IPL 2022 Mega Auction : ಈ ಆಟಗಾರರನ್ನು ಖಂಡಿತವಾಗಿಯೂ ಖರೀದಿಸಲಿದೆ Mumbai Indians!
ಐಪಿಎಲ್ ಮೆಗಾ ಹರಾಜಿನಲ್ಲಿ ಈ ಆಟಗಾರರನ್ನು ಖರೀದಿಸುವ ಮೂಲಕ, ಮುಂಬೈ ಇಂಡಿಯನ್ಸ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು.
ನವದೆಹಲಿ : ಇದೀಗ ಎಲ್ಲರ ದೃಷ್ಟಿ ಐಪಿಎಲ್ ಮೆಗಾ ಹರಾಜಿನತ್ತ (IPL mega Auction) ನೆಟ್ಟಿದೆ. ಅನೇಕ ಆಟಗಾರರು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ, ಅನೇಕ ಆಟಗಾರರನ್ನು ತಂಡಗಳು ಉಳಿಸಿಕೊಂಡಿಲ್ಲ. ಐಪಿಎಲ್ ಮೆಗಾ ಹರಾಜಿನಲ್ಲಿ ಈ ಆಟಗಾರರನ್ನು ಖರೀದಿಸುವ ಮೂಲಕ, ಮುಂಬೈ ಇಂಡಿಯನ್ಸ್ (Mumbai Indians) ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು.
ಮುಂಬೈ ಈ ಆಟಗಾರರನ್ನು ಉಳಿಸಿಕೊಂಡಿದೆ :
ಮುಂಬೈ ಇಂಡಿಯನ್ಸ್ (Mumbai Indians) ನಾಲ್ವರು ಆಟಗಾರರನ್ನು ಉಳಿಸಿಕೊಂಡಿದೆ. ಅಗ್ರಸ್ಥಾನದಲ್ಲಿರುವ ಮುಂಬೈ ತಂಡವು, ಬ್ಯಾಟ್ಸ್‌ಮನ್ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು 16 ಕೋಟಿ ರೂ. ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ 12 ಕೋಟಿ ರೂ., ಸ್ಪೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 8 ಕೋಟಿ ಮತ್ತು ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು 6 ಕೋಟಿ ರೂ.ಗೆ ಉಳಿಸಿಕೊಂಡಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಮುಂಬೈ ತಂಡ ಐದು ಬಾರಿ ಐಪಿಎಲ್ (IPL) ಪ್ರಶಸ್ತಿ ಗೆದ್ದಿದೆ. ಮುಂಬೈ ತಂಡವು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : Rahul Dravid: ಟೀಂ ಇಂಡಿಯಾದ ನೂತನ ಕೋಚ್ ಅನ್ನು ಹಾಡಿ ಹೊಗಳಿದ ದಾದಾ
1. ರಶೀದ್ ಖಾನ್ :
ಅಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಉಳಿಸಿಕೊಂಡಿಲ್ಲ. ರಶೀದ್ ಅವರ ಲೆಗ್ ಸ್ಪಿನ್ ಮ್ಯಾಜಿಕ್ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಐಪಿಎಲ್‌ನ 76 ಪಂದ್ಯಗಳಲ್ಲಿ ರಶೀದ್ 93 ವಿಕೆಟ್ ಪಡೆದಿದ್ದಾರೆ. ನಿಧಾನಗತಿಯ ಎಸೆತಗಳಲ್ಲಿ ರಶೀದ್ ಬೇಗನೆ ವಿಕೆಟ್ ಕಬಳಿಸುತ್ತಾರೆ. ತಮ್ಮ ಬೌಲಿಂಗ್ ನಿಂದಾಗಿ ರಶೀದ್ ತಮ್ಮ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ರಶೀದ್ ತಮ್ಮ ಬೌಲಿಂಗ್ ನಿಂದಾಗಿ, ಬ್ಯಾಟ್ಸ್ ಮನ್ ಗಳ ಬೆವರಿಳಿಸಿದ್ದಾರೆ. ಮುಂಬೈ ತಂಡ ಯಾವುದೇ ಸ್ಪಿನ್ನರ್‌ಗಳನ್ನು ಉಳಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಂಬೈ ತಂಡವು ರಶೀದ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು.
2. ಇಶಾನ್ ಕಿಶನ್ :
ಇಶಾನ್ ಕಿಶನ್ (Ishan Kishan) ಅವರನ್ನು ಮುಂಬೈ ಇಂಡಿಯನ್ಸ್ (Mumbai Indians) ಉಳಿಸಿಕೊಂಡಿಲ್ಲ. ಹಾಗಾಗಿಯೇ ಟೀಂ ಇಂಡಿಯಾದ (Team India) ಈ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೆಗಾ ಹರಾಜಿಗೆ ಪ್ರವೇಶಿಸಲಿದ್ದಾರೆ. ಇಶಾನ್ ತಮ್ಮ ಬಲಿಷ್ಠ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಡೆತ್ ಓವರ್‌ಗಳಲ್ಲಿ ಅವರು ತುಂಬಾ ಬಿರುಸಿನ ಬ್ಯಾಟಿಂಗ್ ಮಾಡುತ್ತಾರೆ. ಐಪಿಎಲ್ ತಂಡಗಳು ಕೇವಲ ನಾಲ್ವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಇದೀಗ ಮುಂಬೈ ಇಂಡಿಯನ್ಸ್ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ಖರೀದಿಸಿ ತಂಡಕ್ಕೆ ವಾಪಸ್ ಸೇರಿಸಿಕೊಳ್ಳಬಹುದಾಗಿದೆ. ಇಶಾನ್ ಕಿಶನ್ ಐಪಿಎಲ್‌ನಲ್ಲಿ 61 ಪಂದ್ಯಗಳಲ್ಲಿ 1452 ರನ್ ಗಳಿಸಿದ್ದಾರೆ.
ಇದನ್ನೂ ಓದಿ : Virat Kohli ನಾಯಕತ್ವದಲ್ಲಿ ತಂಡದಿಂದ ಹೊರಗಿದ್ದ ಈ ಆಟಗಾರನಿಗೆ Rohit Sharma ನೀಡಲಿದ್ದಾರೆ ಅವಕಾಶ
3. ಆ್ಯರೋನ್ ಫಿಂಚ್ :
ಆ್ಯರೋನ್ ಫಿಂಚ್ (Aaron Finch) ಟಿ20 ಮಾದರಿಯಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದು, ಫಿಂಚ್ ಅವರ ಅನುಭವವನ್ನು ನೋಡಿದರೆ ಮುಂಬೈ ತಂಡ ಖಂಡಿತವಾಗಿಯೂ ಅವರ ಮೇಲೆ ಕಣ್ಣಿಟ್ಟಿದೆ. ಫಿಂಚ್ 2020 ರಲ್ಲಿ RCB ತಂಡದಲ್ಲಿದ್ದರು. ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 Worldcup) ಚಾಂಪಿಯನ್ ಆಯಿತು. ಇದರ ಪರಿಣಾಮವನ್ನು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕಾಣಬಹುದು. ಫಿಂಚ್ ಅವರ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.