Neil Wagner Announced Retirement: 12 ವರ್ಷಗಳ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಲು ನ್ಯೂಜಿಲೆಂಡ್ ಕ್ರಿಕೆಟಿಗ ನೀಲ್ ವ್ಯಾಗ್ನರ್ ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, ಮುಂಬರುವ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ನೀಲ್ ವ್ಯಾಗ್ನರ್’ಗೆ ಸ್ಥಾನವಿಲ್ಲ ಎಂದು ಆಯ್ಕೆಗಾರರು ತಿಳಿಸಿದ್ದರು, ಇದರ ನಂತರವೇ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತಿಂಗಳಾಂತ್ಯಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ: ಇಂದು ಎಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ದರ?


ನಿವೃತ್ತಿ ಘೋಷಿಸಿದ ವ್ಯಾಗ್ನರ್ ಮಾತನಾಡಿ, "ನೀವು ಬಹಳಷ್ಟು ಸಾಧಿಸಿರುತ್ತೀರಿ, ಹೀಗಿರುವಾಗ ಅವೆಲ್ಲವನ್ನು ಬಿಟ್ಟು ಹೋಗುವುದು ಸುಲಭವಲ್ಲ. ಆದರೆ ಈಗ ಬೇರೆಯವರು ಮುಂದೆ ಬಂದು ಈ ತಂಡವನ್ನು ಮುನ್ನಡೆಸುವ ಸಮಯ ಬಂದಿದೆ" ನಾನು ಟೆಸ್ಟ್ ಕ್ರಿಕೆಟ್ ಆಡುವ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ. ತಂಡವಾಗಿ ಸಾಧಿಸಿದ್ದಕ್ಕಾಗಿ ಹೆಮ್ಮೆಪಡುತ್ತೇನೆ” ಎಂದಿದ್ದಾರೆ.


ಮತ್ತಷ್ಟು ಮಾತನಾಡಿದ ವ್ಯಾಗ್ನರ್, "ನನ್ನ ವೃತ್ತಿಜೀವನದುದ್ದಕ್ಕೂ ಸ್ನೇಹ ಮತ್ತು ಬಾಂಧವ್ಯವನ್ನು ಪಾಲಿಸುತ್ತೇನೆ. ನಾನು ಇಂದು ಏನಾಗಿದ್ದೇನೋ… ಆ ಸ್ಥಾನಕ್ಕೆ ಬರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ತಂಡದ ಸದಸ್ಯರು ಯಾವಾಗಲೂ ನನಗೆ ಬಹಳಷ್ಟು ಹತ್ತಿರವಾಗಿದ್ದಾರೆ. ತಂಡಕ್ಕೆ ಉತ್ತಮವಾದದ್ದನ್ನು ಮಾಡಲು ನಾನು ಯಾವಾಗಲೂ ಬಯಸುತ್ತೇನೆ” ಎಂದು ನಿವೃತ್ತಿ ಘೋಷಿಸಿದ್ದಾರೆ.


ಇದನ್ನೂ ಓದಿ: ಹೊರಬಿತ್ತು ಮೊಹಮ್ಮದ್ ಶಮಿ ಹೆಲ್ತ್ ರಿಪೋರ್ಟ್: ಸ್ವತಃ ಫೋಟೋ ಶೇರ್ ಮಾಡಿ ಹೀಗಂದ ಸ್ಟಾರ್ ಬೌಲರ್


ನೀಲ್ ವ್ಯಾಗ್ನರ್ ಕ್ರಿಕೆಟ್ ಜೀವನ


ನೀಲ್ ವ್ಯಾಗ್ನರ್ ನ್ಯೂಜಿಲೆಂಡ್ ಪರ ಇದುವರೆಗೆ 64 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 260 ವಿಕೆಟ್‌’ಗಳನ್ನು ಕಬಳಿಸಿದ್ದಾರೆ. ಇದಲ್ಲದೇ ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ ಆಡಿದ 205 ಪಂದ್ಯಗಳಲ್ಲಿ 821 ವಿಕೆಟ್ ಪಡೆದಿದ್ದಾರೆ. ಮತ್ತೊಂದಡೆ ಟಿ20ಯನ್ನೂ ಅಬ್ಬರಿಸಿರುವ ಅವರು 86 ಟಿ20 ಪಂದ್ಯಗಳಲ್ಲಿ 95 ವಿಕೆಟ್ ಕಿತ್ತಿದ್ದಾರೆ. ವಿಶ್ವಕಪ್ ಸಮೀಪಿಸುತ್ತಿದ್ದಂತೆ ವ್ಯಾಗ್ನರ್ ನಿವೃತ್ತಿ ಘೋಷಿಸಿರುವುದು ತಂಡಕ್ಕೆ ಮಾತ್ರವಲ್ಲದೆ, ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.