೇಂದ್ರ ಸಿಂಗ್ ಧೋನಿ ಪ್ರಸ್ತುತ ಐಪಿಎಲ್’ನಲ್ಲಿ ಆಡುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. 250 ಐಪಿಎಲ್ ಪಂದ್ಯಗಳಲ್ಲಿ 38.79 ಸರಾಸರಿಯಲ್ಲಿ 5082 ರನ್ ಗಳಿಸಿದ್ದು, ಇದರಲ್ಲಿ 24 ಅರ್ಧ ಶತಕಗಳು ಸೇರಿವೆ. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ 84 ರನ್ ಆಗಿದೆ.


ಇದನ್ನೂ ಓದಿ: ಉಪ್ಪಿಗೆ ಈ ಒಂದು ವಸ್ತು ಬೆರೆಸಿ ತಿಕ್ಕಿದರೆ ಹಲ್ಲಿನ ಹಳದಿ ಕಲೆ ಸೆಕೆಂಡುಗಳಲ್ಲಿ ಮಾಯವಾಗುವುದು! ಹಲ್ಲುಗಳು ಮುತ್ತಿನಂತೆ ಹೊಳೆಯುವುದು   


ಅಂದಹಾಗೆ ಮಹೇಂದ್ರ ಸಿಂಗ್ ಧೋನಿ 2008 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಧೋನಿ ನಾಯಕತ್ವದಲ್ಲಿ ಭಾರತವು ICC 2007 T20 ವಿಶ್ವಕಪ್, 2011 ODI ವಿಶ್ವಕಪ್ ಮತ್ತು ICC ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಗಳನ್ನು ಗೆದ್ದಿದೆ. ಇದಲ್ಲದೇ 2009ರಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್‌’ನಲ್ಲಿ ನಂಬರ್ ಒನ್ ಆಗಿತ್ತು. 2020 ರಲ್ಲಿ, ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ