ನವದೆಹಲಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 51 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಬಾಕ್ಸರ್ ಮೇರಿ ಕೋಮ್ ಟರ್ಕಿಯ ಬುಸೆನಾಜ್ ಕ್ಯಾಕಿರೊಗ್ಲು ವಿರುದ್ಧ ಸೋಲನ್ನು ಅನುಭವಿಸಿದರು. ಆ ಮೂಲಕ ಅವರು ಕೇವಲ ಕಂಚಿನ ಪದಕಕ್ಕೆ ಸಮಾಧಾನಪಡುವಂತಾಯಿತು.


COMMERCIAL BREAK
SCROLL TO CONTINUE READING

ಮೂರನೇ ಶ್ರೇಯಾಂಕಿತ ಮೇರಿ ಕೋಮ್ ಎರಡನೇ ಶ್ರೇಯಾಂಕಿತ ಕ್ಯಾಕಿರೊಗ್ಲು ವಿರುದ್ಧ 1-4ರ ಅಂತರದಲ್ಲಿ ಸೋಲನ್ನು ಅನುಭವಿಸಿದರು ,ಕ್ಯಾಕಿರೊಗ್ಲು ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು ಯುರೋಪಿಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ.



ಆರಂಭಿಕ ಸುತ್ತಿನಲ್ಲಿ ಮೊದಲ ಹೆಜ್ಜೆ ಇಡಲು ಇಬ್ಬರೂ ಬಾಕ್ಸರ್ಗಳು ಹಿಂಜರಿಯುತ್ತಿದ್ದರು, ಅಂತಿಮ ಮೂರು ನಿಮಿಷಗಳಲ್ಲಿ ಇಬ್ಬರೂ ಬಾಕ್ಸರ್ಗಳು ಮುಂಚೂಣಿಯಲ್ಲಿದ್ದರು, ಆದರೆ ಕ್ಯಾಕಿರೊಗ್ಲು ಅಂತಿಮವಾಗಿ ಅಕ್ರಮಣಕಾರಿಯಾಗಿ ಆಟವಾಡಿದರು. ಮೇರಿಕೊಂ ಅವರು ಈ ಪಂದ್ಯದಲ್ಲಿ ಸೋತರು ಕೂಡ ನೂತನ ದಾಖಲೆಯನ್ನು ನಿರ್ಮಿಸಿದರು. 51 ಕೆಜಿ ವಿಭಾಗದಲ್ಲಿ ಮೇರಿ ಕೊಂ ಅವರು ಮೊದಲ ಬಾರಿಗೆ ವಿಶ್ವ ಕಂಚಿನ ಪದಕವನ್ನು ಪಡೆದರು.


ಮೇರಿ ಕೋಮ್ ಆರು ವಿಶ್ವ ಪ್ರಶಸ್ತಿಗಳಲ್ಲದೆ ಒಲಿಂಪಿಕ್ ಕಂಚಿನ ಪದಕ (2012), ಐದು ಏಷ್ಯನ್ ಪ್ರಶಸ್ತಿಗಳು, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳು ಜೊತೆಗೆ ಹಲವಾರು ಅಂತರರಾಷ್ಟ್ರೀಯ ಉನ್ನತ ಸ್ಥಾನಗಳನ್ನು ಅವರು ಹೊಂದಿದ್ದಾರೆ.


ಸಾಯಂಕಾಲದ ಕ್ವಾರ್ಟರ್‌ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಯುಲಿಯಾನೋವಾ ಅಸೆನೊವಾ ಅವರನ್ನು ಹಿಂದಿಕ್ಕಿದ ಮಂಜು ರಾಣಿ (48 ಕೆಜಿ) ಥೈಲ್ಯಾಂಡ್‌ನ ಚುತಮಾತ್ ರಾಕ್ಸತ್ ವಿರುದ್ಧ ಸೆಣಸಲಿದ್ದಾರೆ.