ಮಹಿಳಾ ಕುಸ್ತಿಯಲ್ಲಿ ಇತಿಹಾಸ ಸೃಷ್ಟಿಸಿದ ನವಜೋತ್ ಕೌರ್
ಬಿಷ್ಕೆಕ್: ನವಜೋತ್ ಕೌರ್ ಹಿರಿಯ ಮಹಿಳಾ ಕುಸ್ತಿ ಏಷ್ಯನ್ ಚಾಂಪಿಯನ್ಶಿಪ್ ನ 65 ಕೆಜಿಯ ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ವರ್ಣ ಪದಕ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ನವಜೋತ್ ಕೌರ್ ಜಪಾನಿನ ಮಿಯಾ ಇಮಾಯ್ 9-1 ರನ್ನು ಮಹಿಳಾ ಕುಸ್ತಿಯ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಸೋಲಿಸಿ ಚಿನ್ನದ ಪದಕವನ್ನು ಕೊರಳಿಗೆರಿಸಿಕೊಂಡರು. ಇದು ಸಧ್ಯ ನಡೆಯುತ್ತಿರುವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೊದಲ ಚಿನ್ನದ ಪದಕವಾಗಿದೆ.
ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್ ರವರು 62 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಝಾಕಿಸ್ತಾನ್ನ ಆಯುಲಂಮ್ ಕಸ್ಸೈವಾವಾ ವಿರುದ್ದ 10-7ರ ಅಂತರದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಆ ಮೂಲಕ ಭಾರತವು ಒಟ್ಟು ಆರು ಪದಕಗಳನ್ನು ಗೆದ್ದುಕೊಂಡಿದೆ ಇದರಲ್ಲಿ ಚಿನ್ನ, ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಿವೆ.