ICC T20 World Cup 2024: ಭಾರತವು ಈ ವರ್ಷದ ಅಕ್ಟೋಬರ್ 5 ರಿಂದ ODI ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. 10 ತಂಡಗಳು ಭಾಗವಹಿಸಲಿರುವ ಈ ಐಸಿಸಿ ಟೂರ್ನಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಭಾರತ ತಂಡವು ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ ಮತ್ತು ಈ ಮಧ್ಯೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ದೊಡ್ಡ ಘೋಷಣೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 49 ವರ್ಷಗಳಲ್ಲಿ ಇದೇ ಮೊದಲು… ಕುಲದೀಪ್-ಜಡೇಜಾ ಜೋಡಿ ಮೋಡಿಗೆ ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಾಣ!


ಈ ಸುದ್ದಿ ತಿಳಿದರೆ ಕ್ರಿಕೆಟ್ ಅಭಿಮಾನಿಗಳು ನಿಜಕ್ಕೂ ಆಶ್ಚರ್ಯಪಡುವುದು ಖಚಿತ. ಊಹೆಗೂ ಸಿಗದ ಒಂದು ದೇಶ ಈ ಬಾರಿ ಟಿ20 ವಿಶ್ವಕಪ್‌ ಗೆ ಅರ್ಹತೆ ಗಳಿಸಿದೆ. ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದೆ. ಈ ದೇಶವು ಪಪುವಾ ನ್ಯೂಗಿನಿಯಾಗಿದ್ದು, ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಪೂರ್ವ ಏಷ್ಯಾ ಪೆಸಿಫಿಕ್ ಕ್ವಾಲಿಫೈಯರ್‌ ನಿಂದ ಟಿ20 ವಿಶ್ವಕಪ್‌ ಗೆ ಅರ್ಹತೆ ಪಡೆದ ಏಕೈಕ ತಂಡವಾಗಿದೆ.


ಪಪುವಾ ನ್ಯೂಗಿನಿಯಾ ಐಸಿಸಿ ಟೂರ್ನಿಗೆ ಅರ್ಹತೆ ಪಡೆದ 15ನೇ ತಂಡ ಎನಿಸಿಕೊಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಫಿಲಿಪ್ಪೀನ್ಸ್ ತಂಡವನ್ನು 100 ರನ್‌ಗಳಿಂದ ಸೋಲಿಸಿದ ಪಪುವಾ ನ್ಯೂಗಿನಿಯಾ ಈ ಸಾಧನೆ ಮಾಡಿದೆ. ಅಸ್ಸಾದ್ ವಾಲಾ ನಾಯಕತ್ವದ ತಂಡ ಪಪುವಾ ನ್ಯೂಗಿನಿಯಾ ಮೊದಲು ಬ್ಯಾಟಿಂಗ್‌ ಮಾಡಿ 6 ವಿಕೆಟ್‌ ನಷ್ಟಕ್ಕೆ 229 ರನ್ ಗಳಿಸಿತು. ಆರಂಭಿಕರಾದ ಟೋನಿ ಉರಾ (61) ಮತ್ತು ನಾಯಕ ಅಸದ್ (59) 118 ರನ್‌ ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಇದಕ್ಕೆ ಉತ್ತರವಾಗಿ ಫಿಲಿಪ್ಪೀನ್ಸ್ ತಂಡ 129 ರನ್‌ ಗಳಿಗೆ ಆಲೌಟ್ ಆಯಿತು. ಟೋನಿ ಪಂದ್ಯದ ಆಟಗಾರನಾಗಿ ಆಯ್ಕೆಯಾದರು.


ಇದನ್ನೂ ಓದಿ: “ಇದು ಟೀಂ ಇಂಡಿಯಾ ಅಲ್ಲ.. ಮುಂಬೈ ತಂಡ”! ಈ ಕ್ರಿಕೆಟಿಗನಿಗೆ ಅವಕಾಶ ನೀಡದಕ್ಕೆ ಟ್ರೋಲ್’ಗೆ ಗುರಿಯಾದ ರೋಹಿತ್


ಐದು ಪಂದ್ಯಗಳ ಬಳಿಕ ಪಪುವಾ ನ್ಯೂಗಿನಿಯಾ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗ ಜಪಾನ್ ವಿರುದ್ಧ ಶನಿವಾರ ನಡೆಯಲಿರುವ ಅವರ ಪಂದ್ಯ ಕೇವಲ ಔಪಚಾರಿಕವಾಗಿ ಮಾರ್ಪಟ್ಟಿದೆ. ಇಪ್ಪತ್ತು ತಂಡಗಳ ಈ ಟೂರ್ನಿಯಲ್ಲಿ ಇನ್ನೂ ಐದು ತಂಡಗಳನ್ನು ಆಯ್ಕೆ ಮಾಡಬೇಕಿದೆ. ಬರ್ಮುಡಾದಲ್ಲಿ ನಡೆಯಲಿರುವ ಯುಎಸ್ ಅರ್ಹತಾ ಪಂದ್ಯಗಳಿಂದ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ, ನೇಪಾಳ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಷ್ಯಾ ಮತ್ತು ಆಫ್ರಿಕಾ ಅರ್ಹತಾ ಪಂದ್ಯಗಳಿಂದ 2-2 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ