Neetha Ambani: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪೂರ್ವ ವಿವಾಹ ಸಂಭ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಅಂಬಾನಿ ಕುಟುಂಬ ಸಂಗೀತ ಕಾರ್ಯಕ್ರಮ ಆಯೋಜಿದ್ದು, ರಾಜಕೀಯ, ಸಿನಿಮಾ, ಕ್ರೀಡಾ ಕ್ಷೇತ್ರದ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಟಿ20 ವಿಶ್ವಕಪ್ ವಿಜೇತ ಹಾಗೂ ಮುಂಬೈ ಇಂಡಿಯನ್ಸ್ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಈ ಸಮಾರಂಭದಲ್ಲಿ ಅಪರೂಪದ ಗೌರವಕ್ಕೆ ಪಾತ್ರರಾದರು.


COMMERCIAL BREAK
SCROLL TO CONTINUE READING

ಸಂಗೀತ ಸಮಾರಂಭದ ವೇದಿಕೆಯಲ್ಲಿ ಈ ಬಾರಿಯ ವಿಶ್ವಕಪ್ ವಿಜೇತರನ್ನು ನೀತಾ ಅಂಬಾನಿ ಆತ್ಮೀಯವಾಗಿ ಆಹ್ವಾನಿಸಿ ಗೌರವಿಸಿದರು, ಅಲ್ಲಿದ್ದ ಎಲ್ಲ ಸೆಲೆಬ್ರಿಟಿಗಳು ಚಪ್ಪಾಳೆ ತಟ್ಟಿ ಆಟಗಾರರನ್ನು ಅಭಿನಂದಿಸಿದರು. ಅದರೊಂದಿಗೆ ಇಡೀ ಆವರಣ ಟೀಂ ಇಂಡಿಯಾ ಘೋಷಣೆಗಳಿಂದ ಮೊಳಗುತ್ತಿತ್ತು. ಈ ಸಂದರ್ಭದಲ್ಲಿ ನೀತಾ ಅಂಬಾನಿ ಟೀಂ ಇಂಡಿಯಾದ  ಯಶಸ್ಸನ್ನು ಶ್ಲಾಘಿಸಿ ಕಣ್ಣೀರಿಟ್ಟರು.


ಮೊದಲು ರೋಹಿತ್ ಶರ್ಮಾರನ್ನು ವೇದಿಕೆಗೆ ಆಹ್ವಾನಿಸಿದ ನೀತಾ ಅಂಬಾನಿ ಅವರಿಗೆ ರೋಹಿತ್‌ರನ್ನು ನೋಡುತ್ತಿದ್ದಂತೆ ದುಃಖ ತಡೆಯಲಾಗಲಿಲ್ಲ. ಹಾರ್ದಿಕ್‌, ಸೂರ್ಯಾ ಕುಮಾರ್‌ ಹಾಗೂ ರೋಹಿತ್‌ರನ್ನು ವೇದಿಕೆ ಮೇಲೆ ಆಹ್ವಾನಿಸಿದ ನೀತಾ ಅಂಬಾನಿ ರೋಹಿತ್‌ ವೇದಿಕೆ ಮೇಲೆ ಬರುತ್ತಿದ್ದಂತೆ ಕಣ್ಣಿರಿಟ್ಟರು. 


'ಕಷ್ಟಗಳು ಎಂದಿಗೂ ಮುಗಿಯುವುದಿಲ್ಲ. ಆದರೆ ಅದರ ವಿರುದ್ಧ ನಿಂತು ಹೋರಾಡಿದರೆ ಮಾತ್ರ ಮುನ್ನಡೆಯಲು ಸಾಧ್ಯ' ಎಂದು ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ಎದ್ದ ಟೀಕೆಯನ್ನು ಉದ್ದೇಶಿಸಿ ನೀತಾ ಅಂಬಾನಿ ಭಾವುಕರಾದರು. ಬಳಿಕ ಮುಖೇಶ್ ಅಂಬಾನಿ ವಿಶ್ವಕಪ್ ವಿಜೇತರನ್ನು ಅಭಿನಂದಿಸಿದರು. 2011ರ ನಂತರ ದೇಶಕ್ಕೆ ವಿಶ್ವಕಪ್ ನೀಡಿ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದರು. ಈ ಸಮಾರಂಭದಲ್ಲಿ ರೋಹಿತ್, ಸೂರ್ಯ ಮತ್ತು ಹಾರ್ದಿಕ್ ಕಪ್ಪು ಬಟ್ಟೆ ಧರಿಸಿ ಮಿಂಚಿದರು. ಟೀಂ ಇಂಡಿಯಾದ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಮೊನ್ನೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ ಕುಟುಂಬದ ಸದಸ್ಯರು ಮನರಂಜನೆಯೊಂದಿಗೆ ಮನರಂಜನೆ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.