Pakistan Girl Viral Video: ಕಿವೀಸ್ ವಿರುದ್ಧದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಆಲ್‌ರೌಂಡ್ ಪ್ರದರ್ಶನದಿಂದ ಪ್ರಭಾವಿತವಾಗಿತ್ತು. ಮೊದಲಿಗೆ, ಅವರು ಬೌಲಿಂಗ್‌ನೊಂದಿಗೆ ನ್ಯೂಜಿಲೆಂಡ್ ಅನ್ನು ಕಡಿಮೆ ಸ್ಕೋರ್‌ಗೆ ಸೀಮಿತಗೊಳಿಸಿದರು, ನಂತರ ಸುಲಭವಾಗಿ ಗುರಿಯನ್ನು ಮುರಿದು ಫೈನಲ್‌ಗೆ ಪ್ರವೇಶಿಸಿದರು. ನಾಯಕ ಬಾಬರ್ ಅಜಂ ಹಾಗೂ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅಮೋಘ ಆಟವಾಡಿದ್ದರಿಂದ ಪಾಕ್ ಗೆಲುವು ಸುಲಭವಾಯಿತು.


COMMERCIAL BREAK
SCROLL TO CONTINUE READING

ಸದ್ಯ ಪಾಕ್ ಅಭಿಮಾನಿಗಳು ಫುಲ್ ಹ್ಯಾಪಿ ಮೂಡ್ ನಲ್ಲಿ ಇದ್ದಾರೆ. ಅಷ್ಟೇ ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಫೈನಲ್ ತಲುಪಬೇಕು ಎಂದು ಬಯಸಿದ್ದಾರೆ. ಪಾಕಿಸ್ತಾನದ ಅಭಿಮಾನಿಯೊಬ್ಬಳ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.


ಇದನ್ನೂ ಓದಿ: IND vs ENG Matches: ಭಾರತ-ಇಂಗ್ಲೆಂಡ್ ಕ್ರಿಕೆಟ್ ಸಮರದಲ್ಲಿ ಹೆಚ್ಚು ಪಂದ್ಯ ಗೆದ್ದವರ್ಯಾರು ಗೊತ್ತಾ?


ಪಾಕಿಸ್ತಾನ ತಂಡ ಫೈನಲ್ ತಲುಪಿದ ಕೂಡಲೇ ಪಾಕಿಸ್ತಾನದ ಯುವತಿಯೊಬ್ಬರು ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲಬೇಕು ಎಂದು ಹೇಳಿದ್ದಳು. ಫೈನಲ್‌ನಲ್ಲಿ ಪಾಕ್-ಭಾರತ ಮುಖಾಮುಖಿಯಾಗುವ ನಿರೀಕ್ಷೆಯಿದೆ. ಅಲ್ಲಿ ತಮ್ಮ ತಂಡ ಭಾರತವನ್ನು ಸೋಲಿಸಲಿದೆ ಎಂದು ಹೇಳಿದ್ದಾಳೆ. ಬೌಲಿಂಗ್‌ನಲ್ಲಿ ಯಾರನ್ನು ಇಷ್ಟಪಡುತ್ತೀರಿ ಎಂದು ಕೇಳಿದಾಗ, ಅವಳು ನಸೀಮ್ ಶಾ ಹೆಸರನ್ನು ಹೇಳುತ್ತಾಳೆ. ತಂಡದಲ್ಲಿರುವ ಪ್ರತಿಯೊಬ್ಬರೂ ವಿಶೇಷವಾಗಿದ್ದು, ಯಾರನ್ನೂ ಬೇರೆಯವರಿಗೆ ಹೋಲಿಸಲು ಸಾಧ್ಯವಿಲ್ಲ ಎಂದಿದ್ದಾಳೆ.


ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಮತ್ತು ಜಿಂಬಾಬ್ವೆ ವಿರುದ್ಧ ಸತತ ಸೋಲು ಕಂಡಿರುವ ಪಾಕಿಸ್ತಾನ ಸೆಮಿಫೈನಲ್ ತಲುಪುವುದು ಕಷ್ಟ ಎಂದು ಎಲ್ಲರೂ ಹೇಳಿದ್ದರು. ದಕ್ಷಿಣ ಆಫ್ರಿಕಾಕ್ಕೆ ಶಾಕ್ ನೀಡಿದ ನೆದರ್ಲೆಂಡ್, ಪಾಕಿಸ್ತಾನಕ್ಕೆ ಮಣೆ ಹಾಕಿತು. ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳನ್ನು ಸೋಲಿಸಿದ್ದ ಪಾಕಿಸ್ತಾನ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ತಲುಪಿತ್ತು. ನ್ಯೂಜಿಲೆಂಡ್ ವಿರುದ್ಧ ಮೂಲ ಪ್ರದರ್ಶನ ತೋರಿದ್ದಾರೆ. ಏಳು ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.


ಭಾರತ ಇಂದು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಗ್ರೂಪ್ ಹಂತದಲ್ಲಿ ನಾಲ್ಕು ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸೆಮಿಸ್‌ನಲ್ಲೂ ಅದೇ ವೇಗವನ್ನು ಮುಂದುವರಿಸಲು ಹವಣಿಸುತ್ತಿದೆ. ಭಾರತ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪಬೇಕು ಎಂಬುದು ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಅಪೇಕ್ಷೆ.


ಇದನ್ನೂ ಓದಿ: IND vs ENG: ಇಂಡೋ-ಆಂಗ್ಲರ ನಡುವೆ ಸೆಮಿಸ್ ಸಮರ: ಪಾಕ್ ವಿರುದ್ಧ ಫೈನಲ್ ಆಡುವವರು ಯಾರು?


ಟೀಂ ಇಂಡಿಯಾ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಿದರೆ ಅದು ವಿಭಿನ್ನವಾಗಿರುತ್ತದೆ. 2007ರಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಫೈನಲ್ ಪಂದ್ಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ಮತ್ತೊಮ್ಮೆ ಇಂತಹ ಹೋರಾಟ ನಡೆಯಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.