Jaydev Unadkat: ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಮೂರನೇ ಏಕದಿನ ಪಂದ್ಯವು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಸರಣಿ ವಶಪಡಿಸಿಕೊಂಡಿದೆ.  ಕೆರಿಬಿಯನ್ ನಾಯಕ ಶಾಯ್ ಹೋಪ್ ಟಾಸ್ ಗೆದ್ದು ಮತ್ತೊಮ್ಮೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಬ್ಯಾಟಿಂಗ್’ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 200 ರನ್’ಗಳ ಬೃಹತ್ ಗೆಲುವು ದಾಖಲಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಇಬ್ಬರು ದಿಗ್ಗಜರು! ಒಬ್ಬ ಧೋನಿ ಪ್ರಿಯಮಿತ್ರ-ಮತ್ತೊಬ್ಬ ಯುವಿ ಸ್ನೇಹಿತ!


ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಮೂರನೇ ಏಕದಿನ ಪಂದ್ಯದಲ್ಲೂ ವಿಶ್ರಾಂತಿ ನೀಡಲಾಗಿತ್ತು. ಇದರ ಹೊರತಾಗಿಯೂ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಉಮ್ರಾನ್ ಮಲಿಕ್ ಬದಲಿಗೆ ರುತುರಾಜ್ ಗಾಯಕ್ವಾಡ್ ಮತ್ತು ಅಕ್ಷರ್ ಪಟೇಲ್ ಬದಲಿಗೆ ಜಯದೇವ್ ಉನದ್ಕತ್’ಗೆ ಅವಕಾಶ ನೀಡಲಾಗಿತ್ತು.


ಈ ಪಂದ್ಯದ ಮೂಲಕ ವೇಗದ ಬೌಲರ್ ಜಯದೇವ್ ಉನದ್ಕತ್ ಅವರ ಹೆಸರಿಗೆ ವಿಶಿಷ್ಟ ದಾಖಲೆಯೊಂದು ಸೇರ್ಪಡೆಗೊಂಡಿದೆ. 3539 ದಿನಗಳ ನಂತರ ಏಕದಿನಕ್ಕೆ ಎಂಟ್ರಿ ಕೊಟ್ಟ ಆಟಗಾರ ಎಂಬ ದಾಖಲೆ ಇವರ ಪಾಲಿಗೆ ಸೇರಿದೆ.  ಉನದ್ಕತ್ ಕೊನೆಯ ಬಾರಿಗೆ 21 ನವೆಂಬರ್ 2013 ರಂದು ಭಾರತಕ್ಕಾಗಿ ODI ಆಡಿದ್ದರು. ಈಗ ದೀರ್ಘಾವಧಿಯ ನಂತರ ODI ತಂಡಕ್ಕೆ ಪ್ರವೇಶಿಸಿದ್ದಾರೆ.


ಇದನ್ನೂ ಓದಿ: “ಕೊಹ್ಲಿ, ರೋಹಿತ್ ಇದ್ದರೆ ODIನಲ್ಲಿ ಗೆಲುವು, ಇಲ್ಲದಿದ್ದರೆ…”: ಅಂತಿಮ ಪಂದ್ಯಕ್ಕೂ ಮುನ್ನ ದಿಗ್ಗಜನ ಶಾಕಿಂಗ್ ಹೇಳಿಕೆ


ಉನದ್ಕತ್ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊಚ್ಚಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕೊನೆಯ ODI ಆಡಿದ್ದರು. ಅಂದಿನಿಂದ ಅವರು ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ಕೋಚ್ ರಾಹುಲ್ ದ್ರಾವಿಡ್ ಅವರು 3539 ದಿನಗಳ ನಂತರ ಅಂದರೆ 10 ವರ್ಷಗಳ ನಂತರ ಏಕದಿನದಲ್ಲಿ ಅದೃಷ್ಟ ಪರೀಕ್ಷೆಗೆ ಅವಕಾಶ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ