IPL 2023: ಪಾಕಿಸ್ತಾನದ ನಂತರ ಈ ದೇಶಗಳ ಆಟಗಾರರಿಗೆ ಐಪಿಎಲ್’ನಿಂದ ಶಾಶ್ವತ ನಿಷೇಧ!
Indian Premier League 2023: ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಆಟಗಾರರನ್ನು ಮುಂದಿನ ಋತುವಿನ ಮೊದಲು ಐಪಿಎಲ್’ನಲ್ಲಿ ಆಡದಂತೆ ನಿಷೇಧಿಸಬಹುದು. ಇನ್ನು ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡದ ಆಟಗಾರರು ಐಪಿಎಲ್’ನಲ್ಲಿ ತಡವಾಗಿ ತಮ್ಮ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.
Indian Premier League 2023: ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ 2023 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬಾರಿಯ ಐಪಿಎಲ್’ನಲ್ಲಿ ಹಲವು ಬದಲಾವಣೆಗಳು ಕಾಣಲಿವೆ. ಈ ನಡುವೆ ಐಪಿಎಲ್ ಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ. ಐಪಿಎಲ್ 2024 ರ ಮೊದಲು ಬಿಸಿಸಿಐ ಎರಡು ದೇಶಗಳ ಆಟಗಾರರ ವಿರುದ್ಧ ದೊಡ್ಡ ಕ್ರಮ ಕೈಗೊಳ್ಳಬಹುದು. ಈ ಆಟಗಾರರನ್ನು ಮುಂದಿನ ಋತುವಿನಲ್ಲಿ ಆಡದಂತೆ ನಿಷೇಧಿಸಬಹುದು.
ಇದನ್ನೂ ಓದಿ: BCCI ವಾರ್ಷಿಕ ಒಪ್ಪಂದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಶಾಶ್ವತ ಅಂತ್ಯ ಕಂಡಿತು ಈ ಸ್ಟಾರ್ ಆಟಗಾರನ ವೃತ್ತಿಜೀವನ!
ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಆಟಗಾರರನ್ನು ಮುಂದಿನ ಋತುವಿನ ಮೊದಲು ಐಪಿಎಲ್’ನಲ್ಲಿ ಆಡದಂತೆ ನಿಷೇಧಿಸಬಹುದು. ಇನ್ನು ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡದ ಆಟಗಾರರು ಐಪಿಎಲ್’ನಲ್ಲಿ ತಡವಾಗಿ ತಮ್ಮ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಬಿಸಿಸಿಐ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದು, ಈ ದೇಶಗಳ ಆಟಗಾರರ ವಿರುದ್ಧ ದೊಡ್ಡ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ ಆಟಗಾರರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಿಲ್ಲ. ಇದೇ ಕಾರಣಕ್ಕೆ ಶಕೀಬ್ ಅಲ್ ಹಸನ್, ಲಿಟನ್ ದಾಸ್ ಮತ್ತು ಮುಶ್ಫಿಕರ್ ರಹೀಮ್ ಅವರಿಗೆ ಏಪ್ರಿಲ್ 9 ರಿಂದ ಮೇ 5 ರವರೆಗೆ ಮತ್ತು ನಂತರ ಮೇ 15 ರಿಂದ ಆಡಲು ಅವಕಾಶ ನೀಡಲಾಗಿದೆ. ಮತ್ತೊಂದೆಡೆ, ಶ್ರೀಲಂಕಾ ಆಟಗಾರರ ಬಗ್ಗೆ ಮಾತನಾಡುವುದಾದರೆ, ಅವರು ಒಂದು ವಾರದ ನಂತರ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.
BCCI ಅಧಿಕಾರಿಯೊಬ್ಬರು InsideSport ಗೆ ನೀಡಿದ ಮಾಹಿತಿ ಪ್ರಕಾರ, "ಟೂರ್ನಮೆಂಟ್’ನಲ್ಲಿ ಅರೆಕಾಲಿಕ ಆಡಲು ಕೆಲವು ದೇಶಗಳ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಫ್ರಾಂಚೈಸಿಗಳು ಸಂದೇಹ ವ್ಯಕ್ತಪಡಿಸುತ್ತಾರೆ. ಬಿಸಿಸಿಐ ಮಾತ್ರವಲ್ಲದೆ, ಐಪಿಎಲ್ ಫ್ರಾಂಚೈಸಿಗಳು ಕೂಡ ತಮ್ಮ ಆಟಗಾರರು ಲಭ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023 ಸೀಸನ್ 16 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಮುಂಬರುವ ಋತುವಿನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ದೇಶದ 12 ಕ್ರೀಡಾಂಗಣಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ಋತುವಿನ ಮೊದಲ ಪಂದ್ಯ ಮಾರ್ಚ್ 31 ರಂದು ನಡೆಯಲಿದ್ದು, ಇದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಲೀಗ್ ಹಂತದ ಕೊನೆಯ ಪಂದ್ಯ ಮೇ 21 ರಂದು ನಡೆಯಲಿದ್ದು, ಅಂತಿಮ ಪಂದ್ಯ ಮೇ 28 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ: IPL 2023ರಲ್ಲಿ ಮತ್ತೆ ಆಡುತ್ತಾರೆ ಜಸ್ಪ್ರೀತ್ ಬುಮ್ರಾ? ಈ ವಿಡಿಯೋ ನೀಡುತ್ತಿದೆ ಮಹಾ ಸುಳಿವು..!
ಈ ಬಾರಿ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. IPL-2023ರ 10 ತಂಡಗಳನ್ನು A ಮತ್ತು B ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿವೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಎರಡನೇ ಗುಂಪಿಗೆ ಸೇರ್ಪಡೆಗೊಂಡಿವೆ. ಗುಂಪಿನ ನಾಲ್ಕು ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತವೆ. 18 ಪಂದ್ಯಗಳು ಡಬಲ್ ಹೆಡರ್ ಪಂದ್ಯಗಳಾಗಿವೆ. ಒಂದು ತಂಡವು 14 ಪಂದ್ಯಗಳನ್ನು ಆಡುತ್ತದೆ. 7 ತವರಿನಲ್ಲಿ ಮತ್ತು 7 ಎದುರಾಳಿ ತಂಡದ ತವರಿನಲ್ಲಿ. 10 ತಂಡಗಳ ನಡುವೆ 70 ಲೀಗ್ ಹಂತದ ಪಂದ್ಯಗಳು ನಡೆಯಲಿವೆ. 4 ಪಂದ್ಯಗಳು ಪ್ಲೇ ಆಫ್ ಆಗಲಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.