Neeraj Chopra : ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 25 ವರ್ಷಕ್ಕೆ ನೀರಜ್ ಕಾಲಿಟ್ಟಿದ್ದಾರೆ. ಈ ವೇಳೆ ನೀವು ಗೋಲ್ಡನ್‌ ಬಾಯ್‌ ಕುರಿತು ಕೆಲವೊಂದಿಷ್ಟು ವಿಶೇಷತೆಗಳನ್ನು ತಿಳಿದುಕೊಳ್ಳಲೆಬೇಕು. ಪ್ರತಿಷ್ಠಿತ ಒಲಿಂಪಿಕ್ಸ್‌ನಲ್ಲಿ (ಟೋಕಿಯೊ ಒಲಿಂಪಿಕ್ಸ್ 2020) ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದ ಮೊದಲ ಟ್ರ್ಯಾಕ್ ಮತ್ತು ಅಥ್ಲೀಟ್ ಅಂದ್ರೆ ನೀರಜ್‌. ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ವೇದಿಕೆಯಲ್ಲಿ ಭಾರತ ಹೆಮ್ಮೆ ಪಡುವಂತೆ ಮಾಡಿದ ನೀರಜ್ ಯುವಕರಿಗೆ ಮಾದರಿಯಾಗಿದ್ದಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದ ಹುಡುಗ ನೀರಜ್ ಚೋಪ್ರಾಡಿ ಸತೀಶ್ ಕುಮಾರ್ ಚೋಪ್ರಾ ಮತ್ತು ಸರೋಜ್ ಬಾಲಾದೇವಿ ದಂಪತಿಗೆ 24 ಡಿಸೆಂಬರ್ 1997 ರಂದು ಜನಿಸಿದರು. ನೀರಜ್ ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಬಾಲ್ಯದಿಂದಲೂ ಚೆನ್ನಾಗಿ ಓದಿದ್ದ ನೀರಜ್ 2016ರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು ಸುಬೇದಾರ್ ಹುದ್ದೆಯೊಂದಿಗೆ ಸೇನೆಗೆ ಸೇರಿದ್ದರು. ಚೋಪ್ರಾಗೆ ಬಾಲ್ಯದಿಂದಲೂ ಆಹಾರದ ಮೇಲೆ ಹೆಚ್ಚು ಪ್ರೀತಿ ಇತ್ತು ಇದರಿಂದ ಅವರ ಹೆಚ್ಚಾಗಿತ್ತು. ತೂಕ ಇಳಿಸಿಕೊಳ್ಳಲು ಜಾಗಿಂಗ್ ಮಾಡಲು ಶಿವಾಜಿ ಸ್ಟೇಡಿಯಂಗೆ ಹೋಗುತ್ತಿದ್ದರು. ಅಲ್ಲಿಯೇ ಅವರು ಮೊದಲ ಬಾರಿಗೆ ಜಾವೆಲಿನ್ ಎಸೆತವನ್ನು ನೋಡಿದರು.


ಇದನ್ನೂ ಓದಿ: IPL Auction 2023: CSK ಸೇರಿದ ವಿಶ್ವದ ಅತ್ಯಂತ ಅಪಾಯಕಾರಿ ‘ತ್ರಿಮೂರ್ತಿ’ಗಳು: ಇತರ ತಂಡಗಳಲ್ಲಿ ನಡುಕ ಶುರು


ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತವನ್ನು ಇಷ್ಟಪಡುತ್ತಿದ್ದರು, ಅದು ಅವರಿಗೆ ತುಂಬಾ ಇಂಟ್ರಸ್ಟಿಂಗ್‌ ಅನಿಸಿತ್ತು. ಹಾಗಾಗಿ ಪ್ರತಿನಿತ್ಯ ಶಿವಾಜಿ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದರು. ದಿನದಿಂದ ದಿನಕ್ಕೆ ಆಟವನ್ನು ಬಹಳ ಗಂಭೀರವಾಗಿ ತೆಗೆದುಕೊಂಡರು. ಎಷ್ಟರಮಟ್ಟಿಗೆ ಅಂದ್ರೆ ಜಾವೆಲಿನ್ ಅವರ ಬದುಕಿನ ಭಾಗವಾಗಿತ್ತು. 2013ರಲ್ಲಿ ಉಕ್ರೇನ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ನೀರಜ್ ಅಬ್ಬರದಿಂದಲೇ ಹೊರಬಂದಿದ್ದರು. 2014ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಜೂನಿಯರ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ, ಅವರು ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 87.58 ಮೀಟರ್‌ಗಳಷ್ಟು ಜಾವೆಲಿನ್ ಅನ್ನು ಎಸೆದು ಚಿನ್ನದ ಪದಕವನ್ನು ಗೆದ್ದು, ಮಿಂಚಿದರು.


  • ಪೋಲೆಂಡ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 86.48 ಮೀಟರ್‌ಗಳಷ್ಟು ಜಾವೆಲಿನ್ ಎಸೆಯುವ ಮೂಲಕ ಸುದ್ದಿ ಮಾಡಿದರು. ಲಾಟ್ವಿಯಾದ ಗಿಗಿಸ್ಮಂಡ್ಸ್ ಸಿರ್ಮೈಸ್ ಅವರು 84.69 ಮೀ ಹಿಂದಿನ ದಾಖಲೆಯನ್ನು ಮುರಿದರು.

  • ನೀರಜ್ ಚೋಪ್ರಾ 2021 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆದರು. 88.13 ಮೀಟರ್ ದೂರ ಜಾವೆಲಿನ್ ಎಸೆದ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದರು. ನೀರಜ್‌ಗಿಂತ ಮೊದಲು ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.

  • ನೀರಜ್ ಚೋಪ್ರಾ 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್‌ಗಳ ಸಾಂಪ್ರದಾಯಿಕ ಎಸೆತದೊಂದಿಗೆ ಚಿನ್ನ ಗೆದ್ದರು. ಕ್ರಿಕೆಟಿಗರು ಅಧಿಪತ್ಯವಿರುವ ಭಾರತದಲ್ಲಿ ಹೀರೋ ಆದರು’ ಎಂದರು.

  • ನೀರಜ್ ಚೋಪ್ರಾ 2022 ರ ವಿಶ್ವ ಅಥ್ಲೆಟಿಕ್ಸ್ ಬೆಳ್ಳಿ ಮತ್ತು ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.

  • ನೀರಜ್ ಕಳೆದ ವರ್ಷ ಎರಡು ಬಾರಿ ತಮ್ಮ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಸ್ಟಾಕ್‌ಹೋಲ್ಡ್ ಡೈಮಂಡ್ ಲೀಗ್‌ನಲ್ಲಿ 89.94 ಮೀಟರ್ ಎಸೆದ ಪುರುಷರ ಜಾವೆಲಿನ್ ದಾಖಲೆಯನ್ನು ಹೊಂದಿದೆ. ಅವರು 90 ಮೀಟರ್ ಮಾರ್ಕ್ ಅನ್ನು ಮೀರಿಸುವ ಗುರಿ ಹೊಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.