5 ವರ್ಷ ನಿಷೇಧ… 6 ತಿಂಗಳು ಜೈಲು… ಸ್ಟಾರ್ ಕ್ರಿಕೆಟಿಗನಿಗೆ ಭಾರೀ ಶಿಕ್ಷೆ! ಟಿ20 ವಿಶ್ವಕಪ್’ನಿಂದಲೂ ಬ್ಯಾನ್!!
T20 World Cup 2024: ಟಿ20 ವಿಶ್ವಕಪ್ ದೃಷ್ಟಿಯಿಂದ ಪಾಕಿಸ್ತಾನ ತಂಡ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಂಡಿದೆ. ಮೇ 10ರಿಂದ ಈ ಸರಣಿ ಆರಂಭವಾಗಲಿದೆ. ಆದರೆ ಮೊಹಮ್ಮದ್ ಅಮೀರ್ ಐರ್ಲೆಂಡ್ ಪ್ರವಾಸಕ್ಕೆ ವೀಸಾ ಪಡೆದಿಲ್ಲ.
T20 World Cup 2024: T20 ವಿಶ್ವಕಪ್ ಜೂನ್ 2 ರಿಂದ ಪ್ರಾರಂಭವಾಗಲಿದೆ. ಬಹುತೇಕ ಎಲ್ಲಾ ತಂಡಗಳು ಮೆಗಾ ಟೂರ್ನಿಗೆ ಸಜ್ಜಾಗಿವೆ. ಅದರಲ್ಲಿ ಪಾಕಿಸ್ತಾನ ತಂಡವೂ ಒಂದು. ಆದರೆ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡಕ್ಕೆ ಸ್ಟಾರ್ ವೇಗಿ ಮೊಹಮ್ಮದ್ ಆಮಿರ್ ರೂಪದಲ್ಲಿ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಅಮೀರ್ 2020 ರಲ್ಲಿ ನಿವೃತ್ತಿ ಘೋಷಿಸಿದ್ದರು, ಆದರೆ ಟಿ 20 ವಿಶ್ವಕಪ್’ಗೆ ಮೊದಲು ಯು-ಟರ್ನ್ ಹೊಡೆದು, ತಂಡಕ್ಕೆ ಮರಳಿದ್ದರು. ಇದರ ಹೊರತಾಗಿಯೂ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಜೈಲು ವಾಸ ಅನುಭವಿಸಿರುವ ಅಮೀರ್ ಟಿ20 ವಿಶ್ವಕಪ್’ನಿಂದ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: SIT ಅಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಮ್ & ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್: ಹೆಚ್ಡಿಕೆ
ಟಿ20 ವಿಶ್ವಕಪ್ ದೃಷ್ಟಿಯಿಂದ ಪಾಕಿಸ್ತಾನ ತಂಡ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಂಡಿದೆ. ಮೇ 10ರಿಂದ ಈ ಸರಣಿ ಆರಂಭವಾಗಲಿದೆ. ಆದರೆ ಮೊಹಮ್ಮದ್ ಅಮೀರ್ ಐರ್ಲೆಂಡ್ ಪ್ರವಾಸಕ್ಕೆ ವೀಸಾ ಪಡೆದಿಲ್ಲ. ಇಂಗ್ಲೆಂಡ್ ಪ್ರವಾಸ ಲಾರ್ಡ್ಸ್ ಟೆಸ್ಟ್ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಮೊಹಮ್ಮದ್ ಅಮೀರ್ 2010 ರಿಂದ 2015 ರವರೆಗೆ ನಿಷೇಧಕ್ಕೊಳಗಾಗಿದ್ದರು. ಅಷ್ಟೇ ಅಲ್ಲ, ಇದರಿಂದ ಸುಮಾರು 6 ತಿಂಗಳು ಜೈಲು ಸೇರಬೇಕಾಯಿತು. ಇದೇ ಕಾರಣಕ್ಕೆ ವೀಸಾ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: 108 ಸಿಬ್ಬಂದಿ ಮುಷ್ಕರದಿಂದ ಹಿಂದೆ ಸರಿದಿದ್ದಾರೆ: ಸಚಿವ ಗುಂಡೂರಾವ್
ಸಮಸ್ಯೆ ಬಗೆಹರಿಯುವುದೇ?
ಮೂಲಗಳ ಪ್ರಕಾರ, ಇನ್ನು 1 ಅಥವಾ 2 ದಿನಗಳಲ್ಲಿ ಅಮೀರ್ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಲಾಗುತ್ತಿದೆ. ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿದೆ. ಹೀಗಿರುವಾಗ ಅಲ್ಲಿಯೂ ಅಮೀರ್ ಗೆ ವೀಸಾ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಮೊಹಮ್ಮದ್ ಅಮೀರ್ ವೀಸಾ ಸಮಸ್ಯೆ ಬಗೆಹರಿಯದಿದ್ದರೆ, ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಡಬೇಕಾಗುತ್ತದೆ. ಮೆಗಾ ಈವೆಂಟ್’ಗಾಗಿ ಪಾಕಿಸ್ತಾನ ಇನ್ನೂ 15 ಸದಸ್ಯರ ತಂಡವನ್ನು ಪ್ರಕಟಿಸಿಲ್ಲ. ಈಗ ಅಮೀರ್ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.