ವುಮೆನ್ಸ್ ಪ್ರೀಮಿಯರ್ ಲೀಗ್ಗೆ ತರಬೇತಿ ಬಳಗವನ್ನು ಪ್ರಕಟಿಸಿದ ಮುಂಬೈ ಇಂಡಿಯನ್ಸ್
ಮುಂಬರುವ ಮಾರ್ಚ್ ತಿಂಗಳಲ್ಲಿ ನಿಗದಿಯಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್) ಆಡಲಿರುವ ತನ್ನ ಹೊಸ ಫ್ರಾಂಚೈಸಿಯ ತರಬೇತಿ ಬಳಗವನ್ನು ಮುಂಬೈ ಇಂಡಿಯನ್ಸ್ ಇಂದು ಘೋಷಿಸಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಮುಂಬೈ: ಮುಂಬರುವ ಮಾರ್ಚ್ ತಿಂಗಳಲ್ಲಿ ನಿಗದಿಯಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್) ಆಡಲಿರುವ ತನ್ನ ಹೊಸ ಫ್ರಾಂಚೈಸಿಯ ತರಬೇತಿ ಬಳಗವನ್ನು ಮುಂಬೈ ಇಂಡಿಯನ್ಸ್ ಇಂದು ಘೋಷಿಸಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪದ್ಮಶ್ರೀ-ಅರ್ಜುನ ಪ್ರಶಸ್ತಿ ವಿಜೇತೆ ಹಾಗೂ ಭಾರತ ತಂಡದ ಮಾಜಿ ವೇಗಿ ಜೂಲನ್ ಗೋಸ್ವಾಮಿ ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಆಗಿ ಅವಳಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಭಾರತದ ಮಾಜಿ ಆಲ್ರೌಂಡರ್ ದೇವಿಕಾ ಪಾಲ್ಶಿಕಾರ್ ಬ್ಯಾಟಿಂಗ್ ಕೋಚ್ ಹಾಗೂ ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ ತಂಡದ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: “ಮುಸ್ಲಿಂ ಸಮುದಾಯಕ್ಕೆ ಜಮೀರ್ ಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ”- ಎಚ್.ಡಿ.ಕುಮಾರಸ್ವಾಮಿ
'ಚಾರ್ಲೋಟ್ ಎಡ್ವರ್ಡ್ಸ್, ಜೂಲನ್ ಗೋಸ್ವಾಮಿ ಮತ್ತು ದೇವಿಕಾ ಪಾಲ್ಶಿಕಾರ್ ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸಲು ನಾನು ಸಂಭ್ರಮಿಸುತ್ತಿದ್ದೇನೆ. ಹೆಚ್ಚು ಹೆಚ್ಚು ಮಹಿಳೆಯರು ಕ್ರೀಡೆಯಲ್ಲಿ ಕೇವಲ ಆಟಗಾರ್ತಿಯರಾಗಿ ಮಾತ್ರವಲ್ಲದೆ, ಕೋಚ್ಗಳು, ಆಡಳಿತಾಧಿಕಾರಿಗಳು ಮತ್ತು ತರಬೇತಿ ಸಿಬ್ಬಂದಿಯಾಗಿ ತೊಡಗಿಸಿಕೊಳ್ಳುತ್ತಿರುವುದು ಅಮೋಘವೆನಿಸುತ್ತಿದೆ. ಭಾರತದಲ್ಲಿ ಮಹಿಳಾ ಕ್ರೀಡೆಗೆ ಇದೊಂದು ಉತ್ಸಾಹದ ಸಮಯವಾಗಿದೆ. ನಮ್ಮ ಮಹಿಳಾ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ದೇಶಕ್ಕೆ ಗೌರವ ತಂದುಕೊಡುತ್ತಿದ್ದಾರೆ. ಕ್ರೀಡಾ ಶಕ್ತಿಯ ಮೂಲಕ ಹೆಚ್ಚಿನ ಸಂತಸ ಮತ್ತು ಸಂಭ್ರಮವನ್ನು ತಂದುಕೊಡಲು ಮಹಿಳೆಯರಿಗೆ ಇನ್ನಷ್ಟು ಶಕ್ತಿ ಲಭಿಸಲಿ. ಈ ಮೂಲಕ ಸಬಲೀಕರಣಗೊಂಡ ಮಹಿಳೆಯರ ಹೊಸ ತಲೆಮಾರಿಗೆ ಹೆಚ್ಚಿನ ಸ್ಫೂರ್ತಿ ಸಿಗುವಂತಾಗಲಿ. ಉನ್ನತ ಮಟ್ಟವನ್ನು ತಲುಪಲು ಅವರಿಗೆ ಸಾಧ್ಯವಿರುವ ಎಲ್ಲ ಬೆಂಬಲಗಳನ್ನು ಒದಗಿಸಲು ನಾವು ಯಾವಾಗಲೂ ಬದ್ಧರಾಗಿರುತ್ತೇವೆ' ಎಂದು ಶ್ರೀಮತಿ ನೀತಾ ಅಂಬಾನಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಉಂಡ ಮನೆಯ ಗಳ ಇರಿಯುವ ಜಮೀರ್ ಅಹ್ಮದ್: ಜೆಡಿಎಸ್ ಆಕ್ರೋಶ
ಮುಂಬೈ ಇಂಡಿಯನ್ಸ್ ಇತ್ತೀಚೆಗೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಮುಂಬೈ ನಗರದ ತಂಡವನ್ನು ಗರಿಷ್ಠ ಬಿಡ್ ಸಲ್ಲಿಸಿ ಖರೀದಿಸಿದೆ. ಇದು ಮುಂಬೈ ಇಂಡಿಯನ್ಸ್ ಕುಟುಂಬದ 4ನೇ ಫ್ರಾಂಚೈಸಿ ಎನಿಸಿದೆ. ಈ ಫ್ರಾಂಚೈಸಿಯ ಮೂಲಕ ಮುಂಬೈ ಇಂಡಿಯನ್ಸ್, ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೂ ನೆರವಾಗುವ ಪ್ರಯತ್ನವನ್ನು ಮುಂದುವರಿಸಲು ಬಯಸಿದೆ. ಐಪಿಎಲ್ನಲ್ಲಿ ಆಡುವ ಮುಂಬೈ ಇಂಡಿಯನ್ಸ್, ದಕ್ಷಿಣ ಆಫ್ರಿಕಾದ ಎಸ್ಎ20 ಟೂರ್ನಿಯಲ್ಲಿ ಆಡುವ ಎಂಐ ಕೇಪ್ಟೌನ್ ಮತ್ತು ಯುಎಇಯ ಐಎಲ್ಟಿ20 ಟೂರ್ನಿಯಲ್ಲಿ ಆಡುವ ಎಂಐ ಎಮಿರೇಟ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಇತರ 3 ಫ್ರಾಂಚೈಸಿಗಳಾಗಿವೆ.
ಕೋಚಿಂಗ್ ಟೀಮ್ ಬಗ್ಗೆ ಮಾಹಿತಿ:
• ಚಾರ್ಲೋಟ್ ಎಡ್ವರ್ಡ್ಸ್: ಸುಮಾರು 20 ವರ್ಷಗಳ ವೃತ್ತಿಜೀವನದ ಮೂಲಕ ಮಹಿಳಾ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆನಿಸಿದವರು ಚಾರ್ಲೋಟ್ ಎಡ್ವರ್ಡ್ಸ್. ಅವರು ಇಂಗ್ಲೆಂಡ್ ತಂಡದ ನಾಯಕಿಯಾಗಿ ಏಕದಿನ ಮತ್ತು ಟಿ20 ವಿಶ್ವಕಪ್ಗಳನ್ನು ಗೆದ್ದುಕೊಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿವಿಧ ತಂಡಗಳ ಕೋಚ್ ಆಗಿ ತೊಡಗಿಸಿಕೊಂಡಿದ್ದಾರೆ. ಬ್ರಿಟಿಷ್ ಎಂಪೈರ್ನಿಂದ ಅವರು 2009ರಲ್ಲಿ ಎಂಬಿಇ ಮತ್ತು 2014ರಲ್ಲಿ ಸಿಬಿಇ ಗೌರವವನ್ನೂ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಮಹಿಳೆಯರ ದೇಶೀಯ ಟಿ20 ಕ್ರಿಕೆಟ್ ಟೂರ್ನಿಯು ಚಾರ್ಲೋಟ್ ಎಡ್ವರ್ಡ್ಸ್ ಕಪ್ ಎಂಬ ಹೆಸರು ಹೊಂದಿದೆ. 2022ರಲ್ಲಿ ಚಾರ್ಲೋಟ್ ಐಸಿಸಿ ಹಾಲ್ ಆಫ್ ಫೇಮ್ಗೂ ಸೇರ್ಪಡೆಗೊಂಡಿದ್ದರು.
• ಜೂಲನ್ ಗೋಸ್ವಾಮಿ: ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ ಜೂಲನ್ ಗೋಸ್ವಾಮಿ ಅಮೋಘವಾದ ಬೌಲಿಂಗ್ ಕೌಶಲಕ್ಕೆ ಹೆಸರುವಾಸಿಯಾಗಿದ್ದರು. ತಮ್ಮ ಬೌಲಿಂಗ್ ಮೂಲಕ ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ ಮತ್ತು ಮಹಿಳಾ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರೆನಿಸಿದ್ದಾರೆ. 20 ವರ್ಷಗಳ ವೃತ್ತಿಜೀವನದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 350ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ ಮತ್ತು ಮಹಿಳೆಯರ ವಿಶ್ವಕಪ್ನಲ್ಲಿ ಸರ್ವಾಧಿಕ ವಿಕೆಟ್ ಕಬಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. 2016ರ ಜನವರಿಯಲ್ಲಿ ಐಸಿಸಿ ಮಹಿಳಾ ಏಕದಿನ ಬೌಲಿಂಗ್ ರಾಂಕಿಂಗ್ನಲ್ಲಿ ಅವರು ನಂ. 1 ಪಟ್ಟವನ್ನೂ ಅಲಂಕರಿಸಿದ್ದರು. ನಿವೃತ್ತಿಯ ನಂತರದಲ್ಲಿ ಅವರು, ಬಂಗಾಳದ ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಮುಂದಿನ ತಲೆಮಾರಿನ ಆಟಗಾರ್ತಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
• ದೇವಿಕಾ ಪಾಲ್ಶಿಕಾರ್: ಭಾರತ ತಂಡದ ಪರ ಬಲಗೈ ಬ್ಯಾಟರ್ ಮತ್ತು ಬಲಗೈ ಲೆಗ್ ಸ್ಪಿನ್ನರ್ ಆಗಿ ದೇವಿಕಾ ಪಾಲ್ಶಿಕಾರ್ ಆಲ್ರೌಂಡರ್ ಪಾತ್ರ ನಿಭಾಯಿಸಿದ್ದಾರೆ. 2009ರಿಂದ 2012ರವರೆಗೆ ಅವರು ಅಸ್ಸಾಂ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ಕೋಚ್ ಆಗಿದ್ದರು. ನಿವೃತ್ತಿಯ ನಂತರದಲ್ಲಿ ಅವರು, 2014 ಮತ್ತು 2016ರ ನಡುವೆ ಭಾರತ ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 2018ರ ಏಷ್ಯನ್ ಕಪ್ ಜಯಿಸಿದ ಬಾಂಗ್ಲಾದೇಶ ತಂಡಕ್ಕೂ ಸಹಾಯಕ ಕೋಚ್ ಆಗಿ ನೆರವಾಗಿದ್ದರು. ಭಾರತದಲ್ಲಿ ವಿವಿಧ ದೇಶೀಯ ಕ್ರಿಕೆಟ್ ತಂಡಗಳಿಗೆ ತರಬೇತಿ ನೀಡಿದ್ದಾರೆ. 2022ರ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿ ಫೈನಲ್ಗೇರಿದ್ದ ವೆಲಾಸಿಟಿ ತಂಡಕ್ಕೂ ಮುಖ್ಯ ಕೋಚ್ ಆಗಿದ್ದರು .
• ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಹಾಗೂ ಮ್ಯಾನೇಜರ್ ಆಗಿರುವ ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ, ಎಂಸಿಎಯಲ್ಲಿ ಆಯ್ಕೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.