Ollie Pope Creates History: ಇಂಗ್ಲೆಂಡ್‌ ದಿಗ್ಗಜ ಬ್ಯಾಟ್ಸ್‌ಮನ್ ಒಲಿ ಪೋಪ್ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ. ಲಂಡನ್‌'ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಯುವ ಬ್ಯಾಟ್ಸ್‌ಮನ್ ಒಲಿ ಪೋಪ್ ಐತಿಹಾಸಿಕ ದಾಖಲೆ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಗಣೇಶ ಹಬ್ಬದಂದು ಚಿನ್ನದ ಬೆಲೆಯಲ್ಲಿ ಇಳಿಕೆ!? ಇಂದು 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?


ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ವಿಶ್ವ ದಾಖಲೆ ನಿರ್ಮಾಣವಾಗಿದೆ. ಶ್ರೀಲಂಕಾ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಆಲಿ ಪೋಪ್ ಶತಕ ಸಿಡಿಸಿದ್ದಾರೆ. ಇದು ಒಲಿ ಪೋಪ್ ವೃತ್ತಿಜೀವನದ ಏಳನೇ ಟೆಸ್ಟ್ ಶತಕವಾಗಿದೆ.


ಒಲಿ ಪೋಪ್ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7 ವಿವಿಧ ದೇಶಗಳ ವಿರುದ್ಧ ತಮ್ಮ ಮೊದಲ 7 ಟೆಸ್ಟ್ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಆಲಿ ಪೋಪ್ ಇದುವರೆಗೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಐರ್ಲೆಂಡ್, ಭಾರತ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.


ಆಲಿ ಪೋಪ್ 7 ಟೆಸ್ಟ್ ಶತಕಗಳು


  • 135* vs ದಕ್ಷಿಣ ಆಫ್ರಿಕಾ - ಗ್ಕೆಬರ್ಹಾ (ಜನವರಿ 2020)

  • 145 vs ನ್ಯೂಜಿಲೆಂಡ್ - ನಾಟಿಂಗ್ಹ್ಯಾಮ್ (ಜೂನ್ 2022)

  • 108 vs ಪಾಕಿಸ್ತಾನ - ರಾವಲ್ಪಿಂಡಿ (ಡಿಸೆಂಬರ್ 2022)

  • 205 vs ಐರ್ಲೆಂಡ್ - ಲಂಡನ್ (ಜೂನ್ 2023)

  • 196 vs ಭಾರತ - ಹೈದರಾಬಾದ್ (ಜನವರಿ 2024)

  • 121 vs ವೆಸ್ಟ್ ಇಂಡೀಸ್ - ನಾಟಿಂಗ್ಹ್ಯಾಮ್ (ಜುಲೈ 2024)

  • 103* vs ಶ್ರೀಲಂಕಾ - ಲಂಡನ್ (ಸೆಪ್ಟೆಂಬರ್ 2024)


ಇದನ್ನೂ ಓದಿ:  QR ಕೋಡ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ