2020ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೆ ದಾಖಲೆ ಬರೆದಿದ್ದಾರೆ. ಜೂನ್‌ 30ರಂದು ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್‌ನಲ್ಲಿ 89.94 ಮೀ. ಜಾವೆಲಿನ್‌ ಓಪನಿಂಗ್ ಥ್ರೋ ಮಾಡುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಲೀಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಜೂನ್‌ ತಿಂಗಳ ಆರಂಭದಲ್ಲಿ ಫಿನ್‌ಲ್ಯಾಂಡ್‌ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.30 ಮೀ. ಜಾವೆಲಿನ್‌ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು. ಇದೀಗ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ತನ್ನದೇ ಆದ ದಾಖಲೆಯನ್ನು ಮುರಿದಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಎರಡು ಬಾರಿ ದಾಖಲೆ ಮುರಿದಿದ್ದಾರೆ. 


ಇದನ್ನೂ ಓದಿ: Parijat Plant Importance: ಮನೆಯ ಈ ದಿಕ್ಕಿನಲ್ಲಿ ಈ ಗಿಡವಿರಲಿ, ಸಾಕ್ಷಾತ್ ಲಕ್ಷ್ಮಿಯೇ ಬಂದು ನೆಲೆಸುತ್ತಾಳೆ


ಅದ್ಭುತ ಫಾರ್ಮ್‌ನಲ್ಲಿ ಮುಂದುವರೆಯುತ್ತಿರುವ ಚೋಪ್ರಾ ದಾಖಲೆಗಳ ವೀರ ಎಂದೇ ಹೇಳಬಹುದು. ಇನ್ನು 90ರ ಗಡಿ ತಲುಪಲು ಕೇವಲ ಆರು ಸೆಂಟಿ ಮೀಟರ್‌ ಅಂತರ ಬಾಕಿ ಇತ್ತು. 


ಇನ್ನು ನೀರಜ್‌ ಚೋಪ್ರಾ ಅವರ ಸಾಧನೆಗಳ ಬಗ್ಗೆ ಮೆಲುಕು ಹಾಕೋದಾದ್ರೆ, ಪೋಲೆಂಡ್‌ನಲ್ಲಿ ನಡೆದ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಅವರು 86.48 ಮೀಟರ್‌ಗಳ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಗೆಲುವಿನ ಹಾದಿ ಹಿಡಿದಿದ್ದರು. ಜೊತೆಗೆ 20 ವರ್ಷದೊಳಗಿನವರ ಆಟದಲ್ಲಿ ವಿಶ್ವ ದಾಖಲೆಯನ್ನು ಬರೆದರು. 


ಇನ್ನು ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ 2016ರ IAAF ವರ್ಲ್ಡ್‌ ಅಂಡರ್‌ 20 ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಪಡೆದರು. ಅಷ್ಟೇ ಅಲ್ಲದೆ, ಈ ಗೆಲುವು ಒಲಿಂಪಿಕ್‌ ಪ್ರವೇಶಕ್ಕೆ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ನೀರಜ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 


ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಕ್ರೀಡೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ನೀರಜ್ ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. 


ಇದೀಗ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 89.94 ಮೀ ದೂರಕ್ಕೆ ಜಾವೆಲಿನ್‌ ಎಸೆದಿದ್ದಾರೆ. ಈ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ತಮ್ಮ ಮೂರನೇ ಪ್ರಯತ್ನದಲ್ಲಿ 90.31 ಮೀಟರ್ ಎಸೆದು 16 ವರ್ಷಗಳ ಹಳೆಯ ಕೂಟ ದಾಖಲೆಯನ್ನು ಮುರಿದ್ದಾರೆ. 


ಇದನ್ನೂ ಓದಿ: ಈ ರಾಶಿಯವರ ಮೇಲೆ ಲಕ್ಷ್ಮೀ ಕೃಪಾ ಕಟಾಕ್ಷ: ಇವರ ಕೈಯಲ್ಲಿ ಹಣ ಕಡಿಮೆಯಾಗೋದೆ ಇಲ್ಲ!


ಜೆಕ್ ಗಣರಾಜ್ಯದ ಜಾನ್ ಝೆಲೆಜ್ನಿ ಜಾವೆಲಿನ್ ಎಸೆತದಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಮೇ 1996 ರಲ್ಲಿ ಬರೆದಿದ್ದ ವಿಶ್ವ ದಾಖಲೆಯನ್ನು ಝೆಲೆಜ್ನಿ 98.48 ಮೀ ದೂರಕ್ಕೆ  ಜಾವೆಲಿನ್‌ ಎಸೆಯುವ ಮೂಲಕ ಮುರಿದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.