arshad nadeem: ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.. ನದೀಮ್ ಚಿನ್ನದ ಪದಕ ಗೆದ್ದ ನಂತರ ಪಾಕಿಸ್ತಾನದ ಜನರು ಭರ್ಜರಿ ಸಂಭ್ರಮಿಸಿದರು. ಅರ್ಷದ್ ಅವರಿಗೆ ಜಗತ್ತಿನಾದ್ಯಂತ ಪ್ರಶಂಸೆಯ ಸುರಿಮಳೆಗೈದರು. ಭಾರತ ಕೂಡ ಚಿನ್ನದ ಪದಕ ಗೆದ್ದ ಅರ್ಷದ್ ಅವರನ್ನು ಅಭಿನಂದಿಸಿದೆ. ಆದರೆ, ಸದ್ಯ ಅವರು ವಿವಾದದಲ್ಲಿ ಸಿಲುಕಿದ್ದಾರೆ. 


COMMERCIAL BREAK
SCROLL TO CONTINUE READING

ಅರ್ಷದ್ ನದೀಮ್ ಗೆ ಭಯೋತ್ಪಾದಕರೊಂದಿಗೆ ನಂಟು ಇರುವ ಶಂಕೆ ವ್ಯಕ್ತವಾಗುತ್ತಿದೆ. ಕಾರಣವೇನೆಂದರೇ ಚಿನ್ನದ ಪದಕ ಗೆದ್ದ ನಂತರ ಅರ್ಷದ್ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಭೇಟಿಯಾಗಿದ್ದ  ಎಂಬ ಆರೋಪಗಳಿವೆ.. 


ಇದನ್ನೂ ಓದಿ-ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ : ಮಗನ ಮದುವೆ ಯಾವಾಗ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ ತಂದೆ


ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಅರ್ಷದ್ ನದೀಮ್ ಪಾಕಿಸ್ತಾನಕ್ಕೆ ತೆರಳಿದ್ದರು. ಅಲ್ಲಿನ ಭಯೋತ್ಪಾದಕ ಸಂಘಟನೆಯ ಮುಖಂಡರ ಜತೆ ಸಭೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಸಭೆ ನಡೆದದ್ದು ಚಿನ್ನದ ಪದಕ ಗೆದ್ದ ನಂತರವೇ.. ಅಥವಾ ಅದಕ್ಕೂ ಮುನ್ನವೇ ಎಂಬ ವಿಚಾರದಲ್ಲಿ ಸ್ಪಷ್ಟತೆ ಬರಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅರ್ಷದ್ ಮೊಹಮ್ಮದ್ ಹಾರಿಸ್ ದಾರ್ ಎಂಬ ಭಯೋತ್ಪಾದಕನನ್ನು ಭೇಟಿಯಾಗಿರುವುದು ಕಂಡುಬಂದಿದೆ. ಹ್ಯಾರಿಸ್ ದಾರ್ ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ರಾಜಕೀಯ ಮುಂಭಾಗವಾದ ಮಿಲಿ ಮುಸ್ಲಿಂ ಲೀಗ್ (ಎಂಎಂಎಲ್) ನ ಜಂಟಿ ಕಾರ್ಯದರ್ಶಿಯಾಗಿದ್ದಾರೆ.


ಮೈದಾನದ ಸಿಬ್ಬಂದಿಯೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ರಾಹುಲ್‌ ದ್ರಾವಿಡ್‌..! "ಸರ್‌, ನಿಮಗೊಂದು ಸಲಾಮ್‌" ಎಂದ ಅಭಿಮಾನಿಗಳು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ