Who will be new secretary of BCCI: ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ಡಿಸೆಂಬರ್ 1 ರಂದು ತಮ್ಮ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಈಗ ಅವರ ಸ್ಥಾನಕ್ಕೆ ಹೊಸ ಕಾರ್ಯದರ್ಶಿಯನ್ನು ಮಂಡಳಿ ಹುಡುಕುತ್ತಿದೆ. ಹೊಸ ಹೆಸರುಗಳ ಸಂಚಲನ ತೀವ್ರಗೊಂಡಿದೆ. ಇದಲ್ಲದೇ ಮಂಡಳಿಯ ರಾಜಕಾರಣವೂ ಮುನ್ನೆಲೆಗೆ ಬರುತ್ತಿದ್ದು, ಪ್ರತಿ ಬಾರಿಯೂ ಬಿಸಿಸಿಐನಲ್ಲಿ ದೊಡ್ಡ ಹುದ್ದೆಗೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಲು ದೊಡ್ಡ ಮಟ್ಟದ ರಾಜಕೀಯ ನಡೆಯುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ;  ಈ ಪುಡಿ ಬೆರೆಸಿದ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಸಾಕು... ಹುಳುಕು ಹಲ್ಲು ಮತ್ತು ನೋವಿಗೆ ತಕ್ಷಣ ಪರಿಹಾರ ಸಿಗುವುದು! ಮುದುಕರಾದ್ರೂ ಹಲ್ಲುನೋವಿನ ಸಮಸ್ಯೆಯೇ ಬರಲ್ಲ


ಬಿಸಿಸಿಐನ 93ನೇ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಈ ವೇಳೆ ಸದಸ್ಯರು ಜಯ್‌ ಶಾ ಅವರಿಗೆ ನೂತನ ಕಾರ್ಯದರ್ಶಿ ಹುಡುಕಾಟಕ್ಕೆ ವೇಗ ನೀಡುವಂತೆ ಮನವಿ ಮಾಡಿದ್ದಾರೆ. ಅಂದಹಾಗೆ ಜಯ್ ಶಾ ನವೆಂಬರ್ ಅಂತ್ಯದವರೆಗೆ ಅಧಿಕಾರದಲ್ಲಿ ಇರಲಿದ್ದಾರೆ. ಇನ್ನು ಇವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರೂ ಕೂಡ ಹೌದು. ಆ ಹುದ್ದೆಯನ್ನೂ ಸಹ ಅವರು ತೊರೆಯಲಿದ್ದಾರೆ. ಕೆಲ ಮೂಲಗಳ ಪ್ರಕಾರ ಅವರ ಸ್ಥಾನದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅಧ್ಯಕ್ಷರಾಗಬಹುದು.


ಇದನ್ನೂ ಓದಿ; Chaitra Kundapura: ಬಿಗ್‌ ಬಾಸ್‌ ಮನೆ ಸೇರಿರುವ ಚೈತ್ರಾ ಕುಂದಾಪುರ ಸಂಭಾವನೆ ಎಷ್ಟು ಗೊತ್ತಾ? ಪ್ರತಿ ಎಪಿಸೋಡ್‌ಗೆ ಸಿಗುತ್ತೆ ಇಷ್ಟು ದುಡ್ಡು...!!


ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋ ವರದಿ ಪ್ರಕಾರ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ರೋಹನ್ ಜೇಟ್ಲಿ, ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್, ಜಂಟಿ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಮತ್ತು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​ಕಾರ್ಯದರ್ಶಿ ಅನಿಲ್ ಪಟೇಲ್ ಬಿಸಿಸಿಐ ಮುಂದಿನ ನೂತನ ಕಾರ್ಯದರ್ಶಿ ಹುದ್ದೆಗೆ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಇನ್ನು ಅತಿ ಶೀಘ್ರದಲ್ಲೇ ಬಿಸಿಸಿಐ ಕಾರ್ಯದರ್ಶಿ ಯಾರೆಂಬುದು ಬಹಿರಂಗಗೊಳ್ಳಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.