ಪಾಕ್ ಸೆಮಿಫೈನಲ್ ತಲುಪಲು ಭಾರತದ ಸಹಾಯ ಬೇಕು ಎಂದ ಶೋಯಬ್ ಅಖ್ತರ್
ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಈಗ ಪಾಕ್ ತಂಡಕ್ಕೂ ಕೂಡ ಸೆಮಿಫೈನಲ್ ತಲುಪುವ ಸಣ್ಣ ಸಾಧ್ಯತೆ ಇದೆ.
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಈಗ ಪಾಕ್ ತಂಡಕ್ಕೂ ಕೂಡ ಸೆಮಿಫೈನಲ್ ತಲುಪುವ ಸಾಧ್ಯತೆ ಇದೆ.
ಇದಕ್ಕೆ ಈಗ ಪಾಕಿಸ್ತಾನ ತಂಡವು ಮುಂದಿನ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ವಿರುದ್ಧದ ಪಂದ್ಯಗಳನ್ನು ಗೆದ್ದು, ಭಾರತದ ಎದುರು ಇಂಗ್ಲೆಂಡ್ ತಂಡ ಸೋತದ್ದೆ ಆದಲ್ಲಿ ಆಗ ಪಾಕ್ ತಂಡವು 11 ಅಂಕಗಳೊಂದಿಗೆ ಸೆಮಿಫೈನಲ್ ತಲುಪಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಾಕ್ ನ ಮಾಜಿ ಆಟಗಾರ ಶೋಯಬ್ ಅಖ್ತರ್ ಭಾರತ ತಂಡವು ಪಾಕ್ ಸೆಮಿಫೈನಲ್ ತಲುಪಲು ಸಹಾಯ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಯುಟ್ಯೂಬ್ ವಿಡಿಯೋವೊಂದರಲ್ಲಿ ಮನವಿ ಮಾಡಿಕೊಂಡಿರುವ ಅಖ್ತರ್ ' ಈಗ ಪಾಕಿಸ್ತಾನ ತಂಡಕ್ಕೆ ಭಾರತ ಸಹಾಯ ಮಾಡಬೇಕು! ಹೇಗೆ ಅಂತೀರಾ ? ಇಂಗ್ಲೆಂಡ್ ತಂಡ ಜೊತೆಗಿನ ಪಂದ್ಯವನ್ನು ಭಾರತ ಗೆದ್ದದ್ದೆ ಆದಲ್ಲಿ, ಇಂಗ್ಲೆಂಡ್ ತಂಡವು ಟೂರ್ನಿಯಿಂದ ಹೊರಬಿಳಲಿದೆ. ಆಗ ಪಾಕಿಸ್ತಾನ ತಂಡವು 11 ಅಂಕಗಳೊಂದಿಗೆ ಸೆಮಿಫೈನಲ್ ತಲುಪಲಿದೆ 'ಎಂದು ಅಖ್ತರ್ ಹೇಳಿದ್ದಾರೆ.
"ಒಂದು ವೇಳೆ ಪಾಕ್ ಉತ್ತಮ ಪ್ರದರ್ಶನಕ್ಕೆ ಮರಳಿದೆ ಎಂದು ನಾನು ಭಾವಿಸಬೇಕೆಂದರೆ, ಈಗ ಭಾರತ ತಂಡವು ನಮಗೆ ಸಹಾಯ ಮಾಡಬೇಕು. ನೀವು ಇಂಗ್ಲೆಂಡ್ ತಂಡವನ್ನು ಸೋಲಿಸಬೇಕು. ನಾವು ಇತರ ಎರಡು ಪಂದ್ಯಗಳನ್ನು ಗೆದ್ದು ನಿಮ್ಮನ್ನು ಸೆಮಿಫೈನಲ್ ನಲ್ಲಿ ಎದುರಿಸುತ್ತೇವೆ. ಆಗ ನಿಮ್ಮನ್ನು ಸೋಲಿಸುತ್ತೇವೆ ' ಎಂದು ಅಖ್ತರ್ ಹೇಳಿದ್ದಾರೆ.