Rohit Sharma Statement: ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್-2023ರ ಸೂಪರ್-4 ಸುತ್ತಿಗೆ ಪ್ರವೇಶಿಸಿದೆ. ಕಳೆದ ದಿನ ನಡೆದ ಎ ಗುಂಪಿನ ಪಂದ್ಯದಲ್ಲಿ ನೇಪಾಳವನ್ನು 10 ವಿಕೆಟ್‌’ಗಳಿಂದ ಡಿಎಲ್‌ಎಸ್ ಅಡಿಯಲ್ಲಿ ಸೋಲಿಸಿತು. ಆದರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರೋಹಿತ್ ಗೆಲುವಿನ ಹೊರತಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 59 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌’ಗಳ ನೆರವಿನಿಂದ 74 ರನ್‌’ಗಳ ಅಜೇಯ ಇನ್ನಿಂಗ್ಸ್‌ಗಳನ್ನು ರೋಹಿತ್ ಆಡಿದ್ದರು ಎಂಬುದು ಇಲ್ಲಿ ಗಮನಾರ್ಹ ಅಂಶ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಫ್ಯಾನ್ಸ್ “ಕೊಹ್ಲಿ…ಕೊಹ್ಲಿ” ಎನ್ನುತ್ತಿದ್ದಂತೆ ಮಧ್ಯದ ಬೆರಳು ತೋರಿಸಿದ ಗಂಭೀರ್! ವಿಡಿಯೋ ನೋಡಿ


ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ನೇಪಾಳದ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟ ಪ್ರದರ್ಶಿಸಿ ಭಾರತದ ಅತ್ಯುತ್ತಮ ಬೌಲರ್‌’ಗಳ ಮುಂದೆ 48.2 ಓವರ್‌ಗಳಲ್ಲಿ 230 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಸಿಫ್ ಶೇಖ್ 97 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿದರು. ಇವರಲ್ಲದೆ ಸೋಂಪಾಲ್ ಕಾಮಿ 48 ರನ್ ಕೊಡುಗೆ ನೀಡಿದರು. ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು. ಇನ್ನು ಟೀಂ ಇಂಡಿಯಾ ಪರ ಬ್ಯಾಟ್ ಬೀಸಿದ ನಾಯಕ ರೋಹಿತ್ ಮತ್ತು ಆರಂಭಿಕ ಶುಭ್ಮನ್ ಗಿಲ್ ಯಾವುದೇ ವಿಕೆಟ್ ನಷ್ಟವಿಲ್ಲದೆ 147 ರನ್ ಗಳಿಸಿದರು. ಇದಾದ ಬಳಿಕ ಮಳೆ ಅಡ್ಡಿಪಡಿಸಿದ್ದು, ಪಂದ್ಯವಾಡಲು ಸಾಧ್ಯವಾಗಲಿಲ್ಲ. DLS ಅಡಿಯಲ್ಲಿ ಭಾರತ 10 ವಿಕೆಟ್‌’ಗಳಿಂದ ಗೆದ್ದಿತು. ನಾಯಕ ರೋಹಿತ್ 74 ರನ್ ಮತ್ತು ಗಿಲ್ 67 ರನ್ ಗಳಿಸಿ ಅಜೇಯರಾಗಿ ಮರಳಿದರು.


ರೋಹಿತ್ ಅಸಮಾಧಾನ:


ಗೆಲುವಿನ ನಂತರ ನಾಯಕ ರೋಹಿತ್ ಅವರಿಗೆ ಇನ್ನಿಂಗ್ಸ್‌ನಿಂದ ಸಂತೋಷವಾಗಿದೆಯೇ ಎಂದು ಪ್ರಶ್ನೆ ಕೇಳಿದಾಗ, “ನಿಜವಾಗಿಯೂ ಇಲ್ಲ. ಆರಂಭದಲ್ಲಿ ಸ್ವಲ್ಪ ಆತಂಕವಿತ್ತು ಆದರೆ ತಂಡವನ್ನು ಸೂಪರ್-4 ಗೆ ಕೊಂಡೊಯ್ಯುವುದು ನನ್ನ ಪ್ರಯತ್ನವಾಗಿತ್ತು. ಏಷ್ಯಾಕಪ್ ಕೇವಲ ಎರಡು ಪಂದ್ಯಗಳಾಗಿರುವುದರಿಂದ ನಮಗೆ ಉತ್ತಮ ಚಿತ್ರಣವನ್ನು ನೀಡುವುದಿಲ್ಲ. ಅದೃಷ್ಟಕ್ಕೆ ನಮಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಈ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು” ಎಂದಿದ್ದಾರೆ.


ಇದನ್ನೂ ಓದಿ: ಸೆ.12 ರವರೆಗೆ ಈ ಭಾಗಗಳಲ್ಲಿ ನಿರಂತರ ವರ್ಷಧಾರೆ: ಗುಡುಗು-ಸಿಡಿಲು ಸಹಿತ ಭಾರೀ ಗಾಳಿ ಮುನ್ಸೂಚನೆ


“ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಅನೇಕ ಆಟಗಾರರು ಗಾಯದಿಂದ ಚೇತರಿಸಿಕೊಂಡು ಹಿಂತಿರುಗುತ್ತಿದ್ದಾರೆ ಮತ್ತು ಅವರು ಲಯಕ್ಕೆ ಮರಳಲು ಸಮಯ ಬೇಕಾಗುತ್ತದೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿ ನಮ್ಮನ್ನು ಆ ಸ್ಕೋರ್‌’ಗೆ ತಲುಪಿಸಿದರು. ಇಂದು ಬೌಲಿಂಗ್ ಉತ್ತಮವಾಗಿತ್ತು ಆದರೆ ಫೀಲ್ಡಿಂಗ್ ಕೆಟ್ಟದಾಗಿತ್ತು, ನಾವು ಅದನ್ನು ಸುಧಾರಿಸಬೇಕಾಗಿದೆ” ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ