ನಾಗಪುರ: ಭಾರತ ಇಲ್ಲಿ ನಡೆಯುತ್ತಿರುವ ಎರಡನೆಯ ಟೆಸ್ಟ್ ನಲ್ಲಿ  ಶ್ರೀಲಂಕಾ ತಂಡವನ್ನು ಕೇವಲ 169 ಗಳಿಗೆ ಆಲೌಟ್ ಮಾಡುವುದರ ಮೂಲಕ ಇನಿಂಗ್ಸ್ ಸಹಿತ 239 ರನ್ಗಳ  ಭರ್ಜರಿ ಜಯವನ್ನು ಗಳಿಸಿದೆ.ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. 


COMMERCIAL BREAK
SCROLL TO CONTINUE READING

ಈ ಮೊದಲು ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 205 ರನ್ ಗಳನ್ನು ಗಳಿಸಿತ್ತು  ಅದಕ್ಕೆ ಪ್ರತ್ಯುತ್ತರವಾಗಿ  ಭಾರತ ತಂಡವು ನಾಯಕ ಕೊಹ್ಲಿಯ ದ್ವಿಶತಕ, ಪೂಜಾರ,ವಿಜಯ್,ಮತ್ತು ರೋಹಿತ ಶರ್ಮಾರ ಶತಕಗಳ ಸಹಾಯದಿಂದ 610 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತ್ತು.ಆದರೆ ಇದನ್ನು ಬೆನ್ನತ್ತಿ ಎರಡನೆಯ ಇನಿಂಗ್ಸ್ ಗೆ ಬ್ಯಾಟಿಂಗ್ ಇಳಿದ ಲಂಕಾ ತಂಡವು  ಭಾರತದ ರವಿಚಂದ್ರನ್ ಆಶ್ವಿನ್ ಹಾಗೂ ರವಿಂದ್ರ ಜಡೇಜಾ ಹೆಣೆದ ಬೌಲಿಂಗ್ ಬಲೆಗೆ ಬಿದ್ದ ಲಂಕಾದ ಬ್ಯಾಟ್ಸಮನ್ ಗಳು ಬೇಗ ಬೇಗನೆ ತಮ್ಮ ವಿಕೆಟ್ ಒಪ್ಪಿಸಿದರು.ಇದರ ಪರಿಣಾಮವಾಗಿ ಭಾರತ 239 ಗಳ ಅಂತರದ ಇನ್ನಿಂಗ್ಸ್ ಸಹಿತ ಗೆಲುವನ್ನು ತನ್ನದಾಗಿಸಿಕೊಂಡಿತು.


ಲಂಕಾ ಪರ ದಿನೇಶ್ ಚಾಂಡಿಮಾಲ್ 57 ಮತ್ತು ದಿಮುತ್ ಕರುಣಾರತ್ನೆ 51 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದವರು ಎಲ್ಲರು ಕೂಡ ಸ್ಪಿನ್ ಜಾಲಕ್ಕೆ ಸಿಲುಕಿ ಬೇಗನೆ ವಿಕೆಟ್ ಒಪ್ಪಿಸಿದರು.ಭಾರತದ ಪರ ಅಶ್ವಿನ್ 4 ಮತ್ತು ಜಡೇಜ 3 ವಿಕೆಟ್ ಗಳನ್ನು ಪಡೆದು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.