ಕೊಹ್ಲಿ ಮತ್ತು ಬಾಬರ್ ನಡುವೆ ಶ್ರೇಷ್ಠ ಆಟಗಾರ ಯಾರು ? ಆಫ್ರಿದಿ ಹೇಳಿದ್ದು ಹೀಗೆ..!
ವಿರಾಟ್ ಕೊಹ್ಲಿ ಜಗತ್ತು ಕಂಡಂತಹ ಶ್ರೇಷ್ಠ ಆಟಗಾರ, ಅವರು ತಮ್ಮ ಕ್ರಿಕೆಟ್ ನ ಅವಧಿಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಅವರ ಪ್ರದರ್ಶನದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ.ಇದೆ ಸಂದರ್ಭದಲ್ಲಿ ಪಾಕಿಸ್ತಾನದ ಬಾಬರ್ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.ಈಗ ಅವರು ನೀಡುತ್ತಿರುವ ನಿರಂತರ ಪ್ರದರ್ಶನವು ಈಗ ಅವರನ್ನು ಕೊಹ್ಲಿ ಜೊತೆ ಹೋಲಿಕೆ ಮಾಡುವಂತೆ ಮಾಡಿದೆ.
ನವದೆಹಲಿ: ವಿರಾಟ್ ಕೊಹ್ಲಿ ಜಗತ್ತು ಕಂಡಂತಹ ಶ್ರೇಷ್ಠ ಆಟಗಾರ, ಅವರು ತಮ್ಮ ಕ್ರಿಕೆಟ್ ನ ಅವಧಿಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಅವರ ಪ್ರದರ್ಶನದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ.ಇದೆ ಸಂದರ್ಭದಲ್ಲಿ ಪಾಕಿಸ್ತಾನದ ಬಾಬರ್ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.ಈಗ ಅವರು ನೀಡುತ್ತಿರುವ ನಿರಂತರ ಪ್ರದರ್ಶನವು ಈಗ ಅವರನ್ನು ಕೊಹ್ಲಿ ಜೊತೆ ಹೋಲಿಕೆ ಮಾಡುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಈಗ ಪಾಕಿಸ್ತಾನದ ಮಾಜಿ ಆಟಗಾರ ಶಾಹಿನ್ ಆಫ್ರಿದಿಗೆ ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿಯಲ್ಲಿ ಯಾರು ಶ್ರೇಷ್ಟರು? ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ, ಇದಕ್ಕೆ ಉತ್ತರಿಸಿದ ಅವರು ನಾನು ಇಬ್ಬರನ್ನೂ ಇಷ್ಟಪಡುತ್ತೇನೆ ಎಂದು ಹೇಳಿದರು.
ಇದನ್ನು ಓದಿ: Horoscope Today: ಈ ರಾಶಿಯವರಿಗೆ ಧನಲಾಭದ ಜೊತೆಗೆ ಯಶಸ್ಸು ಸಿಗಲಿದೆ
ಅಷ್ಟಕ್ಕೂ ಬಾಬರ್ ಅಜಂ ಹಾಗೂ ಕೊಹ್ಲಿ ನಡುವೆ ಹೋಲಿಕೆ ಮಾಡುವುದು ಸಮಂಜಸ ನಡೆಯಲ್ಲ, ಯಾಕಂದರೆ ಇಬ್ಬರೂ ಆಟಗಾರರ ನಡುವೆ ವಯಸ್ಸಿನ ಅಂತರವಿದೆ.ಕೊಹ್ಲಿಗೆ 33 ವರ್ಷ ವಯಸ್ಸಾಗಿದ್ದರೆ, ಬಾಬರ್ ಅಜಂ ಗೆ 27 ವರ್ಷ ವಯಸ್ಸಾಗಿದೆ, ಇತ್ತೀಚಿನ ದಿನಗಳಲ್ಲಿ ಬಾಬರ್ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದರೂ ಸಹ ಕೊಹ್ಲಿ ದಾಖಲೆಗೂ ಬಾಬರ್ ದಾಖಲೆಗೂ ಸಾಕಷ್ಟು ಅಂತರವಿದೆ.ಕೊಹ್ಲಿ ಒಟ್ಟಾರೆ 458 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೆ, ಬಾಬರ್ ಅಜಮ್ 202 ಪಂದ್ಯಗಳಲ್ಲಿ ಅರ್ಧಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ.
ಇದನ್ನು ಓದಿ: Covid-19: : ಓಮಿಕ್ರಾನ್‌ನ ಉಪ-ರೂಪಾಂತರಗಳಾದ BA.4, BA.5 ಎಷ್ಟು ಅಪಾಯಕಾರಿ?
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ, ಬಾಬರ್, ಆರಂಭಿಕ ಆಟಗಾರನಾಗಿ 103 ರನ್ ಗಳಿಸಿದ ನಂತರ, ನಾಯಕನಾಗಿ ಅವರು ವೇಗವಾಗಿ 1000 ರನ್ ಗಳಿಸಿದ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.ಕೇವಲ 13 ಇನಿಂಗ್ಸ್ ಗಳಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದಾರೆ, ಇನ್ನೊಂದೆಡೆಗೆ ವಿರಾಟ್ ಕೊಹ್ಲಿ ಈ ಸಾಧನೆ ಮಾಡಲು 17 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.