ಏಷ್ಯಾಕಪ್ ಮಧ್ಯೆಯೇ ಜೂಜಾಡಿದ ಪಾಕಿಸ್ತಾನ ತಂಡದ ಇಬ್ಬರು ಪ್ರಮುಖ ಸದಸ್ಯರು! ಶಿಸ್ತುಕ್ರಮಕ್ಕೆ ICC ಹೆಜ್ಜೆ
Pakistan Cricket Team controversy: ಮಳೆ ಮತ್ತು ಕೆಟ್ಟ ಹವಾಮಾನದ ಕಾರಣ ಈ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಪೂರ್ಣಗೊಳಿಸಲಾಗದೆ, ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 11 ರಂದು ಮುಂದುವರೆಸಲಾಗುತ್ತಿದೆ
Controversy, India vs Pakistan: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್-4 ಸುತ್ತಿನ ಪಂದ್ಯ ಕೊಲಂಬೊದಲ್ಲಿ ಮುಂದುವರಿದಿದೆ. ಮಳೆ ಮತ್ತು ಕೆಟ್ಟ ಹವಾಮಾನದ ಕಾರಣ ಈ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಪೂರ್ಣಗೊಳಿಸಲಾಗದೆ, ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 11 ರಂದು ಮುಂದುವರೆಸಲಾಗುತ್ತಿದೆ. ಆದರೆ ಈ ಮಧ್ಯೆ ಪಾಕ್ ತಂಡಕ್ಕೆ ಸಂಬಂಧಿಸಿದ ಸುದ್ದಿಯೊಂದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: 1524 ದಿನಗಳ ನಂತರ ಟೀಂ ಇಂಡಿಯಾಗೆ ಎದುರಾಯ್ತು ಆ ಒಂದು ಸನ್ನಿವೇಶ…! ಹೆಚ್ಚಾಯ್ತು ಅಭಿಮಾನಿಗಳ ಎದೆಬಡಿತ
ಈ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನ ಅಂದರೆ ಸೆ.10ರಂದು (ಆಟ ನಿಲ್ಲಿಸುವವರೆಗೆ) 2 ವಿಕೆಟ್’ಗೆ 147 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅರ್ಧಶತಕ ಗಳಿಸಿದ್ದರು. ಸ್ಪೋಟಕ ಆರಂಭ ನೀಡಿದ್ದ ಆರಂಭಿಕರು ಮೊದಲ ವಿಕೆಟ್’ಗೆ 121 ರನ್’ಗಳ ಆರಂಭಿಕ ಜೊತೆಯಾಟವನ್ನು ಆಡಿದ್ದರು. ರೋಹಿತ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದ್ದರು. ಮತ್ತೊಂದೆಡೆ ಗಿಲ್ 52 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 58 ರನ್ ಸೇರಿಸಿದರು. ಇನ್ನು ವಿರಾಟ್ ಕೊಹ್ಲಿ (8 ರನ್) ಮತ್ತು ಕೆಎಲ್ ರಾಹುಲ್ (17 ರನ್) ಕ್ರೀಸ್’ನಲ್ಲಿದ್ದಾರೆ.
ಜೂಜಾಡಿದ ಪಾಕ್ ಸದಸ್ಯರು:
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಧ್ಯಮ ವ್ಯವಸ್ಥಾಪಕ ಉಮರ್ ಫಾರೂಕ್ ಕಲ್ಸನ್ ಮತ್ತು ಮಂಡಳಿಯ ಜನರಲ್ ಮ್ಯಾನೇಜರ್ (ಅಂತರರಾಷ್ಟ್ರೀಯ ಕ್ರಿಕೆಟ್) ಅದ್ನಾನ್ ಅಲಿ ಅವರು ಕೊಲಂಬೊದಲ್ಲಿನ ಕ್ಯಾಸಿನೊಗೆ ಭೇಟಿ ನೀಡಿ ವಿವಾದಕ್ಕೆ ಒಳಗಾಗಿದ್ದಾರೆ. ಇಬ್ಬರೂ ಏಷ್ಯಾಕಪ್’ನಲ್ಲಿ ಪಾಕಿಸ್ತಾನ ತಂಡದ ಜೊತೆಗಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಉಡುಗೊರೆ ನೀಡಿದ ಶ್ರೀಲಂಕಾ ಬ್ಯಾಟರ್! ಇದರ ಬೆಲೆ, ವಿಶೇಷತೆ ಏನು?
ಪಾಕಿಸ್ತಾನದ ಹಲವು ಕ್ರಿಕೆಟ್ ಅಭಿಮಾನಿಗಳು ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪಿಸಿಬಿ ಅಧಿಕಾರಿಗಳ ಅಪಕ್ವ ಮತ್ತು ಅಸಡ್ಡೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ವಿವಾದಕ್ಕೆ ಸ್ಪಷ್ಟನೆ ನೀಡಲು ಯತ್ನಿಸಿದ ಅಧಿಕಾರಿಗಳು, “ಊಟ ಮಾಡಲೆಂದು ಕ್ಯಾಸಿನೊಗೆ ಹೋಗಿದ್ದೆವು” ಎಂದು ಹೇಳಿದ್ದಾರೆ. ಇದೀಗ ಉನ್ನತ ಸಮಿತಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.