IPL 2024 KKR And RR Squad Changed: IPL 2024ರ 9 ಪಂದ್ಯಗಳನ್ನು ಇದುವರೆಗೆ ಆಡಲಾಗಿದೆ. ಈ ಮಧ್ಯೆ ಮಾರ್ಚ್ 29 ಅಂದರೆ ಇಂದು ಎರಡು ತಂಡಗಳಲ್ಲಿ ಮಹತ್ವದ ಬದಲಾವಣೆ ಮಾಡುವ ಬಗ್ಗೆ ಮಾಹಿತಿ ಬಂದಿದೆ.


COMMERCIAL BREAK
SCROLL TO CONTINUE READING

ರಾಜಸ್ಥಾನ ರಾಯಲ್ಸ್‌ ತಂಡದಿಂದ ಪ್ರಸಿದ್ಧ ಕೃಷ್ಣ ಅವರನ್ನು ಹೊರಹಾಕಲು ಈಗಾಗಲೇ ನಿರ್ಧರಿಸಲಾಗಿತ್ತು. ಇದರ ಬೆನ್ನಲ್ಲೇ,  ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಕೂಡ ಕೆಕೆಆರ್ ತಂಡದಿಂದ ಕೈಬಿಡಲಾಗಿದೆ. ಇನ್ನು ಬದಲಿ ಸ್ಥಾನಕ್ಕೆ ಕೆಕೆಆರ್ ಅಫ್ಘಾನಿಸ್ತಾನದ 16 ವರ್ಷದ ಮಿಸ್ಟರಿ ಸ್ಪಿನ್ನರ್ ಅನ್ನು ತಂಡಕ್ಕೆ ಸೇರಿಸಿದೆ. ಇದಲ್ಲದೇ ರಾಜಸ್ಥಾನ್ ರಾಯಲ್ಸ್’ನಲ್ಲಿ ಕೃಷ್ಣ ಅವರ ಜಾಗಕ್ಕೆ ಬಲಿಷ್ಠ ಆಟಗಾರನೊಬ್ಬ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆ? ಈ ಐದು ಮನೆ ಉಪಾಯಗಳನ್ನು ಟ್ರೈ ಮಾಡಿ ನೋಡಿ!


IPL ಸೇರಿದ ಇಬ್ಬರು ಆಟಗಾರರು ಯಾರು?


ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈಗ ಬದಲಾಗಿವೆ. ಮುಜೀಬ್ ಉರ್ ರೆಹಮಾನ್ ಬದಲಿಗೆ 16ರ ಹರೆಯದ ಅಫ್ಘಾನಿಸ್ತಾನದ ಸ್ಪಿನ್ನರ್ ಮೊಹಮ್ಮದ್ ಘಜನ್ಫರ್ ಅವರನ್ನು ಕೋಲ್ಕತ್ತಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಘಜನ್‌ಫರ್ ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದರು. ಜೊತೆಗೆ ಈ ಹಿಂದೆ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಘಜನ್‌ಫಾರ್ ಅನ್ನು ಕೆಕೆಆರ್ ಮೂಲ ಬೆಲೆ 20 ಲಕ್ಷಕ್ಕೆ ಪಡೆದುಕೊಂಡಿದೆ. ಇದಲ್ಲದೇ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕೇಶವ್ ಮಹಾರಾಜ್ ರಾಜಸ್ಥಾನ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಉಭಯ ತಂಡಗಳ ಉತ್ತಮ ಆರಂಭ


ಪ್ರಸ್ತುತ, ಎರಡೂ ತಂಡಗಳು ಐಪಿಎಲ್ 2024 ರಲ್ಲಿ ಉತ್ತಮ ಆರಂಭವನ್ನು ಮಾಡಿವೆ. ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿದೆ. ನಾಯಕ ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಮಿಂಚಿದರೆ, ಎರಡನೇ ಪಂದ್ಯದಲ್ಲಿ ರಿಯಾನ್ ಪರಾಗ್ ಮೇಲುಗೈ ಸಾಧಿಸಿದ್ದಾರೆ. ಬೌಲಿಂಗ್‌’ನಲ್ಲಿ ಚಹಾಲ್, ಬರ್ಗರ್ ಮತ್ತು ಬೋಲ್ಟ್ ಅದ್ಭುತ ಪ್ರದರ್ಶನ ನೀಡಿದ್ದಾರೆ.


KKR ಹೊಸ ತಂಡ: ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್, ಫಿಲ್ ಸಾಲ್ಟ್, ಸುಯ್ಯಾಶ್ ಶರ್ಮಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಮೊಹಮ್ಮದ್ ಶೆರ್ಜಾ, ಮೊಹಮ್ಮದ್ ಶೆರ್ಜಾ, ಗಸ್ ಅಟಿನ್ಕ್ಸನ್, ಮನೀಷ್ ಪಾಂಡೆ, ಕೆಎಸ್ ಭರತ್, ಚೇತನ್ ಸಕರಿಯಾ, ಆಂಗ್ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ಶಾಕಿಬ್ ಹುಸೇನ್.


ಇದನ್ನೂ ಓದಿ: ಬೆಂಕಿ ಬ್ಯಾಟಿಂಗ್’ಗೆ ರನ್ ಸುರಿಮಳೆ ಖಚಿತ! ಚಿನ್ನಸ್ವಾಮಿಯಲ್ಲಿ ಮತ್ತೆ ಗೆಲ್ಲುತ್ತಾ ‘ಬೆಂಗಳೂರು’?


ರಾಜಸ್ಥಾನ ರಾಯಲ್ಸ್‌ ಹೊಸ ತಂಡ: ಸಂಜು ಸ್ಯಾಮ್ಸನ್ (ನಾಯಕ), ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಕೇಶವ್ ಮಹಾರಾಜ್, ನವದೀಪ್ ಸೈನಿ, ಅವೇಶ್ ಖಾನ್, ಯಶಸ್ವಿ ಜೈಸ್ವಾಲ್, ಕುಲದೀಪ್ ಸೇನ್, ಸಂದೀಪ್ ಶರ್ಮಾ, ರಯಾನ್ ಪರಾಗ್, ಧ್ರುವ ಜುರೆಲ್, ಕೃನಾಲ್ ಸಿಂಗ್ ರಾಥೋಡ್, ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್, ಆಡಮ್ ಜಂಪಾ, ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರೋವ್ಮನ್ ಪೊವೆಲ್, ಶುಭಮನ್ ದುಬೆ, ನಾಂದ್ರೆ ಬರ್ಗರ್, ಟಾಮ್ ಕೊಹ್ಲರ್ ಕಾಡ್ಮೋರ್, ಅಬಿದ್ ಮುಷ್ತಾಕ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.