ನವದೆಹಲಿ: ಐಪಿಎಲ್ ಮೆಗಾ ಹರಾಜಿನ(IPL Mega Auction) ಬಗ್ಗೆ ಕಾತುರ ಹೆಚ್ಚಾಗುತ್ತಿದೆ. ಅಹಮದಾಬಾದ್ ತಂಡ ಮೂವರು ಸ್ಫೋಟಕ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಎದುರಾಳಿಗಳನ್ನು ಸೋಲಿಸಿದೆ. ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸುವುದು ಖಚಿತವಾಗಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್(Shreyas Iyer) ದೊಡ್ಡ ಬಿಡ್ ಪಡೆಯಬಹುದು. ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲು ಮೂರು ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.  
 


COMMERCIAL BREAK
SCROLL TO CONTINUE READING

ಅಯ್ಯರ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ ಮನ್


ಬಿರುಸಿನ ಬ್ಯಾಟಿಂಗ್‌ನ ಹೊರತಾಗಿ ಶ್ರೇಯಸ್ ಅಯ್ಯರ್ (Shreyas Iyer)ಅತ್ಯುತ್ತಮ ನಾಯಕತ್ವಕ್ಕೂ ಹೆಸರುವಾಸಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ವರೆಗೆ ಪ್ರಯಾಣಿಸಿತ್ತು. ಅವರು ಬೌಲಿಂಗ್ ವಿಭಾಗದಿಂದ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೈದಾನದಲ್ಲಿ ಬೌಲರ್‌ಗಳಿಗೆ ಅಗತ್ಯ ಸೂಚನೆಗಳನ್ನು ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ತಂತ್ರಗಳನ್ನು ರೂಪಿಸುತ್ತಾರೆ. ಬ್ಯಾಟಿಂಗ್ ನಲ್ಲಿಯೂ ಮಿಂಚುವ ಅಯ್ಯರ್ ಡೆಲ್ಲಿ ತಂಡಕ್ಕೆ ಅನೇಕ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಅಯ್ಯರ್ ಯಾವಾಗಲೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ನಿಪುಣರಾಗಿದ್ದಾರೆ. ತಮ್ಮ ಲಯದಲ್ಲಿದ್ದಾಗ ಅವರು ಯಾವುದೇ ಬೌಲಿಂಗ್ ಕ್ರಮಾಂಕವನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ.


ಇದನ್ನೂ ಓದಿ: Harbhajan Singh : ಪೂಜಾರ, ರಹಾನೆ ಭವಿಷ್ಯ ಮುಂದೆ ತುಂಬಾ ಕಷ್ಟ ಎಂದ ಹರ್ಭಜನ್ ಸಿಂಗ್!


1) ರಾಯಲ್ ಚಾಲೆಂಜರ್ಸ್ ಬೆಂಗಳೂರು


ವಿರಾಟ್ ಕೊಹ್ಲಿ ಕಳೆದ ಋತುವಿನಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB Captain) ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ತಾವು ಮುಂದಿನ ಐಪಿಎಲ್ ಟೂರ್ನಿಗೆ ನಾಯಕನ ಕ್ಯಾಪ್ ಧರಿಸುವುದಿಲ್ಲವೆಂದು ಕೊಹ್ಲಿ ಘೋಷಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿ ನಾಯಕನನ್ನಾಗಿ ಮಾಡಬಹುದು. ನಾಯಕತ್ವದ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲೂ ಅಯ್ಯರ್ ಪರಿಣತರಾಗಿದ್ದಾರೆ. ಅವರು ಯಾವಾಗಲೂ ದೊಡ್ಡ ಹೊಡೆತಗಳಿಗೆ ಪ್ರಸಿದ್ಧರಾಗಿದ್ದಾರೆ. RCB ಮಧ್ಯಮ ಕ್ರಮಾಂಕದಲ್ಲಿ ಖಾಯಂ ಆಟಗಾರನನ್ನು ಹುಡುಕಲು ಸಾಧ್ಯವಾಗಿಲ್ಲ. ಅಯ್ಯರ್ ಈ ಕೊರತೆಯನ್ನು ತುಂಬಬಲ್ಲರು.


2) ಕೋಲ್ಕತ್ತಾ ನೈಟ್ ರೈಡರ್ಸ್


ಐಪಿಎಲ್ 2021ರ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(KKR) ತಂಡವು ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಅಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಕೆಕೆಆರ್‌ನ ಕಮಾಂಡ್ ಅನುಭವಿ ಆಟಗಾರ ಇಯಾನ್ ಮಾರ್ಗನ್ ಕೈಯಲ್ಲಿತ್ತು. ಆದರೆ ತಂಡವು ಅವರನ್ನು ಉಳಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಕೆಕೆಆರ್‌ಗೆ ಉತ್ತಮ ಆಯ್ಕೆ ಎನ್ನಲಾಗುತ್ತಿದೆ. ಕೆಕೆಆರ್ ಯಾವುದೇ ಬಲಿಷ್ಠ ಬ್ಯಾಟ್ಸ್‌ ಮನ್‌ಗಳನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಅಯ್ಯರ್ ಮೇಲೆ ಕೆಕೆಆರ್ ದೊಡ್ಡ ಬಾಜಿ ಕಟ್ಟಬಹುದು.


ಇದನ್ನೂ ಓದಿ:  Virat Kohli: ಕಿಂಗ್ ಕೊಹ್ಲಿ ವಿಶ್ವದ ಯಶಸ್ವಿ ನಾಯಕ ಎಂಬುದಕ್ಕೆ ಈ ದಾಖಲೆಗಳೇ ಸಾಕ್ಷಿ


3) ಪಂಜಾಬ್ ಕಿಂಗ್ಸ್


ಪಂಜಾಬ್ ಕಿಂಗ್ಸ್ ಕೇವಲ ಇಬ್ಬರು ಆಟಗಾರರನ್ನು ಉಳಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ ಮತ್ತು ಅರ್ಷದೀಪ್ ಸಿಂಗ್. ಅದೇ ವೇಳೆ ಹಳೆ ನಾಯಕ ಕೆ.ಎಲ್.ರಾಹುಲ್ ತಂಡದಿಂದ ನಿರ್ಗಮಿಸಿದ್ದಾರೆ. ಪಂಜಾಬ್(Punjab Kings) ತಂಡಕ್ಕೆ ಶಕ್ತಿ ತುಂಬಬಲ್ಲ ಆಟಗಾರನ ಅಗತ್ಯವಿದೆ. ಇದಕ್ಕೆ ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಪಂಜಾಬ್ ಕಿಂಗ್ಸ್ ತಂಡವು ಅವರನ್ನು ಖರೀದಿಸಲು ದೊಡ್ಡ ಬಿಡ್ ಮಾಡಬಹುದು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.