Team Indiaದ ಈ ಅಪರೂಪದ ಪ್ರತಿಭೆಗೆ WTCಯಲ್ಲಿ ಇಲ್ಲ ಅವಕಾಶ! ವೃತ್ತಿಜೀವನ ಕೊನೆಗೊಳಿಸಿತೇ BCCI?
Mayank Agarwal: ಮಯಾಂಕ್ ಅಗರ್ವಾಲ್ ಪ್ರತಿಭಾವಂತನಾಗಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆ ಟೀಮ್ ಇಂಡಿಯಾದಲ್ಲಿ ಆಯ್ಕೆದಾರರು ಅವಕಾಶ ನೀಡಿಲ್ಲ. ಈ ಆಟಗಾರನನ್ನು ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್’ ಗೆ ಒ0ದೊಮ್ಮೆ ಹೋಲಿಸಲಾಗಿತ್ತು.
Mayank Agarwal: ಟೀಂ ಇಂಡಿಯಾದ ಪ್ರತಿಭಾವಂತ ಕ್ರಿಕೆಟಿಗನ ವೃತ್ತಿಜೀವನವನ್ನು ಆಯ್ಕೆಗಾರರು ಬಹುತೇಕ ಅಂತ್ಯಗೊಳಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ (ಡಬ್ಲ್ಯುಟಿಸಿ) ಫೈನಲ್ ಗೆ ಆಯ್ಕೆಗಾರರು ಈ ಡ್ಯಾಶಿಂಗ್ ಕ್ರಿಕೆಟಿಗನಿಗೆ ಅವಕಾಶವನ್ನೂ ನೀಡಲಿಲ್ಲ. ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಫೈನಲ್ ಗೆ ಆಯ್ಕೆಗಾರರು ಟೀಮ್ ಇಂಡಿಯಾವನ್ನು ಘೋಷಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ (ಡಬ್ಲ್ಯುಟಿಸಿ) ಫೈನಲ್ ಗೆ ಟೀಂ ಇಂಡಿಯಾವನ್ನು ಘೋಷಿಸುತ್ತಿದ್ದಂತೆ ಈ ಆಟಗಾರನಿಗೆ ಶಾಕ್ ಆಗಿದೆ.
ಇದನ್ನೂ ಓದಿ: Video: ತಂದೆಯನ್ನೇ ಮೀರಿಸಿ ಬಾನೆತ್ತರಕ್ಕೆ ಸಿಕ್ಸರ್ ಬಾರಿಸಿದ Arjun Tendulkar! ಎಷ್ಟು ಮೀಟರ್ ದೂರ ಹೋಗಿದೆ ಗೊತ್ತಾ?
ಈ ಭಾರತೀಯ ಕ್ರಿಕೆಟಿಗ ಪ್ರತಿಭಾವಂತನಾಗಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ (ಡಬ್ಲ್ಯುಟಿಸಿ) ಫೈನಲ್ ಗೆ ಟೀಮ್ ಇಂಡಿಯಾದಲ್ಲಿ ಆಯ್ಕೆದಾರರು ಅವಕಾಶ ನೀಡಿಲ್ಲ. ಈ ಆಟಗಾರನನ್ನು ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್’ ಗೆ ಒ0ದೊಮ್ಮೆ ಹೋಲಿಸಲಾಗಿತ್ತು. ಆದರೆ ಟೀಮ್ ಇಂಡಿಯಾದ ಆಯ್ಕೆಗಾರರು ಇದೀಗ ಈ ಆಟಗಾರನನ್ನು ಭಾರತ ತಂಡದಿಂದ ತೆಗೆದುಹಾಕಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ (ಡಬ್ಲ್ಯುಟಿಸಿ) ಫೈನಲ್ ಗೆ ಭಾರತೀಯ ಟೆಸ್ಟ್ ತಂಡದಲ್ಲಿ ಮಯಾಂಕ್ ಅಗರ್ವಾಲ್ ಗೆ ಅವಕಾಶ ನೀಡಬಹುದು ಎಂದು ಹೇಳಲಾಗಿತ್ತು. ಏಕೆಂದರೆ ರಣಜಿ ಟ್ರೋಫಿ 2022-23 ಋತುವಿನಲ್ಲಿ ಕರ್ನಾಟಕದ ಪರವಾಗಿ ಆಡುತ್ತಿರುವ ಮಯಾಂಕ್ ಅಗರ್ವಾಲ್ ಅವರು 9 ಪಂದ್ಯಗಳ 13 ಇನ್ನಿಂಗ್ಸ್ ಗಳಲ್ಲಿ 82.50 ಸರಾಸರಿಯಲ್ಲಿ 990 ರನ್ ಗಳಿಸಿದ್ದಾರೆ, ಇದರಲ್ಲಿ ಅವರು ಮೂರು ಶತಕ ಮತ್ತು ಆರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಮಯಾಂಕ್ ಅಗರ್ವಾಲ್ ಅವರ ಅತ್ಯುತ್ತಮ ಸ್ಕೋರ್ 249 ರನ್. ಇವರ ಆಟದ ಕೊಡುಗೆಯಿಂದಲೇ ಕರ್ನಾಟಕ ತಂಡ ಸೆಮಿಫೈನಲ್ ತಲುಪಿದೆ.
ಈ ಅತ್ಯುತ್ತಮ ದಾಖಲೆಯ ಹೊರತಾಗಿಯೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ (ಡಬ್ಲ್ಯುಟಿಸಿ) ಫೈನಲ್ ನ ಭಾರತೀಯ ಟೆಸ್ಟ್ ತಂಡದಲ್ಲಿ ಮಯಾಂಕ್ ಅಗರ್ವಾಲ್ ಗೆ ಆಯ್ಕೆಗಾರರು ಅವಕಾಶ ನೀಡಲಿಲ್ಲ. ಆಯ್ಕೆದಾರರು ಮಯಾಂಕ್ ಅಗರ್ವಾಲ್‌ಗೆ ಮತ್ತೊಮ್ಮೆ ಅನ್ಯಾಯ ಮಾಡಿದಂತಾಗಿದೆ. ಇವರು ಕಳೆದ 1 ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ.
ಇನ್ನು ಮಯಾಂಕ್ ಅಗರ್ವಾಲ್ ಮಾರ್ಚ್ 2022ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು, ಅಂದಿನಿಂದ ಅವರು ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ರಣಜಿ ಟ್ರೋಫಿ 2022-23 ಋತುವಿನಲ್ಲಿ ಅತಿ ಹೆಚ್ಚು ಅಂದರೆ 990 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಮರಳಲು ಮಯಾಂಕ್ ಅಗರ್ವಾಲ್ ಪರಿತಪಿಸಿದರು. ಆದರೆ ಆಯ್ಕೆದಾರರು ಕೆಎಲ್ ರಾಹುಲ್ ಗಿಂತ ಇವರೇನು ಹೆಚ್ಚಲ್ಲ ಎಂದು ಸುಮ್ಮನಾದರು.
ಮಯಾಂಕ್ ಅಗರ್ವಾಲ್ ಸದ್ಯ ಈ ವರ್ಷ ಅಮೋಘ ರಣಜಿ ಸೀಸನ್ ಆಡಿದ್ದಾರೆ. ಇದರಿಂದಾಗಿ ಅವರು ಟೀಮ್ ಇಂಡಿಯಾಗೆ ಮತ್ತೆ ಮರಳುತ್ತಾರೆ ಎಂದು ಊಹಿಸಲಾಗಿತ್ತು.
ಭಾರತದ ಪರ 2 ದ್ವಿಶತಕಗಳೊಂದಿಗೆ 1488 ರನ್:
ಮಯಾಂಕ್ ಅಗರ್ವಾಲ್ ಅವರನ್ನು ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ಗೆ ಹೋಲಿಸಲಾಗಿದೆ. ತಮ್ಮ ಮೊದಲ 12 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ 2 ದ್ವಿಶತಕಗಳನ್ನು ಗಳಿಸಿದ್ದರು. ಈ ಮೂಲಕ ದಿಗ್ಗಜ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿದಿದ್ದರು. ಕಡಿಮೆ ಇನ್ನಿಂಗ್ಸ್ ನಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ ವಿಷಯದಲ್ಲಿ ಡಾನ್ ಬ್ರಾಡ್‌ಮನ್ ರನ್ನು ಹಿಂದಿಕ್ಕಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಡಾನ್ ಬ್ರಾಡ್ಮನ್ 13 ಇನ್ನಿಂಗ್ಸ್ ಗಳಲ್ಲಿ 2 ದ್ವಿಶತಕಗಳನ್ನು ಬಾರಿಸಿದ್ದಾರೆ. ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ ಎರಡು ದ್ವಿಶತಕ ಬಾರಿಸಿದ ದಾಖಲೆ ಭಾರತದ ವಿನೋದ್ ಕಾಂಬ್ಳಿ ಹೆಸರಿನಲ್ಲಿದೆ. ವಿನೋದ್ ಕಾಂಬ್ಳಿ ಅವರು ಕೇವಲ ಐದು ಇನ್ನಿಂಗ್ಸ್‌ಗಳಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 2 ದ್ವಿಶತಕಗಳನ್ನು ಬಾರಿಸಿದ್ದರು.
ಇದನ್ನೂ ಓದಿ: Virat-Anushka: ವಿರಾಟ್-ಅನುಷ್ಕಾ ಸೇವಿಸಿದ ಕಾರ್ನರ್ ಐಸ್ ಕ್ರೀಂ ಬೆಲೆ ಎಷ್ಟು ಗೊತ್ತಾ? ಬೆಂಗಳೂರಿನಲ್ಲಿ ಸಖತ್ ಫೇಮಸ್ ಇದು
ಮಯಾಂಕ್ ಅಗರ್ವಾಲ್ ಭಾರತದ ಪರ 21 ಟೆಸ್ಟ್ ಪಂದ್ಯಗಳಲ್ಲಿ 1488 ರನ್ ಗಳಿಸಿದ್ದಾರೆ, ಇದರಲ್ಲಿ 2 ದ್ವಿಶತಕ, 4 ಶತಕ ಮತ್ತು 6 ಅರ್ಧ ಶತಕಗಳು ಸೇರಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ