ಬೆಂಗಳೂರು: ರಾಹುಲ್‌ ದ್ರಾವಿಡ್ ಟೀಮ್ ಇಂಡಿಯಾದ ಮಾಜಿ ಕೋಚ್‌. ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್‌ ಅಂಗಳದಲ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ಸದ್ದು ಮಾಡಿದ್ದ ರಾಹುಲ್‌ ದ್ರಾವಿಡ್‌ ಬಳಿಕ ಕೋಚ್‌ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹಲವು ಕ್ರಿಕೆಟ್‌ ಆಟಗಾರರ ಮೇಲೆ ಬಯೋಪಿಕ್‌ ಮಾಡಲಾಗಿದೆ. ತೆಂಡೂಲ್ಕರ್‌, ಎಂಎಸ್ ಧೋನಿ ಜೀವನಾಧಾರಿತ  ಸಿನಿಮಾಗಳು ಈಗಾಗಲೆ ತೆರೆ ಮೇಲೆ ಮಿಂಚಿವೆ. ಯುವರಾಜ್‌ ಸಿಂಗ್ ಬಯೋಪಿಕ್‌ ಗೆ ಸಿದ್ಧತೆ ನಡೆದಿದೆ. ಈ ನಡುವೆ ರಾಹುಲ್‌ ದ್ರಾವಿಡ್ ಅವರಿಗೆ ಸಮಾರಂಭ ಒಂದರಲ್ಲಿ ನಿಮ್ಮ ಬಗ್ಗೆ ಬಯೋಪಿಕ್‌ ಮಾಡಿದರೆ ಹೀರೊ ಯಾರು ಆಗಬೇಕು ಎಂದು ಕೇಳಲಾಯಿತು. 


ಇದನ್ನೂ ಓದಿ: KL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್


ಈ ಅವಕಾಶವನ್ನು ಬೇರೆಯವರಿಗೆ ಯಾಕೆ ಬಿಟ್ಟುಕೊಡಬೇಕು. ಉತ್ತಮ ಸಂಭಾವನೆ ಕೊಟ್ಟರೆ ನಾನೇ ನಟಿಸುವೆ ಎಂದು ತಿಳಿಸಿದರು. ಇದೇ ವೇಳೆ ರಾಹುಲ್‌ ದ್ರಾವಿಡ್‌ ಹೆಂಡತಿ ಬಗ್ಗೆ ಹೇಳಿದ ಆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 


"ನನ್ನ ಹೆಂಡತಿ (ವಿಜೇತಾ) ನಾನು ಮನೆಯಲ್ಲಿರಲು ಮತ್ತು ನನ್ನ ಗಂಡು ಮಕ್ಕಳನ್ನು ನೋಡಿಕೊಳ್ಳಬೇಕೆಂದು ಬಯಸುತ್ತಾಳೆ" ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ. 


ಇದನ್ನೂ ಓದಿ: ಕೊಹ್ಲಿ, ಬುಮ್ರಾ ಅಥವಾ ಹಾರ್ದಿಕ್ ಅಲ್ಲ; ಟಿ20 ವಿಶ್ವಕಪ್‌ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಈ ಮೂವರಿಗೆ ಸಲ್ಲಬೇಕು: ರೋಹಿತ್ ಶರ್ಮಾ ಹೇಳಿದ್ದು ಯಾರ ಬಗ್ಗೆ?


ಮುಂಬೈನಲ್ಲಿ ನಡೆದ ಚಾಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಆಟಗಾರರಾದ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಹುಲ್‌ ದ್ರಾವಿಡ್‌ ಮಾತನಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.