Nathan Bracken: ಒಂದು ಕಾಲದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡುತ್ತಿದ್ದ ಟೀಂ ಇಂಡಿಯಾದ ಬ್ಯಾಟರ್‌ ವಿರೇಂದ್ರ ಸೆಹ್ವಾಗ್‌ ಅವರ ಬೆವರಿಳಿಸಿದ್ದ ಆಟಗಾರ ಎಲ್ಲಾ ಬ್ಯಾಟ್ಸ್‌ಮೆನ್‌ಗಳಿಗೂ ತಲೆ ನೋವಾಗಿ ಪರಿಣಮಿಸಿದ್ದರು. ಆತ ಬೇರೆ ಯಾರೂ ಅಲ್ಲ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ನಾಥನ್ ಬ್ರಾಕೆನ್. ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ಅವರಿಗಾಗಿ ಕೋಟಿಗಟ್ಟಲೆ ಖರ್ಚು ಮಾಡಲು ರೆಡಿಯಾಗಿತ್ತು, ಆದರೆ ಅವರು ಆರ್‌ಸಿಬಿ ತಂಡದ ಪರ ಆಟವಾಡಲು ನೋ ಎಂದಿದ್ದರು.


COMMERCIAL BREAK
SCROLL TO CONTINUE READING

46ರ ಹರೆಯದ ಬ್ರಾಕೆನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿ ಇದೀಗ ಒಂದು ದಶಕಕ್ಕೂ ಹೆಚ್ಚು ಕಾಲವಾಗಿದೆ. 2009ರಲ್ಲಿ ಆಸ್ಟ್ರೇಲಿಯಾ ಪರ ಕೊನೆಯ ಪಂದ್ಯವನ್ನು ಆಡಿದ ಇವರು, ಆಸ್ಟ್ರೇಲಿಯಾ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿರುವ ಬ್ರಕೆನ್ ಅವರ ಖಾತೆಯಲ್ಲಿ 200ಕ್ಕೂ ಹೆಚ್ಚು ವಿಕೆಟ್‌ಗಳಿವೆ. 174 ವಿಕೆಟ್‌ಗಳೊಂದಿಗೆ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ.


ಇದನ್ನೂ ಓದಿ: IPL 2025: ಮ್ಯಾಕ್ಸಿಗೆ ಒಲಿದ ಅದೃಷ್ಟ!ಮೂವರು ಆಟಗಾರರ ಕೈ ಬಿಟ್ಟ RCB


2011 ರಲ್ಲಿ ಮೊಣಕಾಲಿನ ಗಾಯದಿಂದಾಗಿ ನಾಥನ್ ಬ್ರಾಕೆನ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿದ್ದರು, ಇದರ ನಂತರ ಆರ್‌ಸಿಬಿ ತಂಡ ಈ ವೇಗಿಯ ಜೊತೆಗೆ ರೂ. 1.3 ಕೋಟಿ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದರು. ಆದರೆ ನಾಥನ್ ಬ್ರಾಕೆನ್ ಈ  ಒಪ್ಪಂದವನ್ನು ನಿರಾಕರಿಸಿದ್ದರು. 


ಐಪಿಎಲ್‌ನಲ್ಲಿ ಕೋಟ್ಯಾಂತರ ಆಫರ್ ತಿರಸ್ಕರಿಸಿದ ಈ ಬೌಲರ್ ಸದ್ಯ ಸಿಡ್ನಿಯ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಭಾರತದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಾಥನ್ ಬ್ರಾಕನ್ ಸೆಹ್ವಾಗ್ ಅವರನ್ನು ಗಂಭೀರವಾಗಿ ಕಾಡಿದರು.


ನಾಥನ್ ಬ್ರಾಕೆನ್ ಮತ್ತು ವೀರೇಂದ್ರ ಸೆಹ್ವಾಗ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಟೆಸ್ಟ್, ODI ಮತ್ತು T20 ಸೇರಿದಂತೆ 16 ಇನ್ನಿಂಗ್ಸ್‌ಗಳಲ್ಲಿ, ಬ್ರಾಕನ್ ಸೆಹ್ವಾಗ್‌ಗೆ 148 ರನ್ ನೀಡಿ 7 ಬಾರಿ ಔಟಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.