ಪ್ಯಾರಿಸ್: ಪಾಕಿಸ್ತಾನದ ಸ್ಟಾರ್ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟಿದ್ದಲ್ಲದೆ, ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

1992ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಈ ಪದಕ ಪಡೆದಿದೆ. ಮೊದಲ ಥ್ರೋ ಫೌಲ್ ಆದ ನಂತರ ಅರ್ಷದ್ ಎರಡನೇ ಥ್ರೋನಲ್ಲಿ ವರ್ಚಸ್ಸು ಪ್ರದರ್ಶಿಸಿ ಮಾನ್ಸ್ಟರ್ ಥ್ರೋ ಎಸೆದರು. ಈ ಫೈನಲ್‌ನಲ್ಲಿ ನದೀಮ್ 90 ಮೀಟರ್‌ಗಳನ್ನು ದಾಟಿದ ಏಕೈಕ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಟೋಕಿಯೋ ಚಿನ್ನದ ಪದಕ ವಿಜೇತ ಹಾಗೂ ಭಾರತದ ನೀರಜ್ ಚೋಪ್ರಾ ಅವರು 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನ ಪಡೆದುಯುವ ಮೂಲಕ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.


ಇದನ್ನೂ ಓದಿ: ಎಚ್ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ ಮಂಜೂರಾತಿಗೆ ರಾಜ್ಯಪಾಲರಿಗೆ ಲೋಕಾಯುಕ್ತ  ಮನವಿ


ಎರಡು ಬಾರಿ 90 ಮೀಟರ್ ಎಸೆತ:


ಅರ್ಷದ್ ನದೀಮ್ ಒಮ್ಮೆ ಮಾತ್ರವಲ್ಲದೆ ಎರಡು ಬಾರಿ ಜಾವೆಲಿನ್ ಅನ್ನು 90 ಮೀಟರ್ ಗಡಿ ದಾಟಿದರು.ನದೀಮ್ ಅವರ ಮೊದಲ ಎಸೆತವು ಫೌಲ್ ಆಗಿತ್ತು, ಆದರೆ ನಂತರ ಅವರು 92.97 ಮೀಟರ್‌ಗಳ ಐತಿಹಾಸಿಕ ಎಸೆತವನ್ನು ಎಸೆದು ಚಿನ್ನವನ್ನು ಖಚಿತಪಡಿಸಿದರು. ನದೀಮ್ ಅವರ ಮುಂದಿನ ಮೂರು ಎಸೆತಗಳು ಕ್ರಮವಾಗಿ 88.72 ಮೀಟರ್, 79.40 ಮೀಟರ್ ಮತ್ತು 84.87 ಮೀಟರ್. ತಮ್ಮ ಕೊನೆಯ ಎಸೆತಕ್ಕೆ ಬಂದ ನದೀಮ್ ಮತ್ತೊಮ್ಮೆ ಜಾವೆಲಿನ್ ಅನ್ನು 90 ಮೀಟರ್ ಆಚೆಗೆ ಕೊಂಡೊಯ್ದರು. ಈ ಬಾರಿ ಅವರ ಥ್ರೋ 91.79 ಮೀಟರ್ ದೂರ ಹೋಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.