WATCH: ಟೆಸ್ಟ್ ಕ್ರಿಕೆಟ್ ಕ್ಯಾಪ್ ದೊರೆತ ನಂತರ ಭಾವುಕರಾದ ಪಾಕ್ ನ ನಸೀಮ್ ಶಾ
ಗುರುವಾರ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಷಾ ಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದ ಸಂದರ್ಭದಲ್ಲಿ ಭಾವುಕರಾದ ಘಟನೆ ನಡೆದಿದೆ.
ನವದೆಹಲಿ: ಗುರುವಾರ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಷಾ ಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದ ಸಂದರ್ಭದಲ್ಲಿ ಭಾವುಕರಾದ ಘಟನೆ ನಡೆದಿದೆ.
ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರ ತಾಯಿ ಮೃತಪಟ್ಟಿದ್ದರೂ ಕೂಡ ಅವರು ತಂಡದ ಜೊತೆಗೆ ಉಳಿದಿದ್ದರು. ಅವರಿಗೆ ಪಾಕ್ ತಂಡದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಅವರು ಪಾಕಿಸ್ತಾನ ತಂಡ ಕ್ಯಾಪ್ ನ್ನು ನೀಡಿದರು.
ಇದಕ್ಕೂ ಮೊದಲು ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ ಅವರು ನಸೀಮ್ ಶಾ ಅವರನ್ನು ವಿರಾಟ್ ಕೊಹ್ಲಿ ಅವರಿಗೆ ಹೋಲಿಸಿದ್ದರು. ವಿರಾಟ್ ಕೊಹ್ಲಿ ತಮ್ಮ ತಂದೆ ಮೃತರಾದ ಒಂದು ದಿನದ ಬಳಿಕ ಆಟಕ್ಕೆ ಮರಳಿದ್ದರು.