ಭಾರತ-ಎ ಮತ್ತು U-19 ತಂಡಕ್ಕೆ ನೂತನ ಕೋಚ್ಗಳ ನೇಮಕ
ರಾಹುಲ್ ದ್ರಾವಿಡ್ ಅವರನ್ನು 2015 ರಲ್ಲಿ ಭಾರತ-ಎ ಮತ್ತು 19 ವರ್ಷದೊಳಗಿನವರ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಈ ಜವಾಬ್ದಾರಿಯನ್ನು ಅವರು 4 ವರ್ಷಗಳ ಕಾಲ ನಿರ್ವಹಿಸಿದ್ದರು.
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, 'ದಿ ವಾಲ್' ಖ್ಯಾತಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇನ್ನು ಮುಂದೆ ಭಾರತ ಎ ಮತ್ತು ಅಂಡರ್ -19 ತಂಡಕ್ಕೆ ಕೋಚಿಂಗ್ ನೀಡುವುದಿಲ್ಲ. ಹೌದು, ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ದ್ರಾವಿಡ್ ಅವರನ್ನು ಕ್ರಿಕೆಟ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೀತಾನ್ಶು ಕೊಟಕ್(Sitanshu Kotak) ಅವರನ್ನು ಭಾರತ-ಎ ತಂಡದ ಕೋಚ್ ಆಗಿಯೂ ಮತ್ತು ಪರಾಸ್ ಮಹಮ್ರೆ (Paras Mhambrey) ಅವರನ್ನು ಅಂಡರ್ -19 ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಆದರೆ, ಮುಂದಿನ ಕೆಲವು ತಿಂಗಳುಗಳವರೆಗೆ ಈ ಇಬ್ಬರಿಗೂ ಈ ಜವಾಬ್ದಾರಿಯನ್ನು ವಹಿಸಲಾಗಿದೆ.
ರಾಹುಲ್ ದ್ರಾವಿಡ್ ಅವರನ್ನು 2015 ರಲ್ಲಿ ಭಾರತ ಎ (India A) ಮತ್ತು ಅಂಡರ್ -19 ತಂಡದ (India A)) ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅಂದಿನಿಂದ ಅವರು ಈ ಹುದ್ದೆಗಳನ್ನು ಅಲಂಕರಿಸಿದರು. ಐಸಿಸಿ ವರದಿಯ ಪ್ರಕಾರ, ಮಾಜಿ ಸೌರಾಷ್ಟ್ರ ಬ್ಯಾಟ್ಸ್‌ಮನ್ ಕೊಟಕ್ ಇಂಡಿಯಾ ಎ ಮುಖ್ಯ ಕೋಚ್ ಮತ್ತು ಬ್ಯಾಟಿಂಗ್ ಕೋಚ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿರುವ ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರೊಂದಿಗೆ ಅವರು ತಂಡದಲ್ಲಿ ಕೆಲಸ ಮಾಡಲಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಕೊಲಂಬೊದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾರತದ ಮಾಜಿ ವೇಗದ ಬೌಲರ್ ಪ್ಯಾರಾಸ್ ಮಹಮ್ರೆ 19 ವರ್ಷದೊಳಗಿನವರ ತಂಡದ ಮುಖ್ಯ ಮತ್ತು ಬೌಲಿಂಗ್ ತರಬೇತುದಾರರಾಗಲಿದ್ದಾರೆ. ಅವರು ದ್ರಾವಿಡ್ ಅವರೊಂದಿಗೆ ಭಾರತ-ಎ ಮತ್ತು 19 ವರ್ಷದೊಳಗಿನವರ ತಂಡದಲ್ಲಿ ದೀರ್ಘಕಾಲ ಕೆಲಸ ಮಾಡಿದ್ದಾರೆ. ಅವರೊಂದಿಗೆ ಭಾರತದ ಮಾಜಿ ಬ್ಯಾಟ್ಸ್‌ಮನ್‌ಗಳಾದ ಹೃಷಿಕೇಶ್ ಕನಿತ್ಕರ್ ಮತ್ತು ಅಭಯ್ ಶರ್ಮಾ ಕಾರ್ಯ ನಿರ್ವಹಿಸಲಿದ್ದಾರೆ. ಇಬ್ಬರನ್ನೂ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ತರಬೇತುದಾರರನ್ನಾಗಿ ನೇಮಿಸಲಾಗಿದೆ.