ನವದೆಹಲಿ: ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ನಿಕೋಲಸ್ ಪೂರನ್ 40 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾ ವಿರುದ್ಧ  ಎರಡು ವಿಕೆಟ್ ಗಳ ಅಂತರದಿಂದ ಗೆಲುವನ್ನು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಪ್ರಧಾನಮಂತ್ರಿಗಳಿಂದ ನಿಲ್ದಾಣ ಅಭಿವೃದ್ಧಿಗೆ ಚಾಲನೆ


ವೆಸ್ಟ್ ಇಂಡೀಸ್ ತಂಡವು 153 ರನ್ ಗಳ ಗುರಿಯನ್ನು  ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಪೂರ್ಣಗೊಳಿಸಿತು.ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಜೊತೆಯಾಗಿ ವೆಸ್ಟ್ ಇಂಡೀಸ್ ಅನ್ನು 3.4 ಓವರ್‌ಗಳಲ್ಲಿ 32/3 ವಿಕೆಟ್ ಕಬಳಿಸಿ ಆಘಾತ ನೀಡಿದ್ದರು. ಆದರೆ ನಂತರ ಪೂರನ್ ನಾಯಕ ರೋವ್‌ಮನ್ ಪೊವೆಲ್ ಅವರೊಂದಿಗೆ ನಿರ್ಣಾಯಕ 50 ರನ್ ಜೊತೆಯಾಟವಾಡುವ ಮೂಲಕ ಪಂದ್ಯದ ಗತಿಯನ್ನು ಬದಲಿಸಿದರು.


ಇದನ್ನೂ ಓದಿ:  ಪಾಕ್ ನ ಸಿಂಧ್ ದಲ್ಲಿ ಹಳಿ ತಪ್ಪಿದ ರೈಲು, 15 ಸಾವು, 50 ಜನರಿಗೆ ಗಾಯ 


ಇದಕ್ಕೂ ಮೊದಲು, ತಿಲಕ್ 51(41) ಗಳಿಸಿದರು ಮತ್ತು ಭಾರತವು 3.3 ಓವರ್‌ಗಳಲ್ಲಿ 18/2 ಕ್ಕೆ ಕುಸಿದ ನಂತರ ಇಶಾನ್ ಕಿಶನ್ ಅವರೊಂದಿಗೆ ನಿರ್ಣಾಯಕ 42 ರನ್‌ಗಳ ಜೊತೆಯಾಟವಾಡಿದರು. ಭಾರತ ಆರಂಭದಲ್ಲೇ ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿತು. ನಂತರ ಇಶಾನ್ ಕಿಶನ್ 27(23) ರನ್ ಗಳಿಸಿ ವಿಕೆಟ್ ಒಪ್ಪಿಸಿದರು, ಸಂಜು ಸ್ಯಾಮ್ಸನ್ 7 ಎಸೆತದಲ್ಲಿ 7 ರನ್ ಗಳಿಸಿದರೆ. ಹಾರ್ದಿಕ್ ಪಾಂಡ್ಯ 24(18), ಅಕ್ಷರ್ ಪಟೇಲ್ 14(12) ರನ್ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.