Paris Olympic Games 2024: ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದು ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾ
ವೆಲಿನ್ ಹೊರತಾಗಿ ಪುರುಷರ ಹಾಕಿ ತಂಡವೂ ಗುರುವಾರ ಭಾರತಕ್ಕೆ ಪದಕ ತಂದುಕೊಟ್ಟಿತು. ಸ್ಪೇನ್ ತಂಡವನ್ನು ಸೋಲಿಸಿ ಹಾಕಿ ತಂಡ ಕಂಚು ಗೆದ್ದಿತು. ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಮೂರು ಪದಕಗಳನ್ನು ಗೆದ್ದಿತ್ತು.
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ವಿಶೇಷ ಪಟ್ಟಿಯಲ್ಲಿ ನೀರಜ್ ಹೆಸರು ಸೇರ್ಪಡೆ
ನೀರಜ್ ಅವರ ಆರು ಪ್ರಯತ್ನಗಳಲ್ಲಿ ಎರಡನೇ ಎಸೆತ ಅತ್ಯುತ್ತಮವಾಗಿತ್ತು. ಅವರ ಮೊದಲ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳು ಫೌಲ್ ಆದವು. ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ನಾಲ್ಕನೇ ಆಟಗಾರರಾದರು. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಕುಸ್ತಿಯಲ್ಲಿ ತಲಾ 2, ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಮತ್ತು ಶೂಟಿಂಗ್‌ನಲ್ಲಿ ಮನು ಭಾಕರ್ ತಲಾ 2 ಪದಕ ಗೆದ್ದಿದ್ದಾರೆ.
ಎಚ್ಡಿಕೆ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರಾತಿಗೆ ರಾಜ್ಯಪಾಲರಿಗೆ ಲೋಕಾಯುಕ್ತ ಮನವಿ
ಪಾಕ್ ಆಟಗಾರನ ದಾಖಲೆ
ಮತ್ತೊಂದೆಡೆ ಪಾಕಿಸ್ತಾನದ ಅರ್ಷದ್ ನದೀಮ್ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಅಷ್ಟೇ ಅಲ್ಲದೆ ನದೀಮ್ ಒಲಿಂಪಿಕ್ ದಾಖಲೆಯನ್ನೂ ನಿರ್ಮಿಸಿದ್ದಾರೆ
ಭಾರತದ ಖಾತೆಯಲ್ಲಿ ಐದನೇ ಪದಕ
ಜಾವೆಲಿನ್ ಹೊರತಾಗಿ ಪುರುಷರ ಹಾಕಿ ತಂಡವೂ ಗುರುವಾರ ಭಾರತಕ್ಕೆ ಪದಕ ತಂದುಕೊಟ್ಟಿತು. ಸ್ಪೇನ್ ತಂಡವನ್ನು ಸೋಲಿಸಿ ಹಾಕಿ ತಂಡ ಕಂಚು ಗೆದ್ದಿತು. ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಮೂರು ಪದಕಗಳನ್ನು ಗೆದ್ದಿತ್ತು. ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದರ ನಂತರ, ಅವರು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚು ಗೆದ್ದರು. ಅವರ ನಂತರ ಸ್ವಪ್ನಿಲ್ ಕುಸಾಲೆ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.