Notice to Roger Binny: ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ನೈತಿಕ ಅಧಿಕಾರಿ ವಿನೀತ್ ಸರನ್ ಅವರು ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಅವರಿಗೆ ಹಿತಾಸಕ್ತಿ ಸಂಘರ್ಷದ ನೋಟಿಸ್ (Conflict of Interest Notice) ಕಳುಹಿಸಿದ್ದಾರೆ. ಮಾಹಿತಿಯ ಪ್ರಕಾರ, ವಿನೀತ್ ಸರನ್ ಅವರು, ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 20 ರೊಳಗೆ ಲಿಖಿತ ಉತ್ತರವನ್ನು ನೀಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿಗೆ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs NZ 3rd ODI: 3ನೇ ಏಕದಿನ ಪಂದ್ಯಕ್ಕೂ ಮಳೆಯಾಗುವ ಭೀತಿ: ಟೀಂ ಇಂಡಿಯಾ ಸರಣಿ ಕನಸಿಗೆ ಬೀಳುತ್ತಾ ಬ್ರೇಕ್?


ಭಾರತೀಯ ಕ್ರಿಕೆಟ್‌ನ ದೇಶೀಯ ಋತುವಿನ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ರೋಜರ್ ಬಿನ್ನಿ ಅವರ ಸೊಸೆ ಕೆಲಸ ಮಾಡುತ್ತಿರುವುದರಿಂದ ಹಿತಾಸಕ್ತಿ ಸಂಘರ್ಷವಿದೆ ಎಂದು ದೂರುದಾರ ಸಂಜೀವ್ ಗುಪ್ತಾ ಆರೋಪಿಸಿದ್ದಾರೆ. ರೋಜರ್ ಬಿನ್ನಿ ಅವರ ಸೊಸೆ ಮತ್ತು ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಯಾಂತಿ ಲ್ಯಾಂಗರ್ ಅವರು ಸ್ಟಾರ್ ಸ್ಪೋರ್ಟ್ಸ್‌ನ ಪ್ರಸಿದ್ಧ ಆಂಕರ್ ಆಗಿದ್ದಾರೆ.


ಸೊಸೆ ಮಾಯಾಂತಿ ಲ್ಯಾಂಗರ್ ಕಾರಣ!!:


ನವೆಂಬರ್ 21 ರಂದು ನೀಡಲಾದ ನೋಟಿಸ್‌ನಲ್ಲಿ ವಿನೀತ್ ಸರನ್, “ನಿಮ್ಮಲ್ಲಿರುವ ಬಿಸಿಸಿಐನ ನಿಯಮ 38 (1) (ಎ) ಮತ್ತು ನಿಯಮ 38 (2) ಉಲ್ಲಂಘಿಸಿದ್ದಾರೆ. ಹೀಗಾಗಿ ಬಿಸಿಸಿಐ ನಿಯಮ 39 (2)ರ ಅಡಿಯಲ್ಲಿ ದೂರು ಸ್ವೀಕರಿಸಲಾಗಿದೆ” ಎಂದು ತಿಳಿಸಿದ್ದಾರೆ.


ಇದರ ಪ್ರಕಾರ, “ಡಿಸೆಂಬರ್ 20, 2022 ರಂದು ಅಥವಾ ಈ ದಿನಾಂಕದೊಳಗೆ ಲಿಖಿತ ಪ್ರತಿಕ್ರಿಯೆಯನ್ನು ನೀಡಲು ನಿರ್ದೇಶಿಸಲಾಗಿದೆ. ಈ ಪ್ರತಿಕ್ರಿಯೆಯನ್ನು ಬೆಂಬಲಿಸಿ ಅಫಿಡವಿಟ್ ಕೂಡ ಸಲ್ಲಿಸಬೇಕು” ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: Indian Cricket Team Ranking: ಟೀ ಇಂಡಿಯಾ ಈ ವರ್ಷ ಏಕದಿನದಲ್ಲಿ ನಂಬರ್-1 ತಂಡವಾಗಲಿದೆಯೇ? ಈ ಕೆಲಸ ಮಾಡಿದ್ರೆ ಇದು ಸಾಧ್ಯ


1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ, ಇದೇ ವರ್ಷದ ಅಕ್ಟೋಬರ್‌ನಲ್ಲಿ ಬಿಸಿಸಿಐನ 36 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಬದಲಿಗೆ ರೋಜರ್ ಬಿನ್ನಿ ಈ ಸ್ಥಾನ ಪಡೆದಿದ್ದಾರೆ. 67 ವರ್ಷದ ರೋಜರ್ ಬಿನ್ನಿ ಭಾರತದ ಪರ 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.