Natasa Stankovic: ಸೆರ್ಬಿಯಾದ ನಟಿ ಹಾಗೂ ಮಾಡೆಲ್‌ ನತಾಶ ಸ್ಟಾಂಕೋಕ್‌ ಮತ್ತು ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ಅಧಿಕೃತವಾಗಿ ತಮ್ಮ ವಿಚ್ಛೆದನವನ್ನು ಘೋಷಿಸಿದರು. ಇದರ ನಂತರ, ನತಾಶ ಮತ್ತು ಆಕೆಯ ಮಗ ಅಗಸ್ತ್ಯ ಸೆರ್ಬಿಯಾಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಅಗಸ್ತ್ಯರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಹಾರ್ದಿಕ್ ಬ್ರಿಟಿಷ್‌ ಗಾಯಕಿಯೊಂದಿಗೆ ಡೇಟ್‌ ಅಮಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ನಟಿ ಮಸ್ಟ್ರಿ ವ್ಯಕ್ತಿಯೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಸ್ತುತ ತನ್ನ ಮಗ ಅಗಸ್ತ್ಯನೊಂದಿಗೆ ಮುಂಬೈನಲ್ಲಿರುವ ನತಾಶ ಸ್ಟಾಂಕೋವಿಕ್ ಮಂಗಳವಾರ ತನ್ನ ಮಗನನ್ನು ಹಾರ್ದಿಕ್‌ ಪಾಂಡ್ಯ ಅವರ ಮನೆಗೆ ಡ್ರಾಪ್‌ ಮಾಡಿದ್ದಾರೆ. ಹಾರ್ದಿಕ್ ಅವರ ಚಿಕ್ಕಮ್ಮ, ಪಂಖುರಿ ಶರ್ಮಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿಗಳನ್ನು ಹಂಚಿಕೊಂಡಿದ್ದು, ಕುಟುಂಬ ಸದಸ್ಯರು ಅಗಸ್ತಯ ಜೊತೆ ಉತ್ತಮವಾಗಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ: RCB ತಂಡದಿಂದ ಹೊರ ಬಿದ್ದ ಸ್ಟಾರ್‌ ಆಟಗಾರರು! ಸಾಂಭವ್ಯ ಆಟಗಾರರ ಪಟ್ಟಿ ರಿಲೀಸ್‌ ಮಾಡಿದ ಬೆಂಗಳೂರು ತಂಡ?


ಈಗಿರುವಾಗ ನತಾಶ, ಈಗ ದಿಶಾ ಪಟಾನಿಯ ವದಂತಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ದಿಶಾ ಪಟಾನಿ ಅವರ ರೂಮರ್ಡ್‌ ಬಾಯ್‌ಫ್ರೆಂಡ್‌ ಅಲೆಕ್ಸಾಂಡರ್‌ನೊಂದಿಗೆ ಮಿರರ್‌ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ತನ್ನ ವ್ಯಾಯಾಮದ ನಂತರದ ಚಿತ್ರದಲ್ಲಿ, ನತಾಶ  ಕಪ್ಪು ಬಿಗಿಯುಡುಪು ಮತ್ತು ಕನ್ನಡಕಗಳೊಂದಿಗೆ ನಿಯಾನ್ ಕ್ರಾಪ್ ಟಾಪ್ ಧರಿಸಿರುವುದನ್ನು ಕಾಣಬಹುದು. 


ಮುಂಬೈಗೆ ಆಗಮಿಸಿದ ಕೆಲವೇ ಗಂಟೆಗಳ ನಂತರ, ನತಾಶ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿಸಂಗೀತವನ್ನು ಕೇಳುತ್ತಾ ನಗರದ ಮೂಲಕ ಚಾಲನೆ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಜೊತೆಗೆ, "ಮುಂಬೈ ರೈನ್ಸ್ (ಮಳೆ ಎಮೋಜಿ)" ಎಂದು ಬರೆದುಕೊಂಡು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ. 


ನಟಾಸಾ ಹಾರ್ದಿಕ್‌ನಿಂದ ಬೇರ್ಪಟ್ಟು ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ಮೇ 31, 2020 ರಂದು, ನತಾಸಾ ಮತ್ತು ಹಾರ್ದಿಕ್ ವಿವಾಹವಾಗಿದ್ದರು, ಅದೇ ವರ್ಷದ ಜುಲೈ 30 ರಂದು, ಅವರ ಮಗ ಅಗಸ್ತ್ಯ ಜನಿಸಿದನು. ಹಲವು ದಿನಗಲಿಂದ ಈ ಇಬ್ಬರ ವಿಚ್ಛೆದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು, ಇದರ ಬೆನ್ನಲ್ಲೆ ಈ ಜೋಡಿ ತಮ್ಮ ಇನ್ಸ್ಟಾಗ್ರಾಮ್‌ ಕಾತೆಯಲ್ಲಿ ತಮ್ಮ ವಿಚ್ಛದನದ ಕುರಿತು ಅಧಿಕೃತವಾಗಿ ಹಂಚಿಕೊಂಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.