ವಿಶೇಷ ಜೆರ್ಸಿ ತೊಟ್ಟು ಮೋದಿ ಭೇಟಿ ಮಾಡಿದ ಬ್ಯೂ ಬಾಯ್ಸ್..!
T20 World Cup 2024: ಟಿ20 ವಿಶ್ವಕಪ್ 2024 ಚಾಂಪಿಯನ್‌ಶಿಪ್ ಗೆದ್ದು ಭಾರತ ತಂಡ ಕೊನೆಗೂ ತವರು ತಲುಪಿದೆ. 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಟ್ರೋಫಿ ಗೆದು ಟೀಂ ಇಂಡಿಯಾ ಆಟಗಾರರು, ಐದು ದಿನಗಳ ನಂತರ ಮನೆಗೆ ಬಂದಿದ್ದಾರೆ.
T20 World Cup 2024: ಟಿ20 ವಿಶ್ವಕಪ್ 2024 ಚಾಂಪಿಯನ್‌ಶಿಪ್ ಗೆದ್ದು ಭಾರತ ತಂಡ ಕೊನೆಗೂ ತವರು ತಲುಪಿದೆ. 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಟ್ರೋಫಿ ಗೆದು ಟೀಂ ಇಂಡಿಯಾ ಆಟಗಾರರು, ಐದು ದಿನಗಳ ನಂತರ ಮನೆಗೆ ಬಂದಿದ್ದಾರೆ.
ವಿಶ್ವ ಚಾಂಪಿಯನ್ ಆಗಿ ತವರಿಗೆ ಹಿಂದಿರುಗಿದ ನಾಯಕರನ್ನು ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಬಿಸಿಸಿಐ ಬಾರ್ಬಡೋಸ್‌ಗೆ ಕಳುಹಿಸಿದ್ದ ವಿಶೇಷ ವಿಮಾನದಲ್ಲಿ ಭಾರತದ ಆಟಗಾರರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಬುಧವಾರ ಮಧ್ಯರಾತ್ರಿಯಿಂದಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳು ಭಾರತೀಯ ಆಟಗಾರರಿಗೆ ಅದ್ಧೂರಿ ಸ್ವಾಗತ ಕೊಟ್ಟಿದ್ದಾರೆ. ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ತೆರಳುವ ಮಾರ್ಗದಲ್ಲಿ ಭಾರತೀಯ ಆಟಗಾರರು ಭರ್ಜರಿ ಸ್ಟೆಪ್ಸ್ ಹಾಗಿ ಸಂಭ್ರಮಿಸಿದ್ದಾರೆ. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಸಾಮೂಹಿಕ ನೃತ್ಯ ಪ್ರದರ್ಶಿಸಿ, ಅಭಿಮಾನಿಗಳ ಮನ ಗೆದ್ದಿದ್ದಾರೆ.
ಸ್ವಲ್ಪ ಹೊತ್ತು ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು ಬ್ಯೂ ಬಾಯ್ಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೋದಿ ಅವರನ್ನು ಭೇಟಿ ಮಾಡಿದ ಹುಡುಗರು, ಪ್ರಧಾನಿ ಜೊತೆ ಉಪಹಾರ ಸವಿದರು. ವಿಶ್ವ ವೇದಿಕೆಯಲ್ಲಿ ಭಾರತವನ್ನು ವಿಜೇತರನ್ನಾಗಿ ಮಾಡಿದ ರೋಹಿತ್ ಸೇನೆಯನ್ನು ಮೋದಿ ಅಭಿನಂದಿಸಿದರು.
ಪ್ರಧಾನಿ ಮೋದಿಯವರನ್ನು ಬೇಟಿ ಮಾಡಲು ಬಂದಿದ್ದ ಹುಡುಗರು ವಿಶೇಷ ಜರ್ಸಿ ಧರಿಸಿದ್ದರು. ಇನ್ನೂ, ಈ ವಿಶೇಷ ಜೆರ್ಸಿಯನ್ನು ಟಿ20 ವಿಶ್ವಕಪ್‌ನಲ್ಲಿ ಬಳಸಲಾದ ಜೆರ್ಸಿ ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದ್ದು, ಸ್ವಲ್ಪ ಬದಲಾವಣೆ ಮಾಡಲಾಗಿದೆ.
ಜೆರ್ಸಿಯ ಮುಂಭಾಗದಲ್ಲಿ 'ಭಾರತ' ಅಡಿಯಲ್ಲಿ 'ಚಾಂಪಿಯನ್ಸ್' ಎಂದು ಬರೆಯಲಾಗಿದೆ. 2024ರ ಕಪ್ ಆಗಮನದೊಂದಿಗೆ, ಎರಡು ನಕ್ಷತ್ರಗಳಾಗಿ ಬದಲಾದ ಜೆರ್ಸಿಯನ್ನು ಧರಿಸಿ ಭಾರತದ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.