Navdeep Saini: ಭಾರತದ ವೇಗದ ಬೌಲರ್ ನವದೀಪ್ ಸೈನಿ ತಮ್ಮ ಬಹುಕಾಲದ ಗೆಳತಿ ಸ್ವಾತಿ ಅಸ್ತಾನಾ ಅವರನ್ನು ವಿವಾಹವಾದರು. ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು.. "ನನ್ನ ಬಹುಕಾಲದ ಪ್ರಿಯತಮೆ ಸ್ವಾತಿಯನ್ನು ಮದುವೆಯಾಗಿದ್ದೇನೆ, ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದೇವೆ, ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿಯನ್ನು ನಾನು ಬಯಸುತ್ತೇನೆ" ಎಂದು ನವದೀಪ್ ಸೈನಿ ತಮ್ಮ ಅಭಿಮಾನಿಗಳು ಮತ್ತು ಹಿರಿಯರ ಆಶೀರ್ವಾದವನ್ನು ಕೋರಿದ್ದಾರೆ.. 


COMMERCIAL BREAK
SCROLL TO CONTINUE READING

ಕ್ರಿಕೆಟಿಗರಾದ ರಾಹುಲ್ ತೆವಾಟಿಯಾ, ಮೊಹ್ಸಿನ್ ಖಾನ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್ ಅವರು ನವದೀಪ್ ಸೈನಿ ಅವರ ವಿವಾಹಕ್ಕೆ ಶುಭ ಕೋರಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಅಭಿನಂದನಾ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.. 


ಇದನ್ನೂ ಓದಿ-ಭಾರತದ ಟಿ20 ಕ್ರಿಕೆಟ್’ಗೆ ಸಿಕ್ಕಾಯ್ತು ಪರ್ಫೆಕ್ಟ್ ಮ್ಯಾಚ್ ವಿನ್ನರ್! ಈತ ಎಂಟ್ರಿಯಾಗ್ತಿದ್ದಂತೆ ಸಿಕ್ಸರ್ ಸುರಿಮಳೆ ಗ್ಯಾರಂಟಿ


ಆದರೆ ಇದೀಗ ನವದೀಪ್ ಸೈನಿ ತಮ್ಮ ಬಹುಕಾಲದ ಗೆಳತಿ ಸ್ವಾತಿ ಅಸ್ತಾನಾ ಅವರ ಕುರಿತು ಬಾರೀ ಚರ್ಚೆಯಾಗುತ್ತಿದ್ದು.. ಯಾರೀಕೆ ಎಂದು ತಿಳಿದುಕೊಳ್ಳಲು ಎಲ್ಲರೂ ಕುತೂಹಲರಾಗಿದ್ದಾರೆ..  ಸ್ವಾತಿ ಫ್ಯಾಷನ್, ಟ್ರಾವೆಲ್ ಮತ್ತು ಲೈಪ್‌ಸ್ಟೈಲ್‌ ಬ್ಲಾಗರ್....‌ ಜೊತೆಗೆ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ.. ಇವರ ಇನ್‌ಸ್ಟಾಗ್ರಾಮ್ ನಲ್ಲಿ 80,000 ಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. 


ಇನ್ನು ನವದೀಪ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಪರ ಆಡುತ್ತಿದ್ದಾರೆ. ನವದೀಪ್ ಆಗಸ್ಟ್ 3, 2019ರ T20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದು..ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು. ಸೈನಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 2 ಟೆಸ್ಟ್, 8 ODI ಮತ್ತು 11 T20 ಪಂದ್ಯಗಳನ್ನು ಆಡಿದ್ದಾರೆ. 2020-21ರಲ್ಲಿ, ನವದೀಪ್ ಅವರು ಆಸ್ಟ್ರೇಲಿಯಾ ವಿರುದ್ಧ 2- ಟೆಸ್ಟ್ ಸರಣಿಯನ್ನು ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.


ಇದನ್ನೂ ಓದಿ-T20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾವನ್ನು ಈ ಮ್ಯಾಚ್ ವಿನ್ನರ್ ಮುನ್ನಡೆಸಲಿ- ಗೌತಮ್ ಗಂಭೀರ್ ನಾಯಕನನ್ನಾಗಿ ಸೂಚಿಸಿದ್ದು ಯಾರನ್ನ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ