New Zealand vs India: ಸೂಪರ್ ಮ್ಯಾಜಿಕ್ ನಲ್ಲಿ ಭಾರತಕ್ಕೆ ಮತ್ತೆ ಗೆಲುವು, ಮಿಂಚಿದ ಕನ್ನಡಿಗ ಕೆ.ಎಲ್.ರಾಹುಲ್
ವೆಲ್ಲಿ೦ಗ್ಟನ್ ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ ತಂಡವು ತನ್ನ ಗೆಲುವಿನಯಾನವನ್ನು ಮುಂದುವರೆಸಿದೆ. ವಿಶೇಷವೆಂದರೆ ಕಳೆದ ಪಂದ್ಯದಂತೆ ಈ ಪಂದ್ಯವು ಕೂಡ ಟೈ ಮೂಲಕ ಅಂತ್ಯಗೊಂಡಿತು.ಈ ಹಿನ್ನಲೆಯಲ್ಲಿ ಭಾರತ ತಂಡವು ಮತ್ತೆ ಸೂಪರ್ ಓವರ್ ನಲ್ಲಿ ಗೆಲುವಿನ ದಡ ದಾಟಿತು.ಆ ಮೂಲಕ ಸರಣಿಯಲ್ಲಿ 4-0 ರ ಮುನ್ನಡೆಯನ್ನು ಕಾಯ್ದುಕೊಂಡಿದೆ.
ನವದೆಹಲಿ: ವೆಲ್ಲಿ೦ಗ್ಟನ್ ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ ತಂಡವು ತನ್ನ ಗೆಲುವಿನಯಾನವನ್ನು ಮುಂದುವರೆಸಿದೆ. ವಿಶೇಷವೆಂದರೆ ಕಳೆದ ಪಂದ್ಯದಂತೆ ಈ ಪಂದ್ಯವು ಕೂಡ ಟೈ ಮೂಲಕ ಅಂತ್ಯಗೊಂಡಿತು.ಈ ಹಿನ್ನಲೆಯಲ್ಲಿ ಭಾರತ ತಂಡವು ಮತ್ತೆ ಸೂಪರ್ ಓವರ್ ನಲ್ಲಿ ಗೆಲುವಿನ ದಡ ದಾಟಿತು.ಆ ಮೂಲಕ ಸರಣಿಯಲ್ಲಿ 4-0 ರ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಭಾರತ ತಂಡಕ್ಕೆ ಬ್ಯಾಟಿಂಗ್ ಅವಕಾಶವನ್ನು ನೀಡಿತು. ಭಾರತ ತಂಡದ ಪರ ಕನ್ನಡಿಗ ಕೆ.ಎಲ್.ರಾಹುಲ್ 39, ಹಾಗೂ ಮನೀಶ್ ಪಾಂಡೆ 50 ರನ್ ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ165 ರನ್ ಕಲೆ ಹಾಕಿತು.ಭಾರತ ನೀಡಿದ ಈ ಸವಾಲನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ಕಾಲಿನ್ ಮುನ್ರೋ 64, ಟಿಮ್ ಸೈಫರ್ಟ್ 57,ರನ್ ಗಳ ನೆರವಿನಿಂದ ಗೆಲುವಿನ ಹಂತಕ್ಕೆ ಬಂದಿತ್ತಾದರೂ ದುರಾದೃಷ್ಟವಶಾತ್ ಇಬ್ಬರು ರನೌಟ್ ಗೆ ಬಲಿಯಾದರು.
ಕೊನೆಯ ಓವರ್‌ನಲ್ಲಿ ಏಳು ಅಗತ್ಯವಿದ್ದ ನ್ಯೂಜಿಲೆಂಡ್ ತಂಡಕ್ಕೆ ಅಂತಿಮ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಪಂದ್ಯವನ್ನು ಸೂಪರ್ ಓವರ್‌ಗೆ ತೆಗೆದುಕೊಂಡಿತು. ನ್ಯೂಜಿಲೆಂಡ್ ತಂಡವು ಸೂಪರ್ ಓವರ್ ನಲ್ಲಿ 13 ರನ್ ಗಳಿಸಿತು. ಭಾರತದ ಪರವಾಗಿ ಕೆ.ಎಲ್.ರಾಹುಲ್ ಮೊದಲ ಎಸೆತದಲ್ಲಿಯೇ ಸಿಕ್ಸರ್ ನಂತರ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಭಾರತದತ್ತವಾಲುವಂತೆ ಮಾಡಿದರು. ಕೊನೆಗೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ತಡಕ್ಕೆ ತಲುಪಿಸಿದರು.