Viral video: ಕ್ಯಾಚ್ ಹಿಡಿಯೋ ಭರದಲ್ಲಿ ಕಳಚಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್.. ಎಷ್ಟು ಡೆಡಿಕೇಟೆಡ್ ನಮ್ಮ ಮಾಜಿ ಕ್ಯಾಪ್ಟನ್ ಎಂದ ಫ್ಯಾನ್ಸ್!!
Rohit Sharma: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ರುತುರಾಜ್ ಗಾಯಕ್ವಾಡ್ ನೀಡಿದ ಕ್ಯಾಚ್ ಕೈಬಿಟ್ಟರು. ಆದರೆ, ಈ ಹಂತದಲ್ಲಿ ರೋಹಿತ್ ಪ್ಯಾಂಟ್ ಕೂಡ ಸ್ವಲ್ಪ ಜಾರಿತು. ಇದೀಗ ಆ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
CSK VS MI: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ಸೋತರೂ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಸೂಪರ್ ಇನ್ನಿಂಗ್ಸ್‌ನೊಂದಿಗೆ ಚೇತರಿಸಿಕೊಂಡರು. ಅದೇ ಸಮಯದಲ್ಲಿ, ರೋಹಿತ್ ಫೀಲ್ಡಿಂಗ್ ಮಾಡುವಾಗ ನಡೆದಿರುವ ಕೆಲವು ಫನ್ನಿ ದೃಶ್ಯಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ-IPL 2024: ಆ ಆಟಗಾರನಿಂದಲೇ ನಾವು ಸೋತಿದ್ದೇವೆ.. ಹಾರ್ದಿಕ್ ಪಾಂಡ್ಯ ಕಾಮೆಂಟ್ ವೈರಲ್!!
ಕ್ಯಾಚ್ ಹಿಡಿಯುವ ವೇಳೆ ರೋಹಿತ್ ಶರ್ಮಾ ಪ್ಯಾಂಟ್ ಸ್ವಲ್ಪ ಜಾರಿದ್ದು ಸದ್ಯ ಸಖತ್ ವೈರಲ್ ಆಗುತ್ತಿದೆ.. ಇಂತಹ ಕೆಲವು ಘಟನೆಗಳು ಕ್ರಿಕೆಟ್ ಪಂದ್ಯಗಳಲ್ಲಿ ಆಗಾಗ ಕಂಡು ಬರುತ್ತಿದ್ದು ಅಭಿಮಾನಿಗಳ ಮುಖದಲ್ಲಿ ನಗುತರಿಸುತ್ತವೆ.. ಕೆಲವೊಮ್ಮೆ ಅಭಿಮಾನಿಗಳು ಭದ್ರತೆಯನ್ನು ಮೀರಿ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಭೇಟಿ ಮಾಡುತ್ತಾರೆ, ಕೆಲವೊಮ್ಮೆ ಕ್ರಿಕೆಟಿಗರು ಅಭಿಮಾನಿಗಳನ್ನು ರಂಜಿಸಲು ಮಿಡ್ ಫೀಲ್ಡ್ ಡ್ಯಾನ್ಸ್ ಸ್ಟೆಪ್ಸ್ ಮಾಡುತ್ತಾರೆ. ಅದೇ ರೀತಿ ಐಪಿಎಲ್ 2024ರ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರೋಹಿತ್ ಪ್ಯಾಂಟ್ ಜಾರಿದ ದೃಶ್ಯಗಳು ಬೆಚ್ಚಿ ಬೀಳಿಸಿದರೂ ಅಭಿಮಾನಿಗಳಿಗೆ ನಗು ತಡೆಯಲಾಗಲಿಲ್ಲ.
IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆ
ಇದೀಗ ಅದೇ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ... ರುತುರಾಜ್ ಗಾಯಕ್ವಾಡ್ ಕ್ಯಾಚ್ ಹಿಡಿಯುವ ಯತ್ನದಲ್ಲಿ ರೋಹಿತ್ ಪ್ಯಾಂಟ್ ಜಾರಿ ಬಿದ್ದಿದ್ದು, ಇಡೀ ಕ್ರೀಡಾಂಗಣದಲ್ಲಿ ನಗುವಿನ ಕೋಡಿಯೇ ಹರಿದಿದೆ.. 12ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಗಾಯಕ್ವಾಡ್ ಡೀಪ್ ಮಿಡ್ ವಿಕೆಟ್ ಕಡೆಗೆ ಶಾಟ್ ಹೊಡೆದರು.. ಬೌಂಡರಿ ಬಳಿ ನಿಂತಿದ್ದ ರೋಹಿತ್ ಡೈವಿಂಗ್ ಕ್ಯಾಚ್ ಹಿಡಿಯಲು ಯತ್ನಿಸಿದರಾದರೂ ಚೆಂಡು ಕೈ ತಪ್ಪಿತು. ಈ ವೇಳೆ ರೋಹಿತ್ ಕ್ಯಾಚ್‌ಹಿಡಿಯಲು ಹೋಗುತ್ತಿದ್ದಂತೆ ಪ್ಯಾಂಟ್ ಸ್ವಲ್ಪ ಜಾರುತ್ತಿತ್ತು, ರೋಹಿತ್ ಒಂದು ಕೈಯಿಂದ ಚೆಂಡನ್ನು ಹಿಡಿದು ಇನ್ನೊಂದು ಕೈಯಿಂದ ಪ್ಯಾಂಟ್ ಅನ್ನು ಮೇಲಕ್ಕೆ ಎಳೆಯುತ್ತಿರುವುದು ಕಂಡುಬಂದಿತು. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.