ಅಬುದಾಬಿ: ಏಷ್ಯಾಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಯೊಬ್ಬ ಭಾರತದ ರಾಷ್ಟ್ರಗೀತೆ ಹಾಡುತ್ತಿರುವ ವೀಡಿಯೋ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆದಿಲ್ ತಾಜ್ ತಮ್ಮ ಕಡೆಯಿಂದ  ಉಭಯದೇಶಗಳ ನಡುವಿನ ಸಂಬಂಧ ವೃದ್ದಿಗೆ ಒಂದು ಸಣ್ಣ ಪ್ರಯತ್ನವೆಂದು ಹೇಳಿದ್ದಾರೆ.ಬಾಲಿವುಡ್ ಚಿತ್ರದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಮೊದಲು ಕೇಳಿದಾಗ ತಮಗೆ ರೋಮಾಂಚನವಾಗಿತ್ತು ಎಂದು ಅವರು ತಿಳಿಸಿದ್ದಾರೆ.


"ಭಾರತದ ರಾಷ್ಟ್ರಗೀತೆ ಪ್ರಾರಂಭವಾದ ತಕ್ಷಣ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ ಮಾತುಗಳು ನೆನಪಿಗೆ ಬಂದವು ಶಾಂತಿ ಪ್ರಕ್ರಿಯೆಗಾಗಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ ಎಂದು ಹೇಳಿದ್ದರು ಅದರ ಭಾಗವಾಗಿ ನನ್ನ ಕಡೆಯಿಂದ ಈ ಸಣ್ಣ ಪ್ರಯತ್ನ ಎಂದು ಅದಿಲ್ ತಾಜ್ ಎಎನ್ಐಗೆ ತಿಳಿಸಿದ್ದಾರೆ. ಅಲ್ಲದೆ ಸೂಪರ್ ಫೋರ್ ಘಟ್ಟದಲ್ಲಿ ಭಾರತ ಮತ್ತು ಪಾಕಿಸ್ತಾನದ ಧ್ವಜವನ್ನು ಒಟ್ಟಿಗೆ ಧರಿಸಲು ಯೋಚಿಸುತ್ತಿರುವುದಾಗಿ ತಿಳಿಸಿದರು. 


"ಕ್ರೀಡೆಗಳು ಒಂದನ್ನು ಒಟ್ಟುಗೂಡಿಸುತ್ತವೆ.ಎರಡೂ ದೇಶಗಳ ನಡುವೆ ನಿರಂತರ ಕ್ರಿಕೆಟ್  ಸರಣಿಯನ್ನು ನಾವು ಬಯಸುತ್ತೇವೆ, ಇದು ನನ್ನ ಪ್ರಕಾರ ಶಾಂತಿಯ ಕಡೆಗೆ ಸಕಾರಾತ್ಮಕ ಪಾತ್ರವನ್ನು ವಹಿಸುತ್ತದೆ" ಎಂದು ಅವರು ಹೇಳಿದರು.