Pak Actors Congrats India Won T20 World Cup: ಭಾರತವು 2024ರ ಟಿ 20 ವಿಶ್ವಕಪ್‌’ನಲ್ಲಿ ಅದ್ಭುತ ಜಯ ಸಾಧಿಸಿದೆ. ಇಡೀ ವಿಶ್ವವೇ ಭಾರತ ತಂಡವನ್ನು ಹೊಗಳಿ ಅಭಿನಂದಿಸಿರುವುದು ತಿಳಿದಿರುವ ಸಂಗತಿ. ಪ್ರಧಾನಿ ಮೋದಿಯಿಂದ ಹಿಡಿದು ಸಿನಿಮಾ ನಟ-ನಟಿಯರು ಶುಭಕೋರಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನದ ನಟಿಯರು ಭಾರತದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶನಿ ಮಹಾರಾಜನಿಗೆ ಈ ರಾಶಿ ಅಂದ್ರೆ ಪಂಚಪ್ರಾಣ: ಜೀವಮಾನದಲ್ಲಿ ಯಾವತ್ತೂ ಇವರಿಗಿರದು ಶನಿಕಾಟ!


ಪಾಕಿಸ್ತಾನಿ ಪ್ರಸಿದ್ಧ ಉದ್ಯಮಿಗಳಲ್ಲಿ ನಟಿ ಮಾಯಾ ಅಲಿ ಕೂಡ ಒಬ್ಬರು. ತಮ್ಮ ಇನ್‌’ಸ್ಟಾಗ್ರಾಂ ಸ್ಟೋರಿಯಲ್ಲಿ, 2024 ರ ಟಿ 20 ವಿಶ್ವಕಪ್‌’ನಲ್ಲಿ ಅದ್ಭುತ ವಿಜಯ ಸಾಧಿಸಿದ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ. “ಟಿ20 ಚಾಂಪಿಯನ್ಸ್... ಭಾರತ ತಂಡಕ್ಕೆ ಅಭಿನಂದನೆಗಳು. ತುಂಬಾ ಚೆನ್ನಾಗಿ ಆಡಿದ್ದಾರೆ” ಎಂದು ಬರೆದಿದ್ದಾರೆ.


8 ವರ್ಷಗಳ ಹಿಂದೆ ಹಿಂದಿ ಚಲನಚಿತ್ರ 'ಸನಮ್ ತೇರಿ ಕಸಮ್' ಮೂಲಕ ಬಾಲಿವುಡ್‌’ಗೆ ಪಾದಾರ್ಪಣೆ ಮಾಡಿದ ಮಾವ್ರಾ ಹೊಕಾನೆ, ತಮ್ಮ ಇನ್‌’ಸ್ಟಾಗ್ರಾಂ ಸ್ಟೋರಿಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ 2024ರ ಟಿ 20 ವಿಶ್ವಕಪ್‌’ನಲ್ಲಿ ಅದ್ಭುತ ವಿಜಯಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫೋಟೋವನ್ನು ಹಂಚಿಕೊಂಡು, 'ಟೀಂ ಇಂಡಿಯಾ ಟಿ 20 ವಿಶ್ವಕಪ್‌’ನ ಅರ್ಹ ಚಾಂಪಿಯನ್' ಎಂದು ಬರೆದಿದ್ದಾರೆ.


ಇದನ್ನೂ ಓದಿ: ದುಡ್ಡನ್ನು ಅಯಸ್ಕಾಂತದಂತೆ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ: ಸೂರ್ಯನ ಬೆಳಕಿಲ್ಲದೆ, ಕಡಿಮೆ ನೀರಿನಲ್ಲಿ ಬೆಳೆಸಬಹುದಾದ ಗಿಡವಿದು


ಇನ್ನೊಂದೆಡೆ ಪಾಕಿಸ್ತಾನಿ ನಟ ಸಲ್ಮಾನ್ ಸಾಕಿಬ್ ಶೇಖ್ ಅಕಾ ಮಣಿ ಕೂಡ ತಮ್ಮ ಇನ್‌’ಸ್ಟಾಗ್ರಾಂ ಸ್ಟೋರಿಯಲ್ಲಿ 2024ರ ಟಿ 20 ವಿಶ್ವಕಪ್‌’ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಗೆಲುವಿನ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿ ಹಲವಾರು ಪೋಸ್ಟ್‌’ಗಳನ್ನು ಮಾಡಿದ್ದಾರೆ, ಅದರ ಕೊನೆಯಲ್ಲಿ ಅವರು ಅಭಿನಂದನಾ ಸಂದೇಶವನ್ನು ಸಹ ಬರೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್