ODI World Cup-2023 Schedule : ಈ ವರ್ಷ ಭಾರತ ಆತಿಥ್ಯ ವಹಿಸಲಿರುವ ODI ವಿಶ್ವಕಪ್-2023 ರ ವೇಳಾಪಟ್ಟಿ ಮುನ್ನೆಲೆಗೆ ಬಂದಿದೆ. ಈ ಐಸಿಸಿ ಟೂರ್ನಿ ಅಹಮದಾಬಾದ್‌ನಲ್ಲಿ ಆರಂಭವಾಗಲಿದೆ ಎಂದು ವರದಿಯೊಂದು ಹೇಳಿದೆ.  ಟೀಂ ಇಂಡಿಯಾದ ಮೊದಲ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ ಎನ್ನಲಾಗಿದೆ.  


COMMERCIAL BREAK
SCROLL TO CONTINUE READING

ಅಹಮದಾಬಾದ್‌ನಲ್ಲಿ ನಡೆಯಲಿದೆ ಫೈನಲ್  :
ಪುರುಷರ 50 ಓವರ್‌ಗಳ ವಿಶ್ವಕಪ್ ಕ್ರಿಕೆಟ್ ಅಹಮದಾಬಾದ್‌ನಲ್ಲಿ ಆರಂಭವಾಗಲಿದೆ. ಅಷ್ಟೇ ಅಲ್ಲ, ಅಹಮದಾಬಾದ್‌ನ ಪ್ರತಿಷ್ಠಿತ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿಯೇ ಫೈನಲ್ ಪಂದ್ಯವೂ ನಡೆಯಲಿದೆ. ಟೂರ್ನಿಯ ಆರಂಭಿಕ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಕ್ಟೋಬರ್ 5 ರಂದು ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್ 19 ರಂದು ನಡೆಯಲಿದೆ.


ಇದನ್ನೂ ಓದಿ : IPL 2023: ತಮ್ಮ ಸರ್ಜರಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಕೆ.ಎಲ್. ರಾಹುಲ್


ಈ ತಂಡದ ವಿರುದ್ಧ ಸೆಣಸಲಿದೆ  ಭಾರತ :
ಬಿಸಿಸಿಐನ ವಿಶ್ವಾಸಾರ್ಹ ಮೂಲಗಳ  ಪ್ರಕಾರ, ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯುವ ಸಾಧ್ಯತೆಯಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಅನ್ನು ಭಾರತ ತಂಡದ ಮಾಜಿ ನಾಯಕ ಮತ್ತು ಅನುಭವಿ ಮಹೇಂದ್ರ ಸಿಂಗ್ ಧೋನಿ ಅವರ ಎರಡನೇ ಮನೆ ಎಂದೂ ಕರೆಯಲಾಗುತ್ತದೆ. ಈ ಸ್ಟೇಡಿಯಂನಲ್ಲಿ ಭಾರತ ವಿಶ್ವಕಪ್ ನ ಮೊದಲ ಪಂದ್ಯ ಆಡಲಿದೆ ಎನ್ನಲಾಗಿದೆ. 


ಶೀಘ್ರದಲ್ಲೇ ಹೊರಬೀಳಲಿದೆ ಅಂತಿಮ ನಿರ್ಧಾರ :
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತರ ಅಧಿಕೃತ ವೇಳಾಪಟ್ಟಿ  ಬಿಡುಗಡೆಯಾಗುವ ಸಂಭವವಿದೆ. ಆತಿಥೇಯರಾಗಿ ಬಿಸಿಸಿಐ  ಪಂದ್ಯ ಯಾವಾಗ ನಡೆಯಲಿದೆ ಮತ್ತು ಎಲ್ಲಿ ನಡೆಯಲಿದೆ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಬಹುದು.


ಇದನ್ನೂ ಓದಿ : ಪಾಕ್ ಅಲ್ಲ… ವಿಶ್ವಕಪ್’ಗೆ ಅರ್ಹತೆ ಪಡೆದ Team Indiaದ ಅತಿ ದೊಡ್ಡ ಶತ್ರು ತಂಡ! ಕ್ರಿಕೆಟ್ ಜಗತ್ತಿನಲ್ಲಿ ಹಠಾತ್ ಭೀತಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.