ನವದೆಹಲಿ: ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ. ದೆಹಲಿಯ ಅಮಿತ್ ಶಾ ನಿವಾಸಕ್ಕೆ ತೆರಳಿ ಪಾಂಡ್ಯ ಬ್ರದರ್ಸ್ ಮಾರುಕತೆ ನಡೆಸಿದ್ದಾರೆ.  


COMMERCIAL BREAK
SCROLL TO CONTINUE READING

ಭಾರತ ತಂಡದ ಪೂರ್ಣಪ್ರಮಾಣದ ಟಿ-20 ನಾಯಕನಾಗಿ ಆಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಮಿತ್ ಶಾರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮನ್ನು ಕರೆಸಿ ಮಾತುಕತೆ ನಡೆಸಿದ ಗೃಹಸಚಿವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಗೌರವ, ಸಂತೋಷ ನೀಡಿದೆ’ ಎಂದು ಹಾರ್ದಿಕ್ ಪಾಂಡ್ಯ ಕ್ಯಾಪ್ಶನ್ ನಿಡಿದ್ದಾರೆ.


ಇದನ್ನೂ ಓದಿ: Team India : ರಿಷಬ್ ಪಂತ್ ಬದಲಿಗೆ ಈ ಆಟಗಾರನೆ ಟೆಸ್ಟ್ ಪಂದ್ಯದ ವಿಕೆಟ್ ಕೀಪರ್!


Rishabh Pant Accident : ಬಸ್ ಚಾಲಕ - ಕಂಡಕ್ಟರ್ ರಿಷಬ್ ಪಂತ್ ಪ್ರಾಣ ಉಳಿಸಿದ್ದು ಹೀಗೆ..!


ಪಾಂಡ್ಯ ಬ್ರದರ್ಸ್ ಜೊತೆಗೆ ಆತ್ಮೀಯವಾಗಿ ಮಾತನಾಡಿರುವ ಅಮತ್ ಶಾ ಕುಶಲೋಪರಿ ವಿಚಾರಿಸಿದ್ದಾರೆ. ಈ ಫೋಟೋಗನ್ನು ಕೆಲವು ದಿನಗಳ ಹಿಂದೆಯೇ ತೆಗೆದಿದ್ದು, ಈಗ ಪೋಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್ ಪಾಂಡ್ಯ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿದ್ದರು. ಪ್ರವಾಸಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಟೀಂ ಇಂಡಿಯಾ  3 ಪಂದ್ಯಗಳ ಟಿ-20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3ರಿಂದ ಟಿ-20 ಸರಣಿ ಆರಂಭಗೊಳ್ಳಲಿದ್ದು, ಜ.10ರಿಂದ ಏಕದಿನ ಸರಣಿ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.