IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ತಂಡದ ಹೊಸ ನಾಯಕನನ್ನು ಮಾರ್ಚ್ 12 ರಂದು ಪ್ರಕಟಿಸಲಿದೆ. ಕಳೆದ ವರ್ಷ ಐಪಿಎಲ್ ನಂತರ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತೊರೆದರು. ಈ ವರ್ಷ ಆರ್‌ಸಿಬಿಗೆ ಹೊಸ ನಾಯಕ ಸಿಗಲಿದೆ. ಐಪಿಎಲ್ 2022 (IPL 2022) ರ ಸೀಸನ್ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ ಮತ್ತು ಅದರ ಅಂತಿಮ ಪಂದ್ಯವು ಮೇ 29 ರಂದು ನಡೆಯಲಿದೆ. ಮಾರ್ಚ್ 12 ರಂದು ಆರ್‌ಸಿಬಿ (RCB) ನಾಯಕನನ್ನು ಘೋಷಿಸಲಾಗುವುದು ಎಂದು ಕ್ರೀಡಾ ವೆಬ್‌ಸೈಟ್ ಇನ್ಸೈಡ್‌ಸ್ಪೋರ್ಟ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದು ಕಷ್ಟಕರವಾದ ಆಯ್ಕೆಯಾಗಿದೆ, ಆದರೆ ಆಶ್ಚರ್ಯವೇನಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಸಮಯದಲ್ಲಿ ತಂಡವು ತನ್ನ ಜೆರ್ಸಿಯನ್ನು ಸಹ ಬಿಡುಗಡೆ ಮಾಡುತ್ತದೆ.


COMMERCIAL BREAK
SCROLL TO CONTINUE READING

ಈ ಬಲಿಷ್ಠ ಬ್ಯಾಟ್ಸ್‌ಮನ್ ಆರ್‌ಸಿಬಿಯ ನೂತನ ನಾಯಕರಾಗಲಿದ್ದಾರೆ:
ಈ ಬಾರಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಆರ್‌ಸಿಬಿಯ  ನಾಯಕರಾಗುವ (RCB Captain)  ರೇಸ್‌ನಲ್ಲಿ ಮುಂದಿದ್ದಾರೆ.  ಆದರೆ ಫಾಫ್  ಡು ಪ್ಲೆಸಿಸ್ ಅವರನ್ನು ತಂಡದ ಹೊಸ ನಾಯಕನನ್ನಾಗಿ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಅದೇ ದಿನ ತಂಡ ತನ್ನ ಜೆರ್ಸಿಯನ್ನು ಬಿಡುಗಡೆ ಮಾಡಲಿದೆ. ನಾಯಕತ್ವಕ್ಕೆ ಫಾಫ್ ಡು ಪ್ಲೆಸಿಸ್ ಸೂಕ್ತ ಸ್ಪರ್ಧಿ. ಮ್ಯಾಕ್ಸ್‌ವೆಲ್ ತನ್ನ ಮದುವೆಯಿಂದಾಗಿ ಐಪಿಎಲ್‌ನ ಮೊದಲ ಕೆಲವು ಪಂದ್ಯಗಳನ್ನು ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವಕ್ಕೆ ಫಾಫ್ ಡು ಪ್ಲೆಸಿಸ್ ಅತ್ಯುತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- Ricky Ponting Video: ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ರಿಕಿ ಪಾಂಟಿಂಗ್


ಇತ್ತೀಚೆಗೆ, ಐಪಿಎಲ್ 2022 (IPL 2022) ರ ಮೆಗಾ ಹರಾಜಿನಲ್ಲಿ, RCB ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿಗೆ ಖರೀದಿಸಿದೆ. ಫಾಫ್ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡ ನಂತರ, ಆರ್‌ಸಿಬಿ ತಂಡದ ನಾಯಕತ್ವವನ್ನು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್‌ಗೆ ಹಸ್ತಾಂತರಿಸಬಹುದು ಎಂದು ನಂಬಲಾಗಿತ್ತು. ಫಾಫ್ ಡು ಪ್ಲೆಸಿಸ್ ಹೊರತಾಗಿ ದಿನೇಶ್ ಕಾರ್ತಿಕ್ ಅವರಂತಹ ಆಟಗಾರನನ್ನು ಸಹ ಆರ್‌ಸಿಬಿ ಹೊಂದಿದೆ, ಆದರೆ ಅನುಭವವನ್ನು ನೋಡಿದರೆ, ಫ್ರಾಂಚೈಸ್ ಈ ಜವಾಬ್ದಾರಿಯನ್ನು ಫಾಫ್ ಡು ಪ್ಲೆಸಿಸ್‌ಗೆ ನೀಡಲಿದ್ದು, ಶೀಘ್ರದಲ್ಲೇ ಈ ಬಗ್ಗೆ ಪ್ರಕಟಿಸುವ ನಿರೀಕ್ಷೆಯಿದೆ.


ಇದನ್ನೂ ಓದಿ- IPL 2022: ಲುಕ್ ಬದಲಾಯಿಸಿದ ಕ್ಯಾಪ್ಟನ್ ಕೂಲ್, ಫೋಟೋ ನೋಡಿ ನಿಮಗೆ ಗೊತ್ತಾಗುತ್ತದೆ


ಈ ಆಟಗಾರ ವೇಗದ ಬ್ಯಾಟಿಂಗ್ ನಲ್ಲಿ ಪರಿಣತಿ ಪಡೆದಿದ್ದಾರೆ :
ಈ ಹಿಂದೆ, ಫಾಫ್ ಡು ಪ್ಲೆಸಿಸ್ ದೀರ್ಘಕಾಲದವರೆಗೆ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದಾರೆ ಮತ್ತು ಅವರ ಉಪಸ್ಥಿತಿಯಲ್ಲಿ ತಂಡವು ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಕಳೆದ ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ಅತಿ ಹೆಚ್ಚು ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಫಾಫ್ ಡು ಪ್ಲೆಸಿಸ್ ಚೆನ್ನೈ ನಾಲ್ಕನೇ ಪ್ರಶಸ್ತಿ ಗೆಲ್ಲಲು ನೆರವಾದರು. ಫಾಫ್ ಡು ಪ್ಲೆಸಿಸ್ ಇದುವರೆಗೆ ಐಪಿಎಲ್‌ನಲ್ಲಿ 93 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಫಾಫ್ ಡು ಪ್ಲೆಸಿಸ್ 22 ಅರ್ಧಶತಕ ಸೇರಿದಂತೆ 34.94 ಸರಾಸರಿಯಲ್ಲಿ 2935 ರನ್ ಗಳಿಸಿದ್ದಾರೆ. ಫಾಫ್ ಡು ಪ್ಲೆಸಿಸ್ 265 ಬೌಂಡರಿ ಹಾಗೂ 96 ಸಿಕ್ಸರ್ ಬಾರಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.