New Zealand Team For India Series: ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದೆ. ಕಿವೀಸ್ ಪ್ರವಾಸದ ವೇಳೆ ಭಾರತ ಈ ತಿಂಗಳ 18 ರಿಂದ 30 ರವರೆಗೆ ಮೂರು ಟಿ20 ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಭಾರತ ವಿರುದ್ಧದ ಈ ಸರಣಿಗಾಗಿ ನ್ಯೂಜಿಲೆಂಡ್ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಟೀಂ ಇಂಡಿಯಾ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಇಬ್ಬರು ಪ್ರಮುಖ ಆಟಗಾರರನ್ನು ಆಯ್ಕೆಗಾರರು ಕೈ ಬಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಪಿಎಲ್ ಗೆ MS Dhoni ನಿವೃತ್ತಿ: ಟೀಂ ಇಂಡಿಯಾ ಕೋಚ್-ನಿರ್ದೇಶಕರಾಗಿ ಹೊಸ ಜವಾಬ್ದಾರಿ!


ಕೇನ್ ವಿಲಿಯಮ್ಸನ್ ಅವರು ಟಿ20 ಮತ್ತು ಏಕದಿನ ಸರಣಿಗಳಿಗೆ ನ್ಯೂಜಿಲೆಂಡ್ ನಾಯಕತ್ವ ವಹಿಸಲಿದ್ದಾರೆ. ಈ ಸರಣಿಯಿಂದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರನ್ನು ಕೈಬಿಡಲಾಗಿತ್ತು. ಇವರೊಂದಿಗೆ ಕಿವೀಸ್ ಓಪನರ್ ಮಾರ್ಟಿನ್ ಗಪ್ಟಿಲ್ ಕೂಡ ಏಕದಿನ ಮತ್ತು ಟಿ20 ತಂಡವನ್ನು ತೊರೆದಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಕಾಂಟ್ರಾಕ್ಟ್ ಆಟಗಾರರಿಂದ ಹೊರಗುಳಿದಿರುವುದರಿಂದ ಟ್ರೆಂಟ್ ಬೌಲ್ಟ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಮಾರ್ಟಿನ್ ಗಪ್ಟಿಲ್ ಅವರ ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್‌ನಲ್ಲಿ ಗಪ್ಟಿಲ್ ಬೆಂಚ್‌ಗೆ ಸೀಮಿತರಾಗಿದ್ದರು. ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಮಾರ್ಟಿನ್ ಗಪ್ಟಿಲ್ ಬದಲಿಗೆ ಫಿನ್ ಅಲೆನ್ ಈಗ ನ್ಯೂಜಿಲೆಂಡ್‌ನ ODI ಮತ್ತು T20I ತಂಡದಲ್ಲಿ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ.


ಭಾರತ ವಿರುದ್ಧದ T20I ಮತ್ತು ODI ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ವೇಗದ ಬೌಲರ್ ಆಡಮ್ ಮಿಲ್ನೆ ಬೌಲ್ಟ್ ಬದಲಿಗೆ ಸ್ಥಾನ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದ ಕೈಲ್ ಜೇಮಿಸನ್ ಹೊರಗುಳಿದಿದ್ದಾರೆ. ಟೀಂ ಇಂಡಿಯಾದಲ್ಲಿ ಅನೇಕ ವಿಶ್ವ ದರ್ಜೆಯ ಕ್ರಿಕೆಟಿಗರು ಇದ್ದಾರೆ ಎಂದು ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ. ತಮ್ಮ ತಂಡದೊಂದಿಗಿನ ಹೋರಾಟ ಕುತೂಹಲಕಾರಿಯಾಗಲಿದೆ ಎಂದರು. ಭಾರತ ಕಿವೀಸ್ ಗೆ ಭೇಟಿ ನೀಡಿದಾಗಲೆಲ್ಲ ಬಿರುಗಾಳಿ ಬೀಸುತ್ತದೆ ಎಂದು ತಮಾಷೆಯಾಗಿ ಹೇಳಿದರು.


ಭಾರತ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ:


ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲ್ಯೂಕ್ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.


ಇದನ್ನೂ ಓದಿ: Rohit Sharma ಸ್ಥಾನಕ್ಕೆ ಭಾರೀ ಪೈಪೋಟಿ: ಈ ಮೂವರಲ್ಲಿ ಯಾರಿಗೆ ಸಿಗುತ್ತೆ ನಾಯಕ ಪಟ್ಟ!


ನ್ಯೂಜಿಲೆಂಡ್ ODI ತಂಡ:


ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೆವೊನ್ ಕಾನ್ವೇ, ಲ್ಯೂಕ್ ಫರ್ಗುಸನ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.