List of Pakistan players who played cricket for India: ಭಾರತ ಮತ್ತು ಪಾಕಿಸ್ತಾನ ವಿಭಜನೆಯ ನಂತರ ಈ ಎರಡೂ ದೇಶಗಳ ನಡುವಿನ ಸ್ಪರ್ಧೆ ಅನೇಕ ವಿಷಯಗಳಲ್ಲಿ ಗೋಚರಿಸಿದೆ, ಇನ್ನು ನಾಳೆ ಭಾರತ ತನ್ನ 77ನೇ ವರ್ಷದ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿಕೊಂಡರೆ, ಪಾಕಿಸ್ತಾನ ಇಂದು ಆಚರಣೆಯಲ್ಲಿ ತೊಡಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಉಭಯ ದೇಶಗಳ ಕುರಿತಾದ ವಿಶೇಷ ವರಿದಿಯೊಂದನ್ನು ನಿಮ್ಮ ಮುಂದಿಡಲಿದ್ದೇವೆ,


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ರೇಜ್ ವಿಪರೀತವಾಗಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಇದೆ ಎಂದರೆ ಅದೊಂದು ಐತಿಹಾಸಿಕ ಕ್ಷಣದಂತೆ ಭಾಸವಾಗುವುದು ಖಚಿತ. ಆದರೆ ನಿಮಗೆ ತಿಳಿದಿಲ್ಲದ ಸತ್ಯ ಸಂಗತಿಯನ್ನು ನಾವಿಂದು ತಿಳಿಸಲಿದ್ದೇವೆ. ಮೂವರು ಆಟಗಾರರು ಭಾರತ ಮತ್ತು ಪಾಕಿಸ್ತಾನದ ಪರವಾಗಿ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಅವರು ಯಾರೆಂದು ತಿಳಿಯೋಣ ಬನ್ನಿ.


 ಇದನ್ನೂ ಓದಿ: 19 ಎಸೆತ… 110 ರನ್! ಕ್ರಿಸ್ ಗೇಲ್ ‘ದೈತ್ಯ’ ವಿಶ್ವದಾಖಲೆ ಮುರಿದೇಬಿಟ್ಟ 19ರ ಹರೆಯದ ಈ ಕ್ರಿಕೆಟಿಗ


ಅಬ್ದುಲ್ ಹಫೀಜ್ ಕರ್ದಾರ್:


"ಪಾಕಿಸ್ತಾನ ಕ್ರಿಕೆಟ್‌ನ ಪಿತಾಮಹ" ಎಂದು ಕರೆಯಲ್ಪಡುವ ಅಬ್ದುಲ್ ಹಫೀಜ್ ಕರ್ದಾರ್ ಈ ಪಟ್ಟಿಯಲ್ಲಿರುವ ಮೊದಲ ಆಟಗಾರ. ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಪಾಕಿಸ್ತಾನ ಮತ್ತು ಭಾರತ ಎರಡನ್ನೂ ಪ್ರತಿನಿಧಿಸಿದ ಆಟಗಾರರಲ್ಲಿ ಇವರೂ ಒಬ್ಬರು. ಪಾಕಿಸ್ತಾನ ತಂಡದ ಮೊದಲ ನಾಯಕರಾಗಿದ್ದ ಅವರು, ದೇಶದ ಸ್ವಾತಂತ್ರ್ಯಕ್ಕೂ ಮುನ್ನ ಭಾರತೀಯ ತಂಡದ ಸದಸ್ಯರಾಗಿ ಆಡಿದರು. ಆ ಬಳಿಕ ಮತ್ತೆ ಪಾಕಿಸ್ತಾನವನ್ನು ಪ್ರತಿನಿಧಿಸಲು ಮುಂದಾದರು. ಪಾಕಿಸ್ತಾನ ಇತಿಹಾಸದ ಅತ್ಯುತ್ತಮ ಎಡಗೈ ಸ್ಪಿನ್ನರ್‌’ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಕರ್ದಾರ್ ಬ್ಯಾಟಿಂಗ್ ಕೂಡ ಅಷ್ಟೇ ಅದ್ಭುತವಾಗಿತ್ತು. ಪಾಕಿಸ್ತಾನಕ್ಕೆ ತೆರಳುವ ಮೊದಲು ಭಾರತಕ್ಕಾಗಿ ಮೂರು ಟೆಸ್ಟ್‌ಗಳನ್ನು ಆಡಿದ್ದರು.


ಅಮೀರ್ ಇಲಾಹಿ:


ಅಮೀರ್ ಇಲಾಹಿ ಭಾರತದ (ಆಸ್ಟ್ರೇಲಿಯಾ ವಿರುದ್ಧ 1947 ರಲ್ಲಿ ಸಿಡ್ನಿಯಲ್ಲಿ) ಪರ ಒಮ್ಮೆ ಟೆಸ್ಟ್ ಆಡಿದ್ದರೆ, ಐದು ಬಾರಿ ಪಾಕಿಸ್ತಾನಕ್ಕಾಗಿ ಆಡಿದ್ದರು. ಎಲಾಹಿ ಮೊದಲು ಮಧ್ಯಮ-ವೇಗದ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಅದರಿಂದಲೇ ಅವರು ಹೆಚ್ಚು ಪ್ರಸಿದ್ಧರಾಗಿದ್ದರು.


 ಇದನ್ನೂ ಓದಿ: ODI ಕ್ರಿಕೆಟ್’ನಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಆಗದ ಭಾರತೀಯ ಕ್ರಿಕೆಟಿಗ ಯಾರು?


ಗುಲ್ ಮೊಹಮ್ಮದ್:


ಗುಲ್ ಮೊಹಮ್ಮದ್ ಒಬ್ಬ ಅದ್ಭುತ ಬ್ಯಾಟ್ಸ್‌ಮನ್, ಜೊತೆಗೆ ಉತ್ತಮ ಫೀಲ್ಡರ್ ಮತ್ತು ಬೌಲರ್. ಅವರ ಉತ್ತಮ ದೇಶೀಯ ಪ್ರದರ್ಶನದಿಂದಾಗಿ, 1946 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. ಗುಲ್ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಟೆಸ್ಟ್‌’ಗೆ ಪಾದಾರ್ಪಣೆ ಮಾಡಿದ್ದು, ಭಾರತದ ಪರ 8 ಟೆಸ್ಟ್‌’ಗಳನ್ನು ಆಡಿದ್ದಾರೆ. 1946 ರಿಂದ 1955 ರವರೆಗೆ ಅವರು ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.