2002 ರಲ್ಲಿ ನಾಸಿರ್ ಹುಸೇನ್ ನನ್ನನ್ನು ಬಸ್ ಡ್ರೈವರ್ ಎಂದು ಹಿಯಾಳಿಸಿದ್ದರು- ಕೈಫ್
ನವದೆಹಲಿ: ಮೊಹಮ್ಮದ್ ಕೈಫ್ ತಮ್ಮ ಬ್ಯಾಟಿಂಗ್ ಮತ್ತು ಕ್ಷೇತ್ರ ರಕ್ಷಣೆಯಿಂದಲೇ ಭಾರತ ತಂಡದಲ್ಲಿ ಹೆಸರು ಮಾಡಿದವರು. ಈಗ ಟ್ವಿಟ್ಟರ್ ನಲ್ಲಿ 2002ರ ಏಕದಿನ ನ್ಯಾಟವೆಸ್ಟ್ ಕ್ರಿಕೆಟ್ ಪಂದ್ಯದ ಕುರಿತು ಕುತೂಹಲಕಾರಿ ಸಂಗತಿಯನ್ನು ಮೊಹಮ್ಮದ್ ಕೈಫ್ ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ ರಲ್ಲಿ ವೈಭವ್ ಯಲೆಂಗಾವ್ಮಕರ್ ಎನ್ನುವವರು ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ನೀವು ಮತ್ತು ಯುವರಾಜ್ ಸಿಂಗ್ ಆಟವಾಡುತ್ತಿರುವ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಏನೆಂದು ಕರೆಯುತ್ತಿದ್ದರು? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಕೈಫ್ "ಆಗ ಇಂಗ್ಲೆಂಡ್ ತಂಡದ ನಾಯಕರಾಗಿದ್ದ ನಾಸಿರ್ ಹುಸೇನ್ ತಮ್ಮನ್ನು ಬಸ್ ಡ್ರೈವರ್ ಎಂದು ಕರೆದಿದ್ದರು, ಆದರೆ ಅದು ನಿಜಕ್ಕೂ ಅವರ ಮೇಲೆ ಸವಾರಿ ಮಾಡಲು ಒಳ್ಳೆಯದಾಗಿತ್ತು" ಎಂದು ಅವರು ಪ್ರತಿಕ್ರಯಿಸಿದ್ದಾರೆ. ಇದೇ ಪಂದ್ಯದ ವೇಳೆ ಸೌರವ್ ಗಂಗೂಲಿ ತಂಡ ಗೆಲುವು ಸಾಧಿಸಿದ ನಂತರ ತಮ್ಮ ಶರ್ಟ್ ಬಿಚ್ಚಿ ತೂರಾಡಿದ್ದ ಸಂಗತಿ ಇಂದಿಗೂ ಕೂಡ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚಳಿಯದೆ ಉಳಿದಿದೆ.